ಬೆಂಗಳೂರು : ಕೆಲವು ವಾರಗಳ ಹಿಂದೆ ಭಾರತದಲ್ಲಿ  ಗೂಗಲ್ ಪ್ಲೇ ಸ್ಟೋರ್ ಮತ್ತು  ಆಪಲ್ ಆಡ್ ಸ್ಟೋರ್  ನಿಂದ ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾವನ್ನು  ತೆಗೆದುಹಾಕಲಾಗಿತ್ತು. PUBG ಮೊಬೈಲ್ ಗೇಮ್ ಅನ್ನು ನಿಷೇಧಿಸಿದ ಕಾನೂನಿನ ಅಡಿಯಲ್ಲಿಯೇ ಇದನ್ನು ಕೂಡಾ ತೆಗೆದು ಹಾಕಲಾಗಿತ್ತು.  ಆದರೆ, ಶೀಘ್ರದಲ್ಲೇ ಈ ನಿರ್ಧಾರವನ್ನು  ಹಿಂಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಅಂದರೆ, ಬಿಜಿಎಂಐ ಶೀಘ್ರದಲ್ಲೇ ಭಾರತಕ್ಕೆ ಮರಳಲಿದೆ ಎಂದು ಹೇಳಬಹುದು. ಜನಪ್ರಿಯ ಗೇಮರ್ ಆಗಿರುವ ಮ್ಯಾಕ್ಸ್‌ಟರ್ನ್‌ನಿಂದ ಈ ಸುದ್ದಿ ಹೊರ ಬಿದ್ದಿದೆ.  ಟ್ವೀಟ್ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಶೀಘ್ರದಲ್ಲೇ  ವಾಪಾಸಾಗಲಿದೆ BGMI : 
ಜನಪ್ರಿಯ ಬ್ಯಾಟಲ್ ರಾಯಲ್  ಟೈಟಲ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಮರಳುವ ಸಾಧ್ಯತೆ ಹೆಚ್ಚಿದೆ. ಈ ಮೊಬೈಲ್ ಗೇಮ್‌ನ ಮರಳುವಿಕೆಯ ಬಗ್ಗೆ ಅನೇಕ ಪ್ರಭಾವಿಗಳು ತಮ್ಮ ತಮ್ಮ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ. ಈ ಸಾಮಾಜಿಕ ಮಾಧ್ಯಮ ಪೋಸ್ಟ್  ಮೊಬೈಲ್ ಗೇಮ್‌ ನ ಮರಳುವಿಕೆ ಬಹುತೇಕ ಖಚಿತ ಎಂದೇ ಹೇಳುತ್ತದೆ.


ಇದನ್ನೂ ಓದಿ : Ola ಬಿಡುಗಡೆ ಮಾಡಿದೆ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ .! ಬೆಲೆ ಕೇವಲ ಇಷ್ಟೇ ..!


ಭಾರತ ಸರ್ಕಾರ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ :
Crafton ನ PUBG ಮೊಬೈಲ್‌ನ ಭಾರತೀಯ ಆವೃತ್ತಿಯನ್ನು ಇತ್ತೀಚೆಗೆ ದೇಶದ ಅಪ್ಲಿಕೇಶನ್ ಸ್ಟೋರ್‌ನಿಂದ ತೆಗೆದುಹಾಕಲಾಗಿತ್ತು. ಆಟದ ಸುತ್ತಲಿನ ಸಂಪೂರ್ಣ ಎಸ್‌ಪೋರ್ಟ್ಸ್ ದೃಶ್ಯ ಕಳವಳಕಾರಿಯಾಗಿತ್ತು. ಇದರ ಹೊರತಾಗಿ, ಕಂಟೆಂಟ್ ರಚನೆಕಾರರು, ವೃತ್ತಿಪರ ಆಟಗಾರರು ಸೇರಿದಂತೆ ಅನೇಕರು ಅದರ  ಲಿಸ್ಟ್ ನಿಂದ ಪ್ರಭಾವಿತರಾಗಿದ್ದರು.  ಆದರೆ, ಈ ವಿಚಾರದಲ್ಲಿ ಭಾರತ ಸರ್ಕಾರ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.


ಟ್ವೀಟ್  ಮೂಲಕ ಮಾಹಿತಿ : 
Maxtern ತಂಡ ಗಾಡ್‌ಲೈಕ್‌ಗೆ ಕಂಟೆಂಟ್ ರಚನೆಕಾರರಾಗಿದ್ದಾರೆ . ಅವರ ಟ್ವೀಟ್‌ ಪ್ರಕಾರ   BGMI ಶೀಘ್ರದಲ್ಲೇ ಹಿಂತಿರುಗುವ ಹೆಚ್ಚಿನ ಸಂಭವನೀಯತೆ ಇದೆ' ಎಂದು ಹೇಳಲಾಗಿದೆ. ಆದರೆ ಈ ಗೇಮ್ ನಿಜವಾಗಿಯೂ ದೇಶದಲ್ಲಿ ಆಪ್ ಸ್ಟೋರ್‌ಗೆ ಮರಳುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.


ಇದನ್ನೂ ಓದಿ : ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳು ಸಕ್ರಿಯವಾಗಿವೆ? ಈ ರೀತಿ ತಿಳಿಯಿರಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.a