WhatsApp KBC Lottery Scam : ಭಾರತೀಯ ಬಳಕೆದಾರರನ್ನು ಗುರಿಯಾಗಿಸಿಕೊಂಡಿರುವ ವಾಟ್ಸಾಪ್ ಸ್ಕ್ಯಾಮ್ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಕೆಬಿಸಿ ಲಕ್ಕಿ ಡ್ರಾದ ಭಾಗವಾಗಿ 25 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ವಂಚಕರಿಂದ ಸಂದೇಶ ಕಳುಹಿಸಲಾಗುತ್ತದೆ. ಮೊದಲು ಒಂದು ಫೋಟೋ , ನಂತರ ಆಡಿಯೋ ಮೆಸೇಜ್ ಬರುತ್ತದೆ. ಫೋಟೋದಲ್ಲಿ ಕೆಬಿಸಿ ಎಂದು ಬರೆಯಲಾಗಿರುತ್ತದೆ. ಅಷ್ಟೇ ಅಲ್ಲ ಇದರಲ್ಲಿ ಅಮಿತಾಬ್ ಬಚ್ಚನ್, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖೇಶ್ ಅಂಬಾನಿ ಚಿತ್ರಗಳು ಕೂಡಾ ಕಾಣಿಸುತ್ತವೆ.
ನಿಮಗೆ 25 ಲಕ್ಷ ರೂಪಾಯಿ ಲಾಟರಿ ಬಂದಿದೆ ಎಂದು ಈ ಫೋಟೋದಲ್ಲಿ ಬರೆಯಲಾಗಿರುತ್ತದೆ. ಬ್ಯಾಂಕ್ ಖಾತೆಗೆ 25 ಲಕ್ಷ ರೂಪಾಯಿ ಜಮಾ ಆಗುವುದು ಎಂದು ಹೇಳುವ ಆಡಿಯೋದಲ್ಲಿ ಸಂಪೂರ್ಣ ಪ್ರಕ್ರಿಯೆಯನ್ನು ವಿವರಿಸಲಾಗುತ್ತದೆ. ಇದೊಂದು ಮಹಾ ಮೋಸ. ಇದು ನಿಮ್ಮನ್ನು ಸಿರಿವಂತರನ್ನಾಗಿಸುವ ಬದಲು ಕಡು ಬಡವನನ್ನಾಗಿ ಮಾಡುವ ಯೋಜನೆಯಾಗಿದೆ. ಇಂಥಹ ಸಂದೇಶಗಳು ಬಂದರೆ ಯಾವುದೇ ರೀತಿಯಲ್ಲಿಯೂ ಪ್ರತಿಕ್ರಿಯಿಸಲು ಹೋಗಬೇಡಿ. ಸೈಬರ್ ಕ್ರೈಮ್ ಯುನಿಟ್ ಕೂಡಾ ಈ ಬಗ್ಗೆ ಭಾರತೀಯ ವಾಟ್ಸಾಪ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ : ಹಳೆ ಎಸಿ ಕೊಟ್ಟು ಹೊಸದನ್ನು ಪಡೆಯಿರಿ .! ಈ ವಿದ್ಯುಚ್ಛಕ್ತಿ ಕಂಪನಿಯು ನೀಡುತ್ತಿದೆ ಭಾರೀ ಆಫರ್
ಏನಿದೆ ಆಡಿಯೋ ಸಂದೇಶದಲ್ಲಿ :
25 ಲಕ್ಷ ಪಾವತಿಸಿರುವುದಾಗಿ ವಾಟ್ಸಾಪ್ ವಂಚನೆ :
ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಬರೆಯಲಾದ ಸ್ಕ್ರಿಪ್ಟ್ ನಲ್ಲಿ ಲಕ್ಕಿ ಡ್ರಾದ ಭಾಗವಾಗಿ 25 ಲಕ್ಷ ರೂಪಾಯಿ ನಗದು ಬಹುಮಾನವನ್ನು ಗೆದ್ದಿರುವುದಾಗಿ ಹೇಳಲಾಗುತ್ತದೆ. ಸಂದೇಶವನ್ನು +92 315 0609506 ಮೊಬೈಲ್ ಸಂಖ್ಯೆಯಿಂದ ಕಳುಹಿಸಲಾಗುತ್ತಿದೆ. 92 ಪಾಕಿಸ್ತಾನದ ISD ಕೋಡ್ ಆಗಿದೆ.
WhatsApp Scam! अगर आपके पास भी व्हाट्सएप पर ऐसा मैसेज आया है तो सतर्क हो जाएं। लॉटरी के नाम पर लग सकती है चपत pic.twitter.com/YfJeJJFx8O
— mohit chaturvedi (@MohitMohit114) June 28, 2022
ಈ ಮೆಸೇಜ್ ಮೂಲಕ ಬಳಕೆದಾರರನ್ನು ಮೋಸಗೊಳಿಸಲಾಗುತ್ತಿದೆ. ಬ್ಯಾಂಕ್ ಖಾತೆಗಳ ವಿವರವನ್ನು ಪಡೆದು ಕಷ್ಟಪಟ್ಟು ಗಳಿಸಿದ ಹಣವನ್ನು ವಂಚಿಸಲಾಗುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಇದೇ ರೀತಿಯ ಸಂದೇಶ ಬಂದರೆ ಯಾವುದೇ ಕಾರಣಕ್ಕೂ ಉತ್ತರಿಸಬೇಡಿ.
ಇದನ್ನೂ ಓದಿ : Vodafone Idea ಈ ಯೋಜನೆಯಲ್ಲಿ ಕಡಿಮೆ ಬೆಲೆಯಲ್ಲಿ ಡಿಸ್ನಿ + ಹಾಟ್‌ಸ್ಟಾರ್ ಜೊತೆ ಸಿಗುತ್ತಿದೆ ಹಲವು ಲಾಭ
ಹಗರಣವನ್ನು ಹೇಗೆ ಗುರುತಿಸುವುದು ?:
ಲಾಟರಿ ಗೆಲ್ಲುವ ಬಗ್ಗೆ ಮಾತನಾಡುವ ಯಾವುದೇ ಸಂದೇಶವನ್ನು ಎಚ್ಚರಿಕೆಯಿಂದ ಓದಿ. ಈ ರೀತಿಯ ಸಂದೇಶಗಳು ಸಾಮಾನ್ಯವಾಗಿ ವ್ಯಾಕರಣ ದೋಷಗಳನ್ನು ಒಳಗೊಂಡಿರುತ್ತವೆ. ನಮಗೆ ಬಂದಿರುವ ಸಂದೇಶದಲ್ಲಿ ಹಲವು ತಪ್ಪುಗಳಿರುತ್ತವೆ.
ವಂಚನೆಗಳಿಂದ ಸುರಕ್ಷಿತವಾಗಿರುವುದು ಹೇಗೆ ?
ನಿಮಗೆ ಗೊತ್ತಿಲ್ಲದ ಸಂಖ್ಯೆ ಅಥವಾ ದೇಶದ ಕೋಡ್‌ನಿಂದ ಅನುಮಾನಾಸ್ಪದ ಸಂದೇಶ ಬರುತ್ತಿದ್ದರೆ, ಆ ನಂಬರ್ ಅನ್ನು ಬ್ಲಾಕ್ ಮಾಡಿ. ಮೊಬೈಲ್ ಸಂಖ್ಯೆ ಅನುಮಾನಾಸ್ಪದವಾಗಿ ಕಂಡುಬಂದರೆ, ಮೆಸೇಜ್ ಓಪನ್ ಮಾಡಲೇ ಬೇಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.