ಈ ಬಲ್ಬ್ ಕಡಿಮೆ ವಿದ್ಯುತ್ ನಲ್ಲಿ ಮನೆಯೆಲ್ಲಾ ಬೆಳಗುತ್ತದೆ , ಬ್ಲೂಟೂತ್‌ಗೆ ಕನೆಕ್ಟ್ ಮಾಡಿದರೆ ಹಾಡೂ ಕೇಳಬಹುದು

ಎಲ್ಇಡಿ  ಬಲ್ಬ್ ಗಳು ಎಲ್ಲಿ ಬೇಕಾದರೂ ಲಭ್ಯವಿರುತ್ತದೆ. ಅವುಗಳ ಬೆಲೆಯೂ ತುಂಬಾ ಕಡಿಮೆ. ಆದರೆ ಇಂದು ನಾವು  ಒಂದು ವಿಶೇಷ  ಎಲ್ಇಡಿ  ಬಲ್ಬ್ ಬಗ್ಗೆ ಹೇಳಲಿದ್ದೇವೆ.  ಅದುವೇ RSCT Bluetooth Speaker Music Bulb.    

Written by - Ranjitha R K | Last Updated : Aug 16, 2022, 11:18 AM IST
  • ವಿದ್ಯುತ್ ಹೆಚ್ಚು ಬಳಸಿದರೆ ಬಿಲ್ ಕೂಡ ಹೆಚ್ಚು ಬರುತ್ತದೆ.
  • ವಿದ್ಯುತ್ ಬಿಲ್ ಕಡಿಮೆ ಮಾಡಲು ಎಲ್ಇಡಿ ಬಲ್ಬ್ ಬಳಸಲಾಗುತ್ತದೆ
  • RSCT ಬ್ಲೂಟೂತ್ ಸ್ಪೀಕರ್ ಮ್ಯೂಸಿಕ್ ಬಲ್ಬ್ ಬೆಲೆ ತೀರಾ ಕಡಿಮೆ
ಈ ಬಲ್ಬ್  ಕಡಿಮೆ ವಿದ್ಯುತ್ ನಲ್ಲಿ ಮನೆಯೆಲ್ಲಾ ಬೆಳಗುತ್ತದೆ , ಬ್ಲೂಟೂತ್‌ಗೆ ಕನೆಕ್ಟ್ ಮಾಡಿದರೆ  ಹಾಡೂ ಕೇಳಬಹುದು  title=
RSCT Bluetooth Speaker Music Bulb

Bluetooth Bulb : ವಿದ್ಯುತ್ ಬಿಲ್ ಹೆಚ್ಚು ಬರುತ್ತಿದ್ದಂತೆಯೇ ಟೆನ್ಶನ್ ಹೆಚ್ಚುತ್ತದೆ.   ವಿದ್ಯುತ್ ಹೆಚ್ಚು ಬಳಸಿದರೆ ಬಿಲ್ ಕೂಡ ಹೆಚ್ಚು ಬರುತ್ತದೆ.  ವಿದ್ಯುತ್ ಬಿಲ್ ಕಡಿಮೆ ಮಾಡಲು , ಹೆಚ್ಚಿನ ಜನರು ಎಲ್ಇಡಿ ಬಲ್ಬ್ ಗಳನ್ನು  ಬಳಸುತ್ತಾರೆ.  ಅವು ಹೆಚ್ಚು ಬೆಳಕನ್ನು ನೀಡುವುದಲ್ಲದೆ, ಕಡಿಮೆ ವಿದ್ಯುತ್ ಅನ್ನು ಬಳಸುತ್ತವೆ. ಎಲ್ಇಡಿ  ಬಲ್ಬ್ ಗಳು ಎಲ್ಲಿ ಬೇಕಾದರೂ ಲಭ್ಯವಿರುತ್ತದೆ. ಅವುಗಳ ಬೆಲೆಯೂ ತುಂಬಾ ಕಡಿಮೆ. ಆದರೆ, ಇಂದು ನಾವು  ಒಂದು ವಿಶೇಷ  ಎಲ್ಇಡಿ ಬಲ್ಬ್ ಬಗ್ಗೆ ಹೇಳಲಿದ್ದೇವೆ.  ಅದುವೇ RSCT Bluetooth Speaker Music Bulb.  

RSCT ಬ್ಲೂಟೂತ್ ಸ್ಪೀಕರ್ ಮ್ಯೂಸಿಕ್ ಬಲ್ಬ್ ಬೆಲೆ :
ಇಲ್ಲಿ ನಾವು ಬ್ಲೂಟೂತ್ ಬಲ್ಬ್ ಬಗ್ಗೆ ಮಾತನಾಡುತ್ತಿದ್ದೇವೆ. ಈ ಬಲ್ಬ್ ಬೆಳಕು ನೀಡುವುದರೊಂದಿಗೆ ಸಂಗೀತವನ್ನೂ ಕೇಳಿಸುತ್ತದೆ. ಈ ಬಲ್ಬ್ ಸಾಮಾನ್ಯ  ಬಲ್ಬಿಗಿಂತ  ಭಿನ್ನವಾಗಿದೆ. RSCT ಬ್ಲೂಟೂತ್ ಸ್ಪೀಕರ್ ಮ್ಯೂಸಿಕ್ ಬಲ್ಬ್ ಅನ್ನು ಫ್ಲಿಪ್‌ಕಾರ್ಟ್‌ನಿಂದ 300 ರೂಪಾಯಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ  ಬಲ್ಬ್ ಜೊತೆಗೆ ರಿಮೋಟ್ ಕೂಡ ಲಭ್ಯವಿದೆ. 

ಇದನ್ನೂ ಓದಿ : ಇಷ್ಟೊಂದು ಅಗ್ಗದ ಬೆಲೆಯಲ್ಲಿ ಸಿಗುತ್ತೆ ಈ ಸ್ಪೆಷಲ್ AC: ಇದನ್ನು ಬೆಡ್ ಬಳಿಯೇ ಇಡಬಹುದು!

RSCT ಬ್ಲೂಟೂತ್ ಸ್ಪೀಕರ್  ಮ್ಯೂಸಿಕ್ ಬಲ್ಬ್ ವಿಶೇಷಣಗಳು :
RSCT Bluetooth Speaker Music Bulb ಬಹುವರ್ಣದಲ್ಲಿ ಬರುತ್ತದೆ. ಇದರಲ್ಲಿ ಬಣ್ಣವು ಸ್ವಯಂಚಾಲಿತವಾಗಿ ಬದಲಾಗುತ್ತದೆ. ಇದರೊಂದಿಗೆ ಬ್ಲೂಟೂತ್ ಸ್ಪೀಕರ್ ಕೂಡ ಲಭ್ಯವಾಗಲಿದೆ. ಅಂದರೆ, ಮೊಬೈಲ್ ಗೆ ಕನೆಕ್ಟ್ ಮಾಡಿಕೊಂಡು ಸಂಗೀತವನ್ನು ಆನಂದಿಸಬಹುದು. ಬಲ್ಬ್  ಸ್ಪೀಕರ್ ಗಳನ್ನೂ ಹೊಂದಿದೆ. ಅದರ ಸಹಾಯದಿಂದ ಸಂಗೀತವನ್ನು ಆನಂದಿಸಬಹುದು. 

RSCT ಬ್ಲೂಟೂತ್ ಸ್ಪೀಕರ್ ಸಂಗೀತ ಬಲ್ಬ್ ಅನ್ನು ಆಫ್‌ಲೈನ್‌ನಲ್ಲಿಯೂ ಖರೀದಿಸಬಹುದು. 

ಇದನ್ನೂ ಓದಿ : 40 ಸಾವಿರ ರೂಪಾಯಿ ಬೆಲೆಯ ನೋಕಿಯಾದ 43 ಇಂಚಿನ 4K Smart TV ಕೇವಲ 12 ಸಾವಿರ ರೂಪಾಯಿಗೆ ಲಭ್ಯ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News