ಬೆಂಗಳೂರು: ತಂತ್ರಜ್ಞಾನ ಬೆಳವಣಿಗೆಯಾಗುತ್ತಿದ್ದಂತೆ ಮೊಬೈಲ್‌ ನಲ್ಲಿ ಅನಗತ್ಯ ವಿಷಯಗಳ ಸಂಗ್ರಹಣೆ ಹೆಚ್ಚಾಗುತ್ತಿದೆ. ಇವೆಲ್ಲವನ್ನು ಡಿಲೀಟ್ ಮಾಡುವಷ್ಟರಲ್ಲಿ ಸುಸ್ತೋ ಸುಸ್ತು ಎಂಬ ಪರಿಸ್ಥಿತಿ ಎದುರಾಗುವುದು ಖಂಡಿತ, ಆದರೆ ಇಂತಹ ಸಮಸ್ಯೆಗೆ ಪರಿಹಾರ ನೀಡಲು ಬೆಂಗಳೂರು ಮೂಲದ ಗ್ಲಾನ್ಸ್‌ ಕಂಪನಿ ಮುಂದಾಗಿದೆ.


COMMERCIAL BREAK
SCROLL TO CONTINUE READING

ಮೊಬೈಲ್‌ ನಲ್ಲಿ ಯಾವುದೇ ಬೇಕು, ಯಾವುದು ಬೇಡ, ಅನಗತ್ಯ ಮತ್ತು ಕಿರಿ ಕಿರಿ ಮಾಡುವುದನ್ನು ತಪ್ಪಿಸುವ ಸಲುವಾಗಿ,  ಸ್ಮಾರ್ಟ್‌ ಲಾಕ್‌ ವ್ಯವಸ್ಥೆಯ ತಂತ್ರಾಂಶವನ್ನು ಪರಿಚಯಿಸಲಿದೆ.


ಇದನ್ನೂ ಓದಿ: ಅಂದು ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದ ವಿರಾಟ್ ಕೊಹ್ಲಿಯ ಇಬ್ಬರು ಗೆಳೆಯರು ಇಂದು ಅಂಪೈರ್’ಗಳಾಗಿ ನೇಮಕ!


ಗ್ಲಾನ್ಸ್‌ ನವೋದ್ಯಮದ ಮೂಲಕ ಬೆಳೆದು ಬಂದ ಕಂಪನಿ. ಇದೀಗ ಯೂನಿಕಾರ್ನ್‌ ಆಗಿ ಪರಿವರ್ತನೆ ಹೊಂದಿದೆ. ಈ ತಂತ್ರಜ್ಞಾನ ಕಂಪನಿ ಸ್ಮಾರ್ಟ್‌ ಲಾಕ್‌ ಸ್ಕ್ರೀನ್‌ ಗೆ ಹೆಸರುವಾಸಿ. ಇದು ದೇಶದ ಹೆಚ್ಚಿನ ಪ್ರಮುಖ ಆಂಡ್ರಾಯ್ಡ್‌ ಸ್ಮಾರ್ಟ್‌ ಪೋನ್‌ ಬ್ರ್ಯಾಂಡ್‌ ಗಳಲ್ಲಿ ಲಭ್ಯವಿದೆ. ದಕ್ಷಿಣ ಏಷ್ಯಾದಲ್ಲಿ  ಗ್ಲಾನ್ಸ್‌ ಲಾಕ್‌ ಸ್ಕ್ರೀನ್‌ ಅನ್ನು ಸುಮಾರು 450 ದಶಲಕ್ಷ ಮಂದಿ ಬಳಸುತ್ತಿದ್ದಾರೆ. ಇದು ದೇಶದ ಹೆಚ್ಚಿನ ಪ್ರಮುಖ ಆಂಡ್ರಾಯ್ಡ್‌ ಸ್ಮಾರ್ಟ್‌ ಫೋನ್‌ ಬ್ರ್ಯಾಂಡ್‌ ಗಳಲ್ಲಿ ಲಭ್ಯವಿದೆ. ಸಾಧ್ಯವಿರುವ ಪ್ರತಿಯೊಂದು ಮೂಲದಿಂದ ಹರಿದು ಬರುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಗ್ರಾಹಕರು ಯಾವ ವಿಷಯ ಬೇಕು ಎಂಬುದನ್ನು ನಿರ್ಧರಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.


ಗ್ಲಾನ್ಸ್‌ ನ ಮುಖ್ಯ ಮಾರುಕಟ್ಟೆ ಅಧಿಕಾರಿ ಬಿಕಾಶ್‌ ಚೌಧರಿ ಮಾತನಾಡಿ, “ಅದಮ್ಯವಾಗಿರುವ ಮಾನವ ಚೈತನ್ಯ ಯಾವಾಗಲೂ ಹೆಚ್ಚಿನದನ್ನು ಮಾಡುವ ದಾಹ ಹೊಂದಿರುತ್ತದೆ. ನಮ್ಮ ಸ್ಮಾರ್ಟ್‌ ಫೋನ್‌ ಗಳು ಹೆಚ್ಚಿನ ಪ್ರಮಾಣದಲ್ಲಿ ಈ ಅನ್ವೇಷಣೆಯಲ್ಲಿ ನಮಗೆ ಸಹಾಯ ಮಾಡಲು ಕೆಲಸ ಮಾಡಿ ಹೊಸ ಆಲೋಚನೆಗಳನ್ನು ಹುಟ್ಟುಹಾಕಲು ನಮ್ಮ ಒಡನಾಡಿಯಾಗಲಿದೆ. ಆದರೆ ವೇಗವರ್ಧಿತ ಜಗತ್ತಿನಲ್ಲಿ ಮಾಹಿತಿಯ ಮಹಾಪೂರ ನಮ್ಮತ್ತ ಧಾವಿಸುತ್ತಲೇ ಇರುತ್ತದೆ. ಮಾಹಿತಿಗಾಗಿ ಹುಡುವುದು, ಅಪ್ಲಿಕೇಶನ್‌ ಗಳನ್ನು ಡೌನ್‌ ಲೋಡ್‌ ಮಾಡುವುದು, ಅಪ್ಲಿಕೇಶನ್‌ ನಡುವೆ ಬದಲಾವಣೆ ಮಾಡುವುದರಿಂದ ನಾವು ಸಂಕಷ್ಟಕ್ಕೀಡಾಗಿರುತ್ತೇವೆ. ಗ್ಲಾನ್‌ ಸ್ಮಾರ್ಟ್‌ ಲಾಕ್‌ ಸ್ಕ್ರೀನ್‌ ನಲ್ಲಿ ನಾವು ಹುಡುಕುವ ಬದಲು ನಮಗೆ ಅದು ಸಿಗುವಂತೆ ಮಾಡುತ್ತದೆ. ಹೀಗಾಗಿ ನಾವು ಮಾಹಿತಿಗಾಗಿ ಹುಡುಕಾಟ, ಡೌನ್‌ ಲೋಡ್ ಮಾಡಲು ಅಥವಾ ನಮ್ಮ ಸ್ಮಾರ್ಟ್‌ ಫೋನ್‌ ಅನ್ನು ಅನ್‌ ಲಾಕ್‌ ಮಾಡಲು ಸಮಯ ವ್ಯರ್ಥಮಾಡುವ ಅಗತ್ಯವಿಲ್ಲ. ನಮಗೆ ಬೇಕಾಗಿರುವುದು ಒಂದು ನೋಟ ಅಷ್ಟೇ, ಇದು ಸರಳವಾದ ಚತುರತೆಯ ನೋಟ” ಎಂದು ಹೇಳಿದ್ದಾರೆ.


“ಅನೇಕ ಅಪ್ಲಿಕೇಶನ್‌ ಗಳನ್ನು ಹುಡುಕುವುದು, ಡೌನ್‌ ಲೋಡ್‌ ಮಾಡುವುದು, ಬದಲಾಯಿಸುವುದು, ಅಂತ್ಯವಿಲ್ಲದ ಫೀಡ್‌ ಗಳ ಮೂಲಕ ಸ್ಕ್ರೋಲಿಂಗ್‌ ಮಾಡುವುದರಿಂದ ಆಗಾಗ್ಗೆ ಮನಸ್ಸು ಅಯಾಸಗೊಳ್ಳುತ್ತದೆ. ಗ್ಲಾನ್ಸ್‌ ಸ್ಮಾರ್ಟ್‌ ಲಾಕ್‌ ಸ್ಕ್ರೀನ್‌ ನೊಂದಿಗೆ ಗ್ರಾಹಕರು ತಮ್ಮ ವೈವಿಧ್ಯಮಯ ವಿಷಯದ ಅವಶ್ಯಕತೆಗಳಿಗಾಗಿ ಹೆಚ್ಚಿನ ಅಪ್ಲಿಕೇಶನ್‌ ಗಳನ್ನು ಹುಡುಕಲು ಮತ್ತು ಡೌನ್‌ ಲೋಡ್‌ ಮಾಡಲು ಹೆಚ್ಚಿನ ಸಮಯದ ಅಗತ್ಯವಿಲ್ಲ. ನಿಮಗೆ ಬೇಕಾದ ಎಲ್ಲವೂ ಸ್ಮಾರ್ಟ್‌ ಲಾಕ್‌ ಸ್ಕ್ರೀನ್‌ ನಲ್ಲಿ ಲಭ್ಯವಿದೆ” ಎಂದು ಮಾಹಿತಿ ನೀಡಿದ್ದಾರೆ.


ಗ್ಲಾನ್ಸ್‌ ಡೌನ್‌ ಲೋಡ್‌ ಮಾಡುವ ಅಪ್ಲಿಕೇಶನ್‌ ಅಲ್ಲ, ಆದರೆ ಪ್ರಮುಖ ಸ್ಮಾರ್ಟ್‌ ಫೋನ್‌ ಬ್ರ್ಯಾಂಡ್‌ ಗಳ ಆಪರೇಟಿಂಗ್‌ ಸಿಸ್ಟಮ್‌ [ಒಎಸ್]‌ ನಲ್ಲಿ ಪೂರ್ವ ಸಂಯೋಜಿತವಾಗಿರುವ ವೈಶಿಷ್ಟ್ಯವಾಗಿದೆ. ಇದು ಕನ್ನಡ, ಇಂಗ್ಲೀಷ್‌, ಹಿಂದಿ, ತೆಲುಗು, ತಮಿಳು, ಮರಾಠಿ, ಬಂಗಾಳಿ ಸೇರಿ ಹಲವಾರು ಪ್ರಾದೇಶಿಕ ಭಾಷೆಗಳಲ್ಲಿ ಬಳಕೆದಾರರ ಆಸಕ್ತಿ, ಆದ್ಯತೆಗಳ ಆಧಾರದ ಮೇಲೆ ಜಗತ್ತಿಗೆ ಸೂಕ್ತ ವಿಷಯಗಳ ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸುತ್ತಿದೆ. ಬಳಕೆದಾರರ ಒಪ್ಪಿಗೆಯೊಂದಿಗೆ ಮಾತ್ರ ಗ್ಲಾನ್ಸ್‌ ಅನ್ನು ಸಕ್ರಿಯಗೊಳಿಸಬಹುದಾಗಿದೆ.


ಬಳಕೆದಾರರು ತಮ್ಮ ಪೋನ್‌ ಗಳನ್ನು ಅನ್‌ ಲಾಕ್‌ ಮಾಡದೇ ಅಪ್‌ ಡೇಟ್‌ ಮಾಡಬಹುದು. ಟ್ರೇಂಡಿಂಗ್‌ ವಿಷಯಗಳನ್ನು ಅನ್ವೇಷಿಸಬಹುದು, 400 ಕ್ಕೂ ಹೆಚ್ಚು ಆಟಗಳನ್ನು ಆಡಬಹುದು. ಉತ್ಪನ್ನಗಳಿಗಾಗಿ ಶಾಂಪಿಂಗ್‌ ಮಾಡಬಹುದು. 500 ಕ್ಕೂ ಹೆಚ್ಚು ಲೈವ್‌ ಶೋಗಳನ್ನು ಟ್ಯೂನ್‌ ಮಾಡಬಹುದಾಗಿದೆ.


ಇದಕ್ಕಾಗಿ ಗ್ಲಾನ್ಸ್‌ ಕಂಪೆನಿ ಇತ್ತೀಚೆಗೆ ಭಾರತದಾದ್ಯಂತ ದೈತ್ಯ ʼಸರ್ಚ್‌ʼ, ʼಅನ್‌ ಲಾಕ್‌ʼ, ಮತ್ತು ಡೌನ್‌ ಲೋಡ್‌ ಬಟನ್’ಗಳ  ಅನ್ವೇಷಣೆಯಲ್ಲಿ ತೊಡಗಿತ್ತು.


ಇದನ್ನೂ ಓದಿ: 3 ಎಸೆತಕ್ಕೆ 2 ವಿಕೆಟ್ ಉಡೀಸ್..! 186 ದಿನಗಳ ಬಳಿಕ T20ಗೆ ಎಂಟ್ರಿಕೊಟ್ಟು ಅಬ್ಬರಿಸಿದ Team Indiaದ ಸ್ಪಿನ್ ಬೌಲರ್!


ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸ್ಥೆ “ಇತ್ತೀಚಿನ ಟ್ರೆಂಡ್‌ ಗಳಿಂದ ಹಿಡಿದು ನಾವೀನ್ಯತೆಯ ಕ್ರೀಡೆಗಳ ವರೆಗೆ 500 ಕ್ಕೂ ಹೆಚ್ಚು ಆಟಗಳನ್ನು ನಿಮ್ಮ ಗ್ಲ್ಯಾನ್ಸ್‌ ಸ್ಮಾರ್ಟ್‌ ಲಾಕ್‌ ಸ್ಕ್ರೀನ್‌ ನಲ್ಲಿ ನೀವು ಇಷ್ಟಪಡುವ ಎಲ್ಲವನ್ನೂ ಪಡೆಯಬಹುದಾಗಿದೆ. ಇದಕ್ಕಾಗಿ ʼಅನ್‌ ಲಾಕ್‌ʼ, ʼಸರ್ಚ್‌ʼ ಅಥವಾ ಡೌನ್‌ ಲೋಡ್‌ ಮಾಡುವ ಅಗತ್ಯವಿಲ್ಲ. ಜಸ್ಟ್‌ ಗ್ಲ್ಯಾನ್ಸ್‌ ಮಾಡಿದರೆ ಸಾಕು” ಎಂದು ಹೇಳಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ