Budget Smartphone: ಕೇವಲ 14 ಸಾವಿರ ರೂ.ಗೆ ಸಿಗುತ್ತಿದೆ ಕ್ರೇಜಿ 5G ಸ್ಮಾರ್ಟ್‌ಫೋನ್..!

ZTE ಉತ್ತಮ ವೈಶಿಷ್ಟ್ಯ ಹೊಂದಿರುವ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ZTE Yuanhang 30S 5G ದೊಡ್ಡ ಸ್ಕ್ರೀನ್ ಮತ್ತು ದೀರ್ಘಕಾಲಿನ ಬ್ಯಾಟರಿ ಹೊಂದಿದೆ. ZTE Yuanhang 30S 5Gಯ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ.

Written by - Puttaraj K Alur | Last Updated : Aug 17, 2022, 01:30 PM IST
  • ಚೀನಾದ ಟೆಕ್ ದೈತ್ಯ ZTE ಹೊಸ ಬಜೆಟ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ
  • ನಿಮ್ಮ ಬಜೆಟ್ ಬೆಲಗೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಕ್ರೇಜಿ ಸ್ಮಾರ್ಟ್‌ಫೋನ್
  • ಕೇವಲ 14 ಸಾವಿರ ರೂ. ಬಜೆಟ್‍ಗೆ ದೀರ್ಘ ಬ್ಯಾಟರಿ & 5G ಸೇವೆ ಹೊಂದಿರುವ ಫೋನ್
Budget Smartphone: ಕೇವಲ 14 ಸಾವಿರ ರೂ.ಗೆ ಸಿಗುತ್ತಿದೆ ಕ್ರೇಜಿ 5G ಸ್ಮಾರ್ಟ್‌ಫೋನ್..! title=
ZTE Yuanhang 30S 5G Smartphone

ನವದೆಹಲಿ: ಚೀನಾದ ಟೆಕ್ ದೈತ್ಯ ZTE ಚೀನಾದಲ್ಲಿ ಯುವಾಂಗ್ ಸರಣಿ(Yuanang Series)ಯಡಿ ಹೊಸ ಬಜೆಟ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ZTE Yuanhang 30S ಚೀನೀ ಮಾರುಕಟ್ಟೆ ಪ್ರವೇಶಿಸಿದ ಇತ್ತೀಚಿನ ಸ್ಮಾರ್ಟ್‍ಫೋನ್. ಕೆಲವು ಉತ್ತಮ Home-Powered Componentsನೊಂದಿಗೆ ಇದು ರಿಲೀಸ್ ಆಗಿದೆ. 6nm EUV ಪ್ರಕ್ರಿಯೆಯಿಂದ ತಯಾರಿಸಲಾದ Unisoc T760 ಚಿಪ್‌ಸೆಟ್‌ನಿಂದ ಸ್ಮಾರ್ಟ್‌ಫೋನ್ ಚಾಲಿತವಾಗಿದೆ. ZTE Yuanhang 30S 5G ದೊಡ್ಡ ಸ್ಕ್ರೀನ್ ಮತ್ತು ದೀರ್ಘಕಾಲಿಕ ಬ್ಯಾಟರಿ ಹೊಂದಿದೆ. ZTE Yuanhang 30S 5G  ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ZTE Yuanhang 30S 5G ಸ್ಮಾರ್ಟ್‌ಫೋನ್ 91% ಮತ್ತು 730 x 1,600 ಪಿಕ್ಸೆಲ್‌ಗಳ ಸ್ಕ್ರೀನ್-ಟು-ಬಾಡಿ ಅನುಪಾತ(Ratio)ದೊಂದಿಗೆ 6.52-ಇಂಚಿನ ವಾಟರ್ ಡ್ರಾಪ್ ಸ್ಕ್ರೀನ್ ಹೊಂದಿದೆ. ಹೊಸ ಫೋನ್‌ನ ಸ್ಕ್ರೀನ್ US ULನಿಂದ i-Care ಪ್ರಮಾಣೀಕರಣ ಪಡೆದುಕೊಂಡಿದೆ. ಇದರ ಪ್ರೊಸೆಸರ್ 5G ಸಂಪರ್ಕವನ್ನು ನೀಡುತ್ತದೆ. ಪ್ರೊಸೆಸರ್‌ನ AI ಕಂಪ್ಯೂಟಿಂಗ್ ಪವರ್ 2.4 ಟಾಪ್‌ಗಳಷ್ಟಿದೆ. 4K 30fps ವಿಡಿಯೋ ಎನ್‌ಕೋಡಿಂಗ್ ಮತ್ತು 10-ಬಿಟ್ ವೀಡಿಯೊ ಡಿಕೋಡಿಂಗ್ ಎರಡೂ ಬೆಂಬಲಿತವಾಗಿದೆ.

ಇದನ್ನೂ ಓದಿ: 40 ಸಾವಿರ ರೂಪಾಯಿ ಬೆಲೆಯ ನೋಕಿಯಾದ 43 ಇಂಚಿನ 4K Smart TV ಕೇವಲ 12 ಸಾವಿರ ರೂಪಾಯಿಗೆ ಲಭ್ಯ

ZTE Yuanhang 30S 5G ಕ್ಯಾಮೆರಾ

ZTE Yuanhang 30S 5G 13MP ಸ್ಮಾರ್ಟ್‌ಫೋನ್ ಮುಖ್ಯ ಕ್ಯಾಮೆರಾ, 2MP ಡೆಪ್ತ್-ಆಫ್-ಫೀಲ್ಡ್ ಲೆನ್ಸ್ ಮತ್ತು 2MP 4CM ಮ್ಯಾಕ್ರೋ ಮಾಡ್ಯೂಲ್ ಒಳಗೊಂಡಿರುವ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನ್‌ನ ಮುಂಭಾಗದಲ್ಲಿ 5MP AI ಬ್ಯೂಟಿ ಕ್ಯಾಮೆರಾ ಇದೆ.

ZTE Yuanhang 30S 5G ಬ್ಯಾಟರಿ

ಈ ಬಜೆಟ್ ಫೋನ್ ಧ್ವನಿ ಸಂದೇಶ ಕಳುಹಿಸುವಿಕೆ, WeChat ಮತ್ತು ವಿಡಿಯೋ ಚಾಟ್ ಸೇರಿದಂತೆ WeChat ಕಾರ್ಯವನ್ನು ವಿಸ್ತರಿಸಿದೆ. Multiple Screen Mode ಸೇರಿದಂತೆ ಕೆಲವು ಅಂತರ್ನಿರ್ಮಿತ ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಳನ್ನು ಫೋನ್ ಹೊಂದಿದೆ. ಸಾಧನವು 4,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 10W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಇದರಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದ್ದು, 3.5mm ಹೆಡ್‌ಫೋನ್ ಜ್ಯಾಕ್ ಸಹ ಲಭ್ಯವಿದೆ.

ಇದನ್ನೂ ಓದಿ: POCO: ಸೊಗಸಾದ ನೋಟದೊಂದಿಗೆ ಇದುವರೆಗೆ ಅಗ್ಗದ 5G ಸ್ಮಾರ್ಟ್‌ಫೋನ್ ಬಿಡುಗಡೆ

ZTE Yuanhang 30S ಬೆಲೆ

ZTE Yuanhang 30S ಸ್ಮಾರ್ಟ್‌ಫೋನಿನ ಬೆಲೆ 1,199 ಯುವಾನ್ (ಅಂದಾಜು 14,057 ರೂ.) ಇದೆ. ಶೀಘ್ರವೇ ZTE ಕಂಪನಿ ಈ ಭಾರತೀಯ ಮಾರುಕಟ್ಟೆಗೆ ಈ ಫೋನ್ ಪರಿಚಯಿಸಲಿದೆ ಎಂದು ವರದಿಯಾಗಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News