ನವದೆಹಲಿ : ಇಂದಿನ ಕಾಲದಲ್ಲಿ ನಮ್ಮ ಎಲ್ಲಾ ಕೆಲಸಗಳು ನಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೇ (Smartphone) ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಫೋನ್‌ ಚಾರ್ಜಿಂಗ್‌ (Phone Charging) ಸರಿಯಾಗಿರುವುದು ಮುಖ್ಯವಾಗಿರುತ್ತದೆ.  ಫೋನ್ ಖರೀದಿಸುವಾಗ, ಫೋನ್‌ನ ಬ್ಯಾಟರಿ ಹೇಗಿದೆ ಎನ್ನುವುದನ್ನು ಈಗ ಎಲ್ಲರೂ ಮೊದಲು ನೋಡಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ನಾವು ಮಾಡುವ ತಪ್ಪಿನಿಂದಾಗಿಯೇ ಫೋನ್‌ನ ಚಾರ್ಜಿಂಗ್ ಸ್ಪೀಡ್‌ (Phone charging speed) ಕಡಿಮೆಯಾಗುತ್ತದೆ.  ಹಾಗಿದ್ದರೆ ಫೋನ್‌ನ ಚಾರ್ಜಿಂಗ್ ಸ್ಪೀಡನ್ನು ಹೆಚ್ಚಿಸಲು ಏನು ಮಾಡಬೇಕು?


COMMERCIAL BREAK
SCROLL TO CONTINUE READING

ಬೇರೆ ಫೋನ್‌ನ ಚಾರ್ಜರ್ ಅನ್ನು ಬಳಸಬೇಡಿ :
ಸ್ಮಾರ್ಟ್‌ಫೋನ್ ಚಾರ್ಜ್ (Smartphone charge) ಮಾಡುವ ಆತುರದಲ್ಲಿ ಯಾವುದೋ ಫೋನಿನ ಚಾರ್ಜರ್‌ ಅನ್ನು ಬಳಸಿಬಿಡುತ್ತೇವೆ. ನಾವು ಬಳಸುತ್ತಿರುವ ಚಾರ್ಜರ್‌  ಯಾವುದು ಎಂದು ಕೂಡಾ ಎಷ್ಟೋ ಬಾರಿ ನೋಡುವುದಿಲ್ಲ. ಆ ಚಾರ್ಜರ್ ಪಿನ್ ನಮ್ಮ ಚಾರ್ಜಿಂಗ್ ಪೋರ್ಟ್‌ಗೆ ಹೊಂದಿಕೊಂಡರೆ, ಫೋನ್ ಅನ್ನು ಚಾರ್ಜ್ ಮಾಡಬಹುದು. ನಿಮ್ಮ ಸ್ವಂತ ಫೋನ್‌ನ ಚಾರ್ಜರ್ ಅನ್ನು ನೀವು ಬಳಸದಿದ್ದರೆ, ಬ್ಯಾಟರಿಯು ಚಾರ್ಜ್ ಆಗಬೇಕಾದ ವೇಗದಲ್ಲಿ ಚಾರ್ಜ್ ಆಗುವುದಿಲ್ಲ.  


ಇದನ್ನೂ ಓದಿ : Airtel ಬಳಕೆದಾರರಿಗೆ ಸಿಹಿ ಸುದ್ದಿ : ಪ್ರತಿ ದಿನ ಸಿಗಲಿದೆ 500MB ಫ್ರೀ ಡೇಟಾ


ಚಾರ್ಜಿಂಗ್ ಪೋರ್ಟ್ ಹಾನಿಯಾಗದಂತೆ ಎಚ್ಚರಿಕೆ ವಹಿಸಿ  :
ನಿಮ್ಮ ಸ್ಮಾರ್ಟ್‌ಫೋನ್‌ನ ಚಾರ್ಜಿಂಗ್ (smartphone charging) ಪೋರ್ಟ್‌ನಲ್ಲಿ ಸ್ವಲ್ಪ ಸಮಸ್ಯೆ ಇದ್ದರೆ ಅಥವಾ ಅದು ಕೆಟ್ಟಿದ್ದರೆ ಚಾರ್ಜಿಂಗ್ ನಿಧಾನವಾಗುತ್ತದೆ. ಕೇಬಲ್‌ನೊಂದಿಗೆ ಸಂಪರ್ಕವು ಉತ್ತಮವಾಗಿರುವುದಿಲ್ಲ. ಅದಕ್ಕಾಗಿಯೇ ಸ್ಮಾರ್ಟ್‌ಫೋನ್ (Smartphone) ಅನ್ನು ಸರ್ವಿಸ್‌ ಸೆಂಟರ್‌ ನಲ್ಲಿ ತೋರಿಸಿ, ಚಾರ್ಜಿಂಗ್ ಪೋರ್ಟ್ ಅನ್ನು ಸರಿಪಡಿಸುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಸ್ಮಾರ್ಟ್‌ಫೋನ್ ಚಾರ್ಜ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. 


ವೈರ್‌ಲೆಸ್ ಚಾರ್ಜಿಂಗ್ ಅನ್ನು ತಪ್ಪಿಸಿ  :
ಇಂದಿನ ಕಾಲದಲ್ಲಿ ವೈರ್‌ಲೆಸ್ ಚಾರ್ಜಿಂಗ್ ಅನ್ನು ಜನರು ತುಂಬಾ ಇಷ್ಟಪಡುತ್ತಾರೆ. ಆದರೆ ಚಾರ್ಜ್ ಮಾಡುವ ಉತ್ತಮ ವಿಧಾನವೆಂದರೆ ಹಳೆಯ ವಿಧಾನವೇ ಆಗಿದೆ.  ವೈರ್‌ಲೆಸ್ ಚಾರ್ಜಿಂಗ್ (wireless charging)ಅನ್ನು ಬಳಸುವಾಗ, ನಿಮ್ಮ ಇಂಡಕ್ಷನ್ ಕಾಯಿಲ್ ಹೆಚ್ಚು ಬಿಸಿಯಾಗಬಹುದು ಮತ್ತು ಫೋನ್ ನಿಧಾನವಾಗಿ ಚಾರ್ಜ್‌ ಆಗುತ್ತದೆ. 


ಇದನ್ನೂ ಓದಿ : Google Play Store: ಪ್ರಚಲಿತ Smart TV App ನಿಷೇಧಿಸಿದ Google, ನಿಮ್ಮ ಬಳಿಯೂ ಇದ್ದರೆ ತಕ್ಷಣ ಡಿಲೀಟ್ ಮಾಡಿ


ಇಂತಹ ಹಲವು ಅಂಶಗಳ ಬಗ್ಗೆ ಕಾಳಜಿ ವಹಿಸುವುದರಿಂದ ಫೋನ್ ನಿಧಾನವಾಗಿ ಚಾರ್ಜ್ ಆಗುವುದನ್ನು ತಪ್ಪಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ