ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಇಲ್ಲದೆ ಯಾವ ಕೆಲಸವೂ ನಡೆಯುವುದಿಲ್ಲ. ಏನೇ ಕೆಲಸ ಆಗಬೇಕಾದರೂ ಸ್ಮಾರ್ಟ್‌ಫೋನ್‌ ಗಳನ್ನೇ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.  ಇದನ್ನೇ  ಸೈಬರ್ ಅಪರಾಧಿಗಳು ದಾಳವಾಗಿ ಬಳಸಿಕೊಂಡಿದ್ದಾರೆ.  ಹ್ಯಾಕರ್‌ಗಳು ಬಳಕೆದಾರರಿಗೆ ತಿಳಿಯದಂತೆಯೇ Google Play Store ಅಥವಾ App Storeನಿಂದ ಲಿಂಕ್‌ಗಳು ಅಥವಾ ಅಪ್ಲಿಕೇಶನ್‌ಗಳ ಮೂಲಕ iPhone ಅಥವಾ Android ಫೋನ್‌ಗಳಲ್ಲಿ ಅಪಾಯಕಾರಿ ಮಾಲ್‌ವೇರ್‌ಗಳನ್ನು ಸೇರಿಸುವ ಮೂಲಕ ಬಳಕೆದಾರರನ್ನು ಗುರಿಯಾಗಿಸುತ್ತಾರೆ. ಈ ವೈರಸ್‌ಗಳು ಆಪರೇಟಿಂಗ್ ಸಿಸ್ಟಂನ ದುರ್ಬಲ ಪ್ರದೇಶಗಳ ಮೇಲೆ ದಾಳಿ ಮಾಡುತ್ತವೆ ಮತ್ತು ಬ್ಯಾಂಕಿಂಗ್ ವಿವರಗಳಂತಹ ಪ್ರಮುಖ ಡೇಟಾವನ್ನು ಕದಿಯುತ್ತವೆ. ಈ ಮಾಲ್‌ವೇರ್‌ಗಳು ಯಾವುದೇ iPhone ಅಥವಾ Android ಫೋನ್‌ಗೆ ಸೋಂಕು ತಗುಲಿಸಬಹುದು. 


COMMERCIAL BREAK
SCROLL TO CONTINUE READING

ಆಪ್ ಡೌನ್‌ಲೋಡ್ ಮಾಡುವಾಗ ಜಾಗರೂಕರಾಗಿರಿ:
ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವಾಗ ಜಾಗರೂಕರಾಗಿರಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಸೈಬರ್ ಅಪರಾಧಕ್ಕೆ ಬಲಿಯಾಗಬೇಕಾಗಬಹುದು. Google Play Store ಅಥವಾ App Storeನಿಂದ ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೊದಲು  ಕೆಲವು ಎಚ್ಚರಿಕೆಯ ಕ್ರಮಗಳ ನ್ನು ಅನುಸರಿಸಿಕೊಳ್ಳಿ. 


ಇದನ್ನೂ ಓದಿ : ಹೊಸ ಆಪ್ ಬಿಡುಗಡೆ ಮಾಡಿದ ವಾಟ್ಸಾಪ್ ! ಸೂಪರ್ ಫಾಸ್ಟ್ ಆಗಲಿದೆ ಎಲ್ಲಾ ಕೆಲಸ ಬದಲಾಗಲಿದೆ ಬಳಕೆಯ ಶೈಲಿ


ಈ ಅಪಾಯದ ಚಿಹ್ನೆಯನ್ನು ತಿಳಿದುಕೊಂಡು ಮಾಲ್‌ವೇರ್ ದಾಳಿಯಿಂದ ನಿಮ್ಮ ಫೋನ್ ಅನ್ನು ರಕ್ಷಿಸಿ : 


1. ಸ್ಪೀಡ್ ಕ್ಲೀನ್, ಸೂಪರ್ ಕ್ಲೀನ್ ಮತ್ತು ರಾಕೆಟ್ ಕ್ಲೀನರ್‌ನಂತಹ 'ಆಪ್ಟಿಮೈಸಿಂಗ್' ಮತ್ತು 'ಕ್ಲೀನಿಂಗ್' ಅಪ್ಲಿಕೇಶನ್‌ಗಳನ್ನು ಎಂದಿಗೂ  ಇನ್ಸ್ಟಾಲ್ ಮಾಡಿಕೊಳ್ಳಬೇಡಿ. ಇಂಥಹ ಹಲವು ಆಪ್ ಗಳಲ್ಲಿ ಮಾಲ್ ವೇರ್ ಗಳು ಕಂಡುಬಂದಿವೆ.
2. ವಿಶ್ವಾಸಾರ್ಹ ಅಪ್ಲಿಕೇಶನ್ ಮೂಲದಿಂದ ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು ಪ್ರತಿಕ್ರಿಯೆ ಅಥವಾ ವಿಮರ್ಶೆಗಳನ್ನು ಪರಿಶೀಲಿಸಿ. 
3.  ಡೌನ್‌ಲೋಡ್ ಮಾಡುವ ಮೊದಲು, ಅಪ್ಲಿಕೇಶನ್‌ನ ಡೌನ್‌ಲೋಡ್‌ಗಳ ಸಂಖ್ಯೆಯನ್ನು ಪರಿಶೀಲಿಸಿ. ಹೊಸ ಅಪ್ಲಿಕೇಶನ್‌ ನಲ್ಲಿ ಹೆಚ್ಚಿನ ಸಂಖ್ಯೆಯ ಡೌನ್‌ಲೋಡ್‌ಗಳನ್ನು ಕ್ಲೈಮ್ ಮಾಡುವುದು ಎಚ್ಚರಿಕೆಯ ಸಂಕೇತವಾಗಿದೆ. ವಂಚಕರು ಬಳಕೆದಾರರನ್ನು ಮೋಸಗೊಳಿಸಲು ಈ ತಂತ್ರಗಳನ್ನು ಬಳಸುತ್ತಾರೆ. ಹಾಗಾಗಿ ಲಕ್ಷಾಂತರ ಡೌನ್‌ಲೋಡ್‌ಗಳನ್ನು ಕ್ಲೈಮ್ ಮಾಡುವ ಹೊಸ ಅಪ್ಲಿಕೇಶನ್ ಬಗ್ಗೆ ಎಚ್ಚರ ಇರಲಿ. 
4.ಡೆವಲಪರ್‌ಗಳು Google Play Store ವಿವರಣೆಯಲ್ಲಿ ಅಪ್ಲಿಕೇಶನ್‌ನ ಎಲ್ಲಾ ವಿವರಗಳನ್ನು ನಮೂದಿಸುತ್ತಾರೆ. ಅದರಲ್ಲಿ ನಿಮ್ಮ ಫೋನ್‌ನಲ್ಲಿ ಕಾರ್ಯನಿರ್ವಹಿಸಲು ಅಕ್ಸೆಸ್ ಪಡೆಯಳು ಕೋರುವ ಅನುಮತಿ ಕೂಡಾ ಸೇರಿದೆ. 
5. ಆ್ಯಪ್ ಡೆವಲಪರ್‌ಗಳು ಬೇರೆ ಯಾವುದೇ ಅಪ್ಲಿಕೇಶನ್‌ಗಳನ್ನು ಮಾಡಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳಿ. ಹೌದು ಎಂದಾದರೆ, ಅವುಗಳ  ವಿಮರ್ಶೆಗಳನ್ನೂ ಒಮ್ಮೆ ನೋಡಿಕೊಳ್ಳಿ. 


ಇದನ್ನೂ ಓದಿ : ಬರಲಿದೆ ಅತಿ ಕಡಿಮೆ ಬೆಲೆಯ 5G ಫೋನ್‌.. ಲಾಂಚ್‌ ಡೇಟ್, ವೈಶಿಷ್ಟ್ಯ, ಬೆಲೆ ಬಗ್ಗೆ ಕಂಪ್ಲೀಟ್‌ ಡಿಟೇಲ್ಸ್‌


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.