ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ನಲ್ಲಿ ಕೆಲಸ ಹುಡುಕುವ ಟ್ರೆಂಡ್ ಇದೆ. ಆದರೆ ಈ ರೀತಿ ಆನ್‌ಲೈನ್ ನಲ್ಲಿ ಉದ್ಯೋಗ ಹುಡುಕಾಟವನ್ನು ಮಾಡುತ್ತಿದ್ದರೆ, ನೀವು ಜಾಗರೂಕರಾಗಿರಬೇಕು.  ಆನ್‌ಲೈನ್ ನಲ್ಲಿ  ಕೆಲಸ ಹುಡುಕುತ್ತಿದ್ದ ಮಹಿಳೆಯೊಬ್ಬರು ಹ್ಯಾಕರ್‌ಗಳ ದುಷ್ಟ ತಂತ್ರಕ್ಕೆ ಸಿಕ್ಕಿಬಿದ್ದಿದ್ದಾರೆ. ಮಹಿಳೆಯ ಖಾತೆಯಿಂದ 4 ಲಕ್ಷ ರೂ. ವಂಚನೆ ಮಾಡಿರುವ  ಬಗ್ಗೆ ವರದಿಯಾಗಿದೆ. 


COMMERCIAL BREAK
SCROLL TO CONTINUE READING

ಲಿಂಕ್ ಕ್ಲಿಕ್ ಮಾಡುವ ಮುನ್ನ ಇರಲಿ ಎಚ್ಚರ : 
ಕೆಲಸ ಕೊಡಿಸುವುದಾಗಿ ಹೇಳಿ ಕಳುಹಿಸುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ದೆಹಲಿ ಮೂಲದ ಮಹಿಳೆಯೊಬ್ಬರಿಗೆ  ಕೆಲಸ ಕೊಡಿಸುವುದಾಗಿ ಹೇಳಿ ಲಿಂಕ್ ಕಳುಹಿಸಲಾಗಿತ್ತು. ಮಹಿಳೆಗೆ ಇ-ಕಾಮರ್ಸ್ ಕಂಪನಿಯಲ್ಲಿ ಕೆಲಸ ನೀಡು ವುದಾಗಿ SMS ಮೂಲಕ ಲಿಂಕ್ ಕಳುಹಿಸಲಾಗಿತ್ತು. ಆದರೆ ಆ ಲಿಂಕ್ ಅನ್ನು ಕ್ಲಿಕ್ ಮಾಡುತ್ತಿದ್ದಂತೆಯೇ, ಅವರ ಫೋನ್ ಹ್ಯಾಕ್ ಆಗಿದೆ. ಮಾತ್ರವಲ್ಲ  ಖಾತೆಯಿಂದ 4 ಲಕ್ಷ ರೂ. ಮಾಯವಾಗಿದೆ. ಘಟನೆಯ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಇಬ್ಬರನ್ನು ಬಂಧಿಸಲಾಗಿದೆ. 


ಇದನ್ನೂ  ಓದಿ : ಇಂತಹ ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಜೀವ ಉಳಿಸುತ್ತೆ ಸ್ಮಾರ್ಟ್‌ಫೋನ್


ವಂಚಕರ ಹೊಸ ತಂತ್ರ :
ಈ ಆನ್‌ಲೈನ್ ವಂಚಕರು ಈ ಉದ್ಯೋಗಾಕಾಂಕ್ಷಿಗಳ ಹತಾಶೆಯನ್ನು ತಮ್ಮ ಲಾಭಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ. ಹಣ ಪಡೆಯುವ ಉದ್ದೇಶದಿಂದ   ಸುಳ್ಳು ಭರವಸೆಗಳನ್ನು ನೀಡುತ್ತಾರೆ. ಈ ನಿರ್ದಿಷ್ಟ ಸಂದರ್ಭದಲ್ಲಿ, ಸ್ಕ್ಯಾಮರ್‌ಗಳು ಉದ್ಯೋಗಾವಕಾಶವಿರುವುದಾಗಿ ಹೇಳಿ ಆಕಾಂಕ್ಷಿಗಳನ್ನು ನಂಬಿಸುತ್ತಾರೆ. ನಂತರ ಕೆಲಸ ನೀಡುವುದಾಗಿ ಹೇಳಿ ಲಿಂಕ್ ಕಳುಹಿಸುತ್ತಾರೆ. 


ಸುಲಭವಾಗಿ ಸಿಗುತ್ತದೆ ಮೊಬೈಲ್‌ನಲ್ಲಿ ಬಂದ OTP : 
ಇದೊಂದು ಫಿಶಿಂಗ್ ಸ್ಕ್ಯಾಮ್ ಆಗಿರಬಹುದು. ಒಮ್ಮೆ ಲಿಂಕ್ ಕ್ಲಿಕ್  ಮಾಡಿದ ನಂತರ, ಮಾಲ್ವೇರ್ ನಿಮ್ಮನ್ನು ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ ಮತ್ತು ಡೇಟಾವನ್ನು ಕದ್ದು ಮಾಹಿತಿಯನ್ನು ಹ್ಯಾಕರ್‌ಗಳಿಗೆ ರವಾನೆ ಮಾಡುತ್ತದೆ.  ಇದೊಂದು ಭಯಾನಕ ಆನ್‌ಲೈನ್ ಸ್ಕ್ಯಾಮ್ ಆಗಿದ್ದು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ.  ಉದ್ಯೋಗ ಆಕಾಂಕ್ಷಿಗಳ ಬಳಿ ಮಾತನಾಡುವಾಗ ವಂಚಕರು ಲಿಂಕ್ ಅನ್ನು ರಚಿಸುತ್ತಾರೆ. ಉದ್ಯೋಗ ಆಕಾಂಕ್ಷಿಗಳು ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಮೊಬೈಲ್ ಹ್ಯಾಕ್ ಆಗುತ್ತದೆ. ಈ ಮೂಲಕ ಹಣ ವರ್ಗಾವಣೆ ವೇಳೆ ಮೊಬೈಲ್ ನಲ್ಲಿ ಬರುವ OTP ಸುಲಭವಾಗಿ ಹ್ಯಾಕರ್ ಗಳಿಗೆ ಕಾಣಿಸುತ್ತದೆ. 


ಇದನ್ನೂ  ಓದಿ : Google Search: ಗೂಗಲ್‌ನಲ್ಲಿ ಮರೆತೂ ಸಹ ಈ ವಿಷಯಗಳನ್ನು ಹುಡುಕಬೇಡಿ, ಜೈಲು ಪಾಲಾಗಬಹುದು ಎಚ್ಚರ!


ದೆಹಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.