Top-5 Smartphones: ಟಾಪ್-5 ಸ್ಮಾರ್ಟ್‌ಫೋನ್‌ಗಳ ಮೇಲೆ ಅದ್ಭುತ ರಿಯಾಯಿತಿ

Top-5 Smartphones: ನೀವು ಸಹ ಅಗ್ಗದ ದರದಲ್ಲಿ ಹೆಚ್ಚಿನ ವೈಶಿಷ್ಟ್ಯವುಳ್ಳ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ನಿಮಗೊಂದು ಉತ್ತಮ ಅವಕಾಶವಿದೆ. ಟಾಪ್-5 ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ರಿಯಾಯಿತಿ ಲಭ್ಯವಾಗುತ್ತಿದ್ದು ಅತಿ ಕಡಿಮೆ ಬೆಲೆಗೆ ನೀವು ಹೊಸ ಸ್ಮಾರ್ಟ್‌ಫೋನ್ ಅನ್ನು ಮನೆಗೆ ಕೊಂಡೊಯ್ಯಬಹುದು.

Written by - Yashaswini V | Last Updated : Nov 15, 2021, 01:30 PM IST
  • ಅಗ್ಗದ ದರದಲ್ಲಿ ಹೆಚ್ಚಿನ ವೈಶಿಷ್ಟ್ಯವುಳ್ಳ ಸ್ಮಾರ್ಟ್‌ಫೋನ್ ಖರೀದಿಸಲು ಉತ್ತಮ ಅವಕಾಶ
  • ಟಾಪ್-5 ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ರಿಯಾಯಿತಿ
  • ಭಾರೀ ರಿಯಾಯಿತಿ ಜೊತೆಗೆ ಲಭ್ಯವಾಗುತ್ತಿರುವ ಟಾಪ್-5 ಸ್ಮಾರ್ಟ್‌ಫೋನ್‌ಗಳು ಯಾವುವು ಎಂದು ತಿಳಿಯಿರಿ
Top-5 Smartphones: ಟಾಪ್-5 ಸ್ಮಾರ್ಟ್‌ಫೋನ್‌ಗಳ ಮೇಲೆ ಅದ್ಭುತ ರಿಯಾಯಿತಿ title=
Buy Realme, Samsung and Moto phones in less than 2 thousand rupees buy availing these offers

Top-5 Smartphones: ನೀವು ಸಹ ಅಗ್ಗದ ದರದಲ್ಲಿ ಹೆಚ್ಚಿನ ವೈಶಿಷ್ಟ್ಯವುಳ್ಳ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ನಿಮಗೊಂದು ಉತ್ತಮ ಅವಕಾಶವಿದೆ. ಟಾಪ್-5 ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ರಿಯಾಯಿತಿ ಲಭ್ಯವಾಗುತ್ತಿದ್ದು ಅತಿ ಕಡಿಮೆ ಬೆಲೆಗೆ ನೀವು ಹೊಸ ಸ್ಮಾರ್ಟ್‌ಫೋನ್ ಅನ್ನು ಮನೆಗೆ ಕೊಂಡೊಯ್ಯಬಹುದು.

ಭಾರೀ ರಿಯಾಯಿತಿ ಜೊತೆಗೆ ಲಭ್ಯವಾಗುತ್ತಿರುವ ಟಾಪ್-5 ಸ್ಮಾರ್ಟ್‌ಫೋನ್‌ಗಳು ಯಾವುವು ಎಂದು ತಿಳಿಯಿರಿ:

* ರಿಯಲ್ಮೆ 7:

रियलमी 7 ರಿಯಲ್ಮೆ 7 (Realme 7) ಪ್ರಬಲ ಬ್ಯಾಟರಿ ಸ್ಮಾರ್ಟ್‌ಫೋನ್ ಅನ್ನು ನೀವು ಫ್ಲಿಪ್‌ಕಾರ್ಟ್‌ನಿಂದ ರೂ 17,999 ಬದಲಿಗೆ ರೂ 14,999 ಕ್ಕೆ ಖರೀದಿಸಬಹುದು. ಈ ಡೀಲ್‌ನ ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ನೀವು ಪಡೆದರೆ, ನಂತರ ನೀವು 14,250 ರೂಗಳ ರಿಯಾಯಿತಿಯನ್ನು ಪಡೆಯುತ್ತೀರಿ. ನೀವು ಈ ಫೋನ್ ಅನ್ನು ಕೇವಲ 749 ರೂ.ಗಳಲ್ಲಿ ಖರೀದಿಸಲು ಸಾಧ್ಯವಾಗುತ್ತದೆ. 

* Moto G40 ಫ್ಯೂಷನ್:

मोटो G40 फ्यूजन
Moto G40 ಫ್ಯೂಷನ್ ಸ್ಮಾರ್ಟ್‌ಫೋನ್ ಅನ್ನು Motorola ನಿಂದ 64GB ಆಂತರಿಕ ಸಂಗ್ರಹಣೆಯೊಂದಿಗೆ ಫ್ಲಿಪ್‌ಕಾರ್ಟ್‌ನಿಂದ ರೂ.16,999 ಬದಲಿಗೆ ರೂ.14,499 ಗೆ ಪಡೆಯಬಹುದು. ನಿಮ್ಮ ಹಳೆಯ ಫೋನ್‌ಗೆ ಬದಲಾಗಿ ನೀವು ಇದನ್ನು ತೆಗೆದುಕೊಂಡರೆ, ನಿಮಗೆ 13,499 ರೂಪಾಯಿಗಳವರೆಗೆ ರಿಯಾಯಿತಿ ಸಿಗುತ್ತದೆ, ಇದರಿಂದ ನೀವು ಅದನ್ನು ಕೇವಲ ಒಂದು ಸಾವಿರ ರೂಪಾಯಿಗಳಿಗೆ ಪಡೆಯುತ್ತೀರಿ.

ಇದನ್ನೂ ಓದಿ- Google Play Store: ಪ್ರಚಲಿತ Smart TV App ನಿಷೇಧಿಸಿದ Google, ನಿಮ್ಮ ಬಳಿಯೂ ಇದ್ದರೆ ತಕ್ಷಣ ಡಿಲೀಟ್ ಮಾಡಿ

* Samsung Galaxy M32 5G:

सैमसंग गैलेक्सी M32 5G
ನೀವು ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ (Samsung Smartphone) ಅನ್ನು ಅಮೆಜಾನ್‌ನಿಂದ ರೂ 16,999 ಬದಲಿಗೆ ರೂ 14,999 ಕ್ಕೆ ಖರೀದಿಸಬಹುದು. ಎಕ್ಸ್‌ಚೇಂಜ್ ಆಫರ್‌ನಿಂದ ನೀವು ರೂ 13,250 ಲಾಭವನ್ನು ಪಡೆಯಬಹುದು. ಇದರೊಂದಿಗೆ ಈ ಫೋನ್‌ನ್ನು ಕೇವಲ ರೂ. 1,749 ಕ್ಕೆ ಮನೆಗೆ ಕೊಂಡೊಯ್ಯಬಹುದು.

* Poko X3:

पोको X3
ಈ Poco ಸ್ಮಾರ್ಟ್‌ಫೋನ್‌ನ ಬೆಲೆ ರೂ. 19,999 ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ನೀವು ಇದನ್ನು ರೂ. 15,999 ಗೆ ಪಡೆಯುತ್ತೀರಿ. ವಿನಿಮಯ ಕೊಡುಗೆಯೊಂದಿಗೆ, ನೀವು ರೂ. 14,250 ವರೆಗೆ ಉಳಿಸಬಹುದು, ಇದು ಅದರ ಬೆಲೆಯನ್ನು ರೂ. 1,749 ಕ್ಕೆ ಇಳಿಸುತ್ತದೆ. 

ಇದನ್ನೂ ಓದಿ- Airtel ಬಳಕೆದಾರರಿಗೆ ಸಿಹಿ ಸುದ್ದಿ : ಪ್ರತಿ ದಿನ ಸಿಗಲಿದೆ 500MB ಫ್ರೀ ಡೇಟಾ

* Redmi note 10s:

रेडमी नोट 10S
ನೀವು Redmi Note 10S ಅನ್ನು Amazon ನಿಂದ ಮನೆಗೆ 14,999 ರೂ.ಗಳಿಗೆ ತೆಗೆದುಕೊಳ್ಳಬಹುದು ಆದರೆ ಅದರ ಮೂಲ ಬೆಲೆ 18,499 ರೂ. ನಿಮ್ಮ ಹಳೆಯ ಫೋನ್‌ಗೆ ಬದಲಾಗಿ ನೀವು ಅದನ್ನು ಖರೀದಿಸಿದರೆ, ನಂತರ ನೀವು ರೂ. 13,250 ವರೆಗೆ ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು. ಈ ರೀತಿಯಾಗಿ ನೀವು ಈ Redmi ಫೋನ್ ಅನ್ನು ರೂ. 1,749 ಕ್ಕೆ ಖರೀದಿಸಲು ಸಾಧ್ಯವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News