TVS iQube: ಈ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್‌ಗೆ ತೀವ್ರ ಬೇಡಿಕೆ, 1338% ಹೆಚ್ಚಿದ ಮಾರಾಟ

TVS iQube: ಭಾರತದಲ್ಲಿ ದ್ವಿಚಕ್ರ ವಾಹನಗಳು ಎಂದೊಡನೆ ಥಟ್ ಅಂತ ಹೊಳೆಯುವುದು ಹೋಂಡಾ ಆಕ್ಟಿವಾ ಅಥವಾ ಟಿವಿಎಸ್ ಜೂಪಿಟರ್. ಆದರೆ, ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಸ್ಕೂಟರ್ ಎಂದರೆ ಅದು ಟಿವಿಎಸ್ ಐಕ್ಯೂಬ್.  ವರ್ಷ ನವೆಂಬರ್‌ನಲ್ಲಿ ಕೇವಲ 699 ಯುನಿಟ್ ಮಾತ್ರ ಮಾರಾಟವಾಗಿತ್ತು. ಆದರೆ,  ಈ ವರ್ಷ  ನವೆಂಬರ್ 2022 ರಲ್ಲಿ ಒಟ್ಟು 10,056 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದ್ದು, ಇದರ ಮಾರಾಟದಲ್ಲಿ 1338% ಹೆಚ್ಚು ಮಾರಾಟವಾಗಿದೆ.

Written by - Yashaswini V | Last Updated : Dec 20, 2022, 09:47 AM IST
  • ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಎಂದರೆ ಹೋಂಡಾ ಆಕ್ಟಿವಾ.
  • ಭಾರತದಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಬೇರೆ ದೊಡ್ಡ ದೊಡ್ಡ ಕಂಪನಿಗಳು ಕೂಡ ಇದರ ಹತ್ತಿರವೂ ಸುಳಿಯಲಾರವು.
  • ಕಳೆದ ತಿಂಗಳೂ ಕೂಡ ಹೋಂಡಾ ಕಂಪನಿಯು ದಾಖಲೆಯ ಮಟ್ಟದಲ್ಲಿ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಆದರೆ...
TVS iQube: ಈ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್‌ಗೆ ತೀವ್ರ ಬೇಡಿಕೆ, 1338% ಹೆಚ್ಚಿದ ಮಾರಾಟ title=
Best Electric Scooter

TVS iQube: ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಎಂದರೆ ಹೋಂಡಾ ಆಕ್ಟಿವಾ. ಭಾರತದಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಬೇರೆ ದೊಡ್ಡ ದೊಡ್ಡ ಕಂಪನಿಗಳು ಕೂಡ ಇದರ ಹತ್ತಿರವೂ ಸುಳಿಯಲಾರವು. ಕಳೆದ ತಿಂಗಳೂ ಕೂಡ ಹೋಂಡಾ ಕಂಪನಿಯು ದಾಖಲೆಯ ಮಟ್ಟದಲ್ಲಿ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಆದರೆ, ಟಾಪ್-10 ಮಾರಾಟವಾದ ಸ್ಕೂಟರ್‌ಗಳ ಪಟ್ಟಿಯಲ್ಲಿ ಇನ್ನೊಂದು ಕಂಪನಿಯ ಸ್ಕೂಟರ್ ಕೂಡ ಭಾರೀ ಜಿಗಿತವನ್ನು ಕಂಡಿದೆ. ಅದೇ,  ಟಿವಿಎಸ್ ಐಕ್ಯೂಬ್. ಈ ಎಲೆಕ್ಟ್ರಿಕ್ ಸ್ಕೂಟರ್ ಪ್ರಸ್ತುತ ಭಾರೀ ಬೇಡಿಕೆಯಿರುವ ಎಲೆಕ್ಟ್ರಿಕ್  ಸ್ಕೂಟರ್ ಆಗಿದೆ. 2021ರ ನವೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷ ನವೆಂಬರ್‌ನಲ್ಲಿ ಈ ಸ್ಕೂಟರ್ 1000 ಪ್ರತಿಶತಕ್ಕಿಂತ ಹೆಚ್ಚು ಮಾರಾಟವಾಗಿದೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ. 

ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ 1338% ಹೆಚ್ಚಳ:
ಟಿವಿಎಸ್ ಕಂಪನಿಯ ಮೂಲಗಳ ಪ್ರಕಾರ, 2021ರ ನವೆಂಬರ್ ತಿಂಗಳಿನಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 699 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಲಾಗಿತ್ತು. ಈ ವರ್ಷ ನವೆಂಬರ್‌ನಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ನ ಒಟ್ಟು 10,056 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ವಾಲ್ಯೂಮ್ ಗಳಿಕೆಯ ಬಗ್ಗೆ ಹೇಳುವುದಾದರೆ, ನವೆಂಬರ್ 2021 ಕ್ಕಿಂತ ನವೆಂಬರ್ 2022 ರಲ್ಲಿ 9357 ಯುನಿಟ್‌ಗಳು ಹೆಚ್ಚು ಮಾರಾಟವಾಗಿವೆ.  ಇದರೊಂದಿಗೆ  ನವೆಂಬರ್ 2022 ರಲ್ಲಿ ಟಾಪ್-10 ಹೆಚ್ಚು ಮಾರಾಟವಾದ ಸ್ಕೂಟರ್‌ಗಳ ಪಟ್ಟಿಯಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಒಂಬತ್ತನೇ ಸ್ಥಾನದಲ್ಲಿದೆ. ಆದರೆ ವಾರ್ಷಿಕ ಆಧಾರದ ಮೇಲೆ ಮಾರಾಟದಲ್ಲಿನ ಹೆಚ್ಚಳವನ್ನು ನಾವು ಗಣನೆಗೆ ತೆಗೆದುಕೊಂಡರೆ, ಅದರ ಮಾರಾಟವು ಹೆಚ್ಚು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ- ಎಲ್ಪಿಜಿ, ವಿದ್ಯುತ್ ಅಗತ್ಯವಿಲ್ಲ, ಖರ್ಚಿಲ್ಲದೇ ಆಹಾರ ತಯಾರಿಸಲು ಸಹಾಯಕವಾಗಲಿದೆ ಈ ಸ್ಟವ್‌

ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ:
ಪ್ರಸ್ತುತ ಅತಿ ಹೆಚ್ಚು ಬೇಡಿಕೆಯಲ್ಲಿರುವ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1.67 ಲಕ್ಷ ರೂಪಾಯಿಗಳು. ಆದರೆ, FAME II ಸಬ್ಸಿಡಿ ನಂತರ, ಅದರ ಆನ್-ರೋಡ್ ಬೆಲೆ 99 ಸಾವಿರ ರೂ.ಗಳು. ಟಿವಿಎಸ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, FAME II ಸಬ್ಸಿಡಿ ಅಡಿಯಲ್ಲಿ, ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯ ಮೇಲೆ 51,000 ರೂಪಾಯಿಗಳ ರಿಯಾಯಿ ಲಭ್ಯವಿದೆ. ಇದರೊಂದಿಗೆ, 3 ವರ್ಷಗಳ ವಾರಂಟಿ ಮತ್ತು ಒಂದು ವರ್ಷದ ರೋಡ್ ಸೈಡ್ ಅಸಿಸ್ಟೆಂಟ್ ಸೌಲಭ್ಯವೂ ಇದರಲ್ಲಿ ಲಭ್ಯವಾಗಲಿದೆ. 

ಇದನ್ನೂ ಓದಿ- ಈ ಬ್ಯಾಟರಿ ಇದ್ದರೆ ಅಗ್ಗದ ಎಲೆಕ್ಟ್ರಿಕ್ ಕಾರು ಸಿಂಗಲ್ ಚಾರ್ಜ್ ನಲ್ಲಿ

ಮೂರು ರೂಪಾಂತರಗಳಲ್ಲಿ ಲಭ್ಯವಿರುವ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್:
ಪ್ರಸ್ತುತ ಮಾರುಕಟ್ಟೆಯಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮೂರು ರೂಪಾಂತರಗಳಲ್ಲಿ TVS iQube, TVS iQube S, TVS iQube ST ಲಭ್ಯವಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News