Water Sprinkler Fan : ಬೇಸಿಗೆ ಕಾಲಿಟ್ಟಾಗಿದೆ. ಮಧ್ಯಾಹ್ನ ಮಾತ್ರವಲ್ಲ ರಾತ್ರಿಯೂ ಬಿಸಿಲಿನ ಅನುಭವವಾಗುತ್ತಿದೆ.ರಾತ್ರಿ ನೆಮ್ಮದಿಯ ನಿದ್ದೆ ಮಾಡುವುದು ಕೂಡಾ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಎಲ್ಲರಿಗೂ ಎಸಿ ಕೊಳ್ಳುವುದು  ಸಾಧ್ಯವಿಲ್ಲ. ಹೀಗಾಗಿ ಜನ ಕೂಲರ್‌ಗಳ ಕಡೆಗೆ ಮುಖ ಮಾಡುತ್ತಾರೆ. ಆದರೆ ವಾಟರ್ ಸ್ಪ್ರೇ ಜೊತೆಗೆ ತಂಪಾದ ಗಾಳಿ ನೀಡುವಂಥಹ ಫ್ಯಾನ್‌ಗಳು ಈಗ ಮಾರುಕಟ್ಟೆಗೆ ಕಾಲಿಟ್ಟಿವೆ. ಸುಡು ಬಿಸಿಲಿನಲ್ಲಿಯೂ ಇದು ತಂಪು ವಾತಾವರಣವನ್ನು ನಿರ್ಮಾಣ ಮಾಡುತ್ತದೆ. ಹೀಗಾಗಿ ನಿದ್ದೆಗೆ ಯಾವುದೇ ರೀತಿಯಲ್ಲಿಯೂ ಭಂಗ ಬರುವುದಿಲ್ಲ. 


COMMERCIAL BREAK
SCROLL TO CONTINUE READING

ವಾಟರ್ ಸ್ಪ್ರಿಂಕ್ಲರ್ ಫ್ಯಾನ್ : 
ಮಾರುಕಟ್ಟೆಯಲ್ಲಿ ಹಲವಾರು ರೀತಿಯ ವಾಟರ್ ಸ್ಪ್ರಿಂಕ್ಲರ್ ಫ್ಯಾನ್‌ಗಳು ಲಭ್ಯವಿವೆ. ಈ ಫ್ಯಾನ್ ಗಾಳಿ ಮತ್ತು ನೀರಿನ ಸ್ಪ್ರೇ ಅನ್ನು ಸಂಯೋಜಿಸುವ ಮೂಲಕ ತಂಪಾದ ಗಾಳಿಯನ್ನು ನೀಡುತ್ತದೆ.ಇದನ್ನು ಫ್ಯಾನ್ ವಿಭಾಗದಲ್ಲಿ ಇರಿಸಲಾಗಿದೆ. ಇಂತಹ ಫ್ಯಾನ್ ಗಳು ಹೆಚ್ಚಾಗಿ ಮದುವೆ ಅಥವಾ ಪಾರ್ಟಿಗಳಲ್ಲಿ ಕಾಣಿಸುತ್ತವೆ. ಆದರೆ ಇದನ್ನು ಮನೆಯಲ್ಲಿಯೂ ಬಳಸಬಹುದು.


ಇದನ್ನೂ ಓದಿ : ಡಿಎ ಹೆಚ್ಚಳವಾಯ್ತು ! ಇದೀಗ ಮತ್ತೊಂದು ಭತ್ಯೆಯಲ್ಲಿ ಹೆಚ್ಚಳ ! ಸರ್ಕಾರಿ ನೌಕರರ ವೇತನದಲ್ಲಿ ಆಗಲಿದೆ 12,600 ರೂ.ಹೆಚ್ಚಳ


ಬಿಸಿ ಗಾಳಿಯನ್ನು ತಂಪಾಗಿಸುತ್ತದೆ : 
ಈ ಫ್ಯಾನ್ ಸಾಮಾನ್ಯ ಫ್ಯಾನ್ ಗಿಂತ ಭಿನ್ನವಾಗಿದೆ. ನೀರಿನ ಹನಿಗಳೊಂದಿಗೆ ಬಿಸಿ ಗಾಳಿಯನ್ನು ತಂಪಾಗಿಸುವ ಮೂಲಕ ಇದು ನಿಮಗೆ ಅದ್ಭುತವಾದ ಪರಿಹಾರವನ್ನು ನೀಡುತ್ತದೆ.ಈ ಫ್ಯಾನ್ ತಂಪಾದ ಗಾಳಿ ಮತ್ತು ಆಹ್ಲಾದಕರ ವಾತಾವರಣವನ್ನು ಒದಗಿಸುತ್ತದೆ.


ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?
- ಫ್ಯಾನ್ ನೀರಿನ ಟ್ಯಾಪ್‌ಗೆ ಸಂಪರ್ಕ ಹೊಂದಿರುತ್ತದೆ. 
- ಈ ಫ್ಯಾನ್‌ನಲ್ಲಿ ಸಣ್ಣ ರಂಧ್ರಗಳಿವೆ.
- ನೀವು ಟ್ಯಾಪ್ ಅನ್ನು ಆನ್ ಮಾಡಿ ಜೊತೆಗೆ ಫ್ಯಾನ್ ಅನ್ನು ಆನ್ ಮಾಡಿದಾಗ, ನೀರಿನ ಹನಿಗಳನ್ನು ಹೊಂದಿರುವ ಗಾಳಿಯು ಹೊರಬರುತ್ತದೆ.
- ನಿಮ್ಮ ಆಯ್ಕೆಯ ಪ್ರಕಾರ ನೀವು ನೀರಿನ ಪ್ರಮಾಣವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.


ಇದನ್ನೂ ಓದಿ : ಮುಖೇಶ್, ಅನಿಲ್ ಅಂಬಾನಿ ಜಗತ್ತಿಗೇ ಗೊತ್ತು! ತೆರೆಮರೆಯಲ್ಲಿರುವ ಅಂಬಾನಿ ಸಹೋದರಿಯರ ಬಗ್ಗೆ ಗೊತ್ತಾ ? ಸಂಪತ್ತಿನಲ್ಲಿ ಸಹೋದರರಿಗೆ ಸರಿ ಸಮಾನವಾಗಿ ನಿಂತಿರುವ ಚೆಂದುಳ್ಳಿ ಚೆಲುವೆಯರು !


amazon ನಲ್ಲಿ ಲಭ್ಯವಿದೆ : 
 ಈ ಫ್ಯಾನ್ ಅನ್ನು ಆಫ್‌ಲೈನ್ ಮಾರುಕಟ್ಟೆಯಲ್ಲಿ ಯಾವುದೇ ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಖರೀದಿಸಬಹುದು. ಆನ್‌ಲೈನ್ ಖರೀದಿಸುವುದಾದರೆ Amazonನಲ್ಲಿ ಕೇವಲ 3,991 ರೂಗಳಲ್ಲಿ ಖರೀದಿಸಬಹುದು.ಅದರ ನಿಜವಾದ ಬೆಲೆ 18,145 ರೂ ಆಗಿದ್ದರೂ, ಈಗ ಈ ಫ್ಯಾನ್ ಮೇಲೆ 78 ಶೇ.ದಷ್ಟು ರಿಯಾಯಿತಿ ನೀಡಲಾಗುತ್ತಿದೆ.  



https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ