ಮಿಲಿಯನ್ ಗಟ್ಟಲೆ ವ್ಯವಹಾರಕ್ಕೆ ಹೆಗಲು ಕೊಡುತ್ತಿರುವ ಟಾಟಾ ಕುಟುಂಬದ ಹೆಣ್ಣು ಮಕ್ಕಳಿವರು!ಪ್ರಚಾರದಿಂದ ದೂರ ಉಳಿದಿರುವ ಅತಿರೇಕ ಸುಂದರಿಯರು !

Kids Of Tata Family : ಟಾಟಾಸನ್ಸ್ ಮುಖ್ಯಸ್ಥರಾಗಿದ್ದ ರತನ್ ಟಾಟಾ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಮುಂದೆ ತಾತಾ ಸಾಮ್ರಾಜ್ಯವನ್ನು ಮುಂದುವರೆಸಿಕೊಂಡು ಹೋಗುವವರು ಈ ಹೆಣ್ಣು ಮಕ್ಕಳು. 

Ratan Tata Family : 22 ವರ್ಷಗಳ ಕಾಲ ಟಾಟಾಸನ್ಸ್ ಮುಖ್ಯಸ್ಥರಾಗಿದ್ದ ರತನ್ ಟಾಟಾ ನಿವೃತ್ತರಾಗಿದ್ದಾರೆ. ಈಗ ಅವರು ಟಾಟಾ ಸಮೂಹದ ಗೌರವ ಅಧ್ಯಕ್ಷ. ಹಾಗಿದ್ದರೆ ರತನ್ ಟಾಟಾ ನಿವೃತ್ತಿಯ ನಂತರ, ಟಾಟಾದ ಈ ಬೃಹತ್ ಸಾಮ್ರಾಜ್ಯವನ್ನು  ನಿರ್ವಹಿಸಿಕೊಂಡು ಹೋಗುವವರು ಯಾರು ಈನುವ ಪ್ರಶ್ನೆಗಳು ಎದ್ದಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಉಪ್ಪಿನಿಂದ ಏರೋಪ್ಲೇನ್‌ಗಳವರೆಗೆ, ಸೂಜಿಯಿಂದ ಟ್ರಕ್‌ಗಳವರೆಗೆ, ನಿಮ್ಮ ಅಡುಗೆಮನೆಯಿಂದ ತಂತ್ರಜ್ಞಾನದವರೆಗೆ... ಟಾಟಾ ಉತ್ಪನ್ನಗಳು ಕಂಡುಬರದ ಕ್ಷೇತ್ರವೇ ಇಲ್ಲ. 22 ವರ್ಷಗಳ ಕಾಲ ಟಾಟಾಸನ್ಸ್ ಮುಖ್ಯಸ್ಥರಾಗಿದ್ದ ರತನ್ ಟಾಟಾ ನಿವೃತ್ತಿ ಘೋಷಿಸಿದ್ದಾರೆ. ರತನ್ ಟಾಟಾ ಅವರಿಗೆ ಮದುವೆಯಾಗಿಲ್ಲ. ಹಾಗಾಗಿ ರತನ್ ಟಾಟಾ  ನಂತರ ಆ ಸಾಮ್ರಾಜ್ಯವನ್ನು ಮುಂದುವರೆಸಿಕೊಂಡು ಹೋಗುವವರು ಯಾರು ಎನ್ನುವ ಪ್ರಶ್ನೆ ಎದ್ದಿದೆ. ರತನ್ ಟಾಟಾ ಅವರಿಗೆ ಮಕ್ಕಳಿಲ್ಲ ನಿಜ. ಆದರೆ ಟಾಟಾ ಕುಟುಂಬವು ತುಂಬಾ ದೊಡ್ಡದಾಗಿದೆ.ಟಾಟಾ ಕುಟುಂಬದ ಮಕ್ಕಳು ವ್ಯಾಪಾರದ ಜವಾಬ್ದಾರಿ ವಹಿಸಿಕೊಳ್ಳಲು ತಯಾರಾಗುತ್ತಿದ್ದಾರೆ.  

2 /6

ಈಗ ಈ ಉದ್ಯಮವನ್ನು ಕೈಗೆತ್ತಿಕೊಳ್ಳಲು  ಟಾಟಾ ಕುಟುಂಬದ ಇಬ್ಬರು ಹೆಣ್ಣುಮಕ್ಕಳು  ಸಿದ್ಧರಾಗಿದ್ದಾರೆ.ಕಂಪನಿಗೆ ಸೇರುವ ಮೂಲಕ, ವ್ಯವಹಾರವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ.ಅವರೇ ಲಿಯಾ ಟಾಟಾ ಮತ್ತು ಮಾಯಾ ಟಾಟಾ. ರತನ್ ಟಾಟಾ ಮಲ ಸಹೋದರ ನೋಯೆಲ್ ಟಾಟಾ ಅವರ ಇಬ್ಬರು ಪುತ್ರಿಯರಾದ ಲಿಯಾ ಮತ್ತು ಮಾಯಾ ಮತ್ತು ಅವರ ಮಗ ನೆವಿಲ್ಲೆ ಟಾಟಾ ಟಾಟಾಸನ್‌ನ ವಿವಿಧ ಕಂಪನಿಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.ಈ ಮಕ್ಕಳು ಕ್ಯಾಮೆರಾ ಮತ್ತು ಲೈಮ್‌ಲೈಟ್‌ಗಳಿಂದ ಸದಾ ದೂರವೆ ಉಳಿದಿದ್ದಾರೆ.   

3 /6

ರತನ್ ಟಾಟಾ ಅವರ ಮಲ ಸಹೋದರ ನೋಯೆಲ್ ಟಾಟಾ ಅವರು ಟಾಟಾ ಗ್ರೂಪ್‌ನ ಫ್ಯಾಶನ್ ವ್ಯವಹಾರ 'ಟ್ರೆಂಟ್' ಅನ್ನು ನಿರ್ವಹಿಸುತ್ತಿದ್ದಾರೆ. ಲಿಯಾ ಅವರ ಹಿರಿಯ ಮಗಳು. 38 ವರ್ಷದ ಲಿಯಾ ಟಾಟಾದ ಹಾಲ್ಟ್ ಇಂಡಸ್ಟ್ರೀಸ್ (ತಾಜ್ ಹೊಟೇಲ್) ವ್ಯವಹಾರವನ್ನು ನಿರ್ವಹಿಸುತ್ತಿದ್ದಾರೆ.ಈಗ ಅವರು ರಿಯಲ್ ಎಸ್ಟೇಟ್ ಮತ್ತು ಅಭಿವೃದ್ಧಿ ತಂಡದ ಭಾಗವಾಗಿದ್ದಾರೆ.ತಾಜ್ ಹೋಟೆಲ್ ಹೊರತಾಗಿ,ಅವರು ಟಾಟಾ ಮೆಡಿಕಲ್ ಸೆಂಟರ್ ಟ್ರಸ್ಟ್‌ನ ಟ್ರಸ್ಟಿ ಮತ್ತು ಕೋಲ್ಕತ್ತಾದ ಟಾಟಾ ಕ್ಯಾನ್ಸರ್ ಆಸ್ಪತ್ರೆಯ ಉಸ್ತುವಾರಿ ಕೂಡಾ  ಆಗಿದ್ದಾರೆ.  

4 /6

ಮಾಯಾ ಕೂಡಾ ರತನ್ ಟಾಟಾ ಸಹೋದರನ ಮಗಳು. ಟಾಟಾಸನ್ಸ್‌ನಲ್ಲಿ ದೊಡ್ಡ ಜವಾಬ್ದಾರಿ  ವಹಿಸಿಕೊಂಡಿದ್ದಾರೆ. ಬ್ರಿಟನ್‌ನ ಬೇಯೆಸ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಓದಿದ ನಂತರ, ಅವರು ಟಾಟಾ ಡಿಜಿಟಲ್ ವಲಯದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಲ್ಲಿನ ಸಾಧ್ಯತೆಗಳನ್ನು ಅನ್ವೇಷಿಸುವುದು ಅವರ ಜವಾಬ್ದಾರಿಯಾಗಿದೆ.ಟಾಟಾ ಕುಟುಂಬ ಇವರಿಂದ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

5 /6

ನೋಯೆಲ್ ಟಾಟಾ ಅವರ ಏಕೈಕ ಪುತ್ರ ನೇವಲ್ ಟಾಟಾ. ರಿಟೇಲ್ ವ್ಯಾಪಾರದ ಮೇಲೆ ಇವರ ಗಮನ.  ನೇವಲ್ ಟಾಟಾ, ಬೇಯೆಸ್ ಬ್ಯುಸಿನೆಸ್ ಸ್ಕೂಲ್ ಪದವೀಧರರು, ಟಾಟಾದ ರಿಟೇಲ್ ಬ್ರ್ಯಾಂಡ್ ಟ್ರೆಂಟ್ ಹೈಪರ್‌ಮಾರ್ಕೆಟ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯಸ್ಥ. ಇದು ಟಾಟಾದ ವಿವಿಧ ರಿಟೇಲ್ ಬ್ರಾಂಡ್‌ಗಳಾದ ವೆಸ್ಟ್‌ಸೈಡ್ ಮತ್ತು ಸ್ಟಾರ್ ಮಾರ್ಕೆಟ್ ಅನ್ನು ನಿರ್ವಹಿಸುತ್ತದೆ.  ನೇವಲ್ ಟಾಟಾ ಅವರ ಪತ್ನಿ ಮಾನ್ಸಿ ಕಿರ್ಲೋಸ್ಕರ್, ಕಿರ್ಲೋಸ್ಕರ್ ಕಂಪನಿಯ ನಿರ್ದೇಶಕಿ.

6 /6

ಟಾಟಾ ಕುಟುಂಬದ ಕುಡಿಗಳು ಅಂಬಾನಿ ಕುಟುಂಬದ ಮಕ್ಕಳಷ್ಟು ಜನಪ್ರಿಯರಾಗಿಲ್ಲದಿರಬಹುದು,ಆದರೆ ಅವರು ವ್ಯಾಪಾರ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ,ನೋಯೆಲ್ ಟಾಟಾ ಅವರ ಎಲ್ಲಾ ಮೂರು ಮಕ್ಕಳನ್ನು ಟಾಟಾ ಮೆಡಿಕಲ್ ಸೆಂಟರ್ ಟ್ರಸ್ಟ್‌ನ ಮಂಡಳಿಯ ಸದಸ್ಯರನ್ನಾಗಿ ಸೇರಿಸಲಾಗಿದೆ.ಟಾಟಾದ ಮುಂದಿನ ಎಜಿಎಂನಲ್ಲಿ ಇವುಗಳ ಬಗ್ಗೆ ಘೋಷಣೆಗಳನ್ನು ಮಾಡಲಾಗುವುದು ಎನ್ನಲಾಗಿದೆ.