Jioದ ಈ ರಿಚಾರ್ಜ್ ಪ್ಲಾನ್ ನಲ್ಲಿ 3 ತಿಂಗಳು ಉಚಿತವಾಗಿ ಸಿಗುತ್ತದೆ Disney+ Hotstar
Reliance Jio Entertainment Plan: ಇಂದು ನಾವು ನಿಮಗೆ ಜಿಯೋದ ಒಂದು ರಿಚಾರ್ಜ್ ಪ್ಲಾನ್ ಬಗ್ಗೆ ಹೇಳಲಿದ್ದೇವೆ.ಇದರಲ್ಲಿ ಬಳಕೆದಾರರು ಡಿಸ್ನಿ + ಹಾಟ್‌ಸ್ಟಾರ್‌ನ ಉಚಿತ ಚಂದಾದಾರಿಕೆಯನ್ನು ಪಡೆಯುತ್ತಾರೆ.
Reliance Jio Entertainment Plan : ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ದೇಶಾದ್ಯಂತ ಕೋಟಿಗಟ್ಟಲೆ ಬಳಕೆದಾರರನ್ನು ಹೊಂದಿದೆ. ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಕಂಪನಿಯು ವಿವಿಧ ಬೆಲೆ ಶ್ರೇಣಿಗಳಲ್ಲಿ ಅನೇಕ ರೀಚಾರ್ಜ್ ಪ್ಲಾನ್ ಗಳನ್ನು ನೀಡುತ್ತದೆ. ಈ ರೀಚಾರ್ಜ್ ಯೋಜನೆಗಳಲ್ಲಿ, ಡೇಟಾ, ಕರೆ ಮತ್ತು SMS ಜೊತೆಗೆ OTT ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯನ್ನು ನೀಡುವ ಕೆಲವು ಯೋಜನೆಗಳಿವೆ. ಇಂದು ನಾವು ನಿಮಗೆ ಜಿಯೋದ ಒಂದು ರಿಚಾರ್ಜ್ ಪ್ಲಾನ್ ಬಗ್ಗೆ ಹೇಳಲಿದ್ದೇವೆ. ಇದರಲ್ಲಿ ಬಳಕೆದಾರರು ಡಿಸ್ನಿ + ಹಾಟ್‌ಸ್ಟಾರ್‌ನ ಉಚಿತ ಚಂದಾದಾರಿಕೆಯನ್ನು ಪಡೆಯುತ್ತಾರೆ.
ಜಿಯೋದ ಪೈಸಾ ವಸೂಲ್ ಪ್ಲಾನ್ :
ಜಿಯೋ ಪೋರ್ಟ್‌ಫೋಲಿಯೊದಲ್ಲಿ ವಿವಿಧ ಬೆಲೆ ಶ್ರೇಣಿಗಳಲ್ಲಿ ಹಲವು ರೀಚಾರ್ಜ್ ಯೋಜನೆಗಳಿವೆ. ಆದರೆ, ಜಿಯೋದ ಪೋರ್ಟ್‌ಫೋಲಿಯೊವನ್ನು ಎಚ್ಚರಿಕೆಯಿಂದ ನೋಡಿದರೆ, 949 ರೂ.ಗಳ ಪ್ಲಾನ್ ಕಾಣಿಸುತ್ತದೆ. ಜಿಯೋ ವೆಬ್‌ಸೈಟ್‌ನಲ್ಲಿ ಎಂಟರ್‌ಟೈನ್‌ಮೆಂಟ್ ಪ್ಲಾನ್‌ಗಳ ವಿಭಾಗದಲ್ಲಿ ಈ ರಿಚಾರ್ಜ್ ಪ್ಲಾನ್ ಕಾಣಿಸುತ್ತದೆ. ಈ ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.
ಇದನ್ನೂ ಓದಿ : ಹೊಸ ವರ್ಷದಲ್ಲಿ 100 ರೂ.ಗಿಂತ ಕಡಿಮೆ ಬೆಲೆಯ ಧಮಾಕ ಆಫರ್ ಪರಿಚಯಿಸಿದ ಬಿಎಸ್‌ಎನ್‌ಎಲ್
ಯೋಜನೆಯ ಪ್ರಯೋಜನಗಳು:
ಈ ಯೋಜನೆಯಲ್ಲಿ, ಜಿಯೋ ಬಳಕೆದಾರರು ಪ್ರತಿದಿನ 100 ಟೆಕ್ಸ್ಟ್ ಮೆಸೇಜ್ ಕಳುಹಿಸುವ ಸೌಲಭ್ಯವನ್ನು ಪಡೆಯುತ್ತಾರೆ. ಈ ಯೋಜನೆಯು ಬಳಕೆದಾರರಿಗೆ ಒಟ್ಟು 168 GB ಡೇಟಾವನ್ನು ನೀಡುತ್ತದೆ. ಈ ರೀತಿಯಲ್ಲಿ ಬಳಕೆದಾರರು ದಿನಕ್ಕೆ 2 GB ಪಡೆಯುತ್ತಾರೆ. ಅಲ್ಲದೆ, 5G ಫೋನ್ ಬಳಸುತ್ತಿದ್ದು, ನಿಮ್ಮ ಏರಿಯಾದಲ್ಲಿ 5G ನೆಟ್‌ವರ್ಕ್ ಲಭ್ಯವಿದ್ದರೆ, 5G ಇಂಟರ್ನೆಟ್ ಅನ್ನು ಸಹ ಬಳಸಬಹುದು.
ಪ್ಲಾನ್‌ನ ವಿಶೇಷತೆ:
ಈ ಪ್ಲಾನ್‌ನ ದೊಡ್ಡ ವಿಶೇಷವೆಂದರೆ ಇದರಲ್ಲಿ ಬಳಕೆದಾರರು 3 ತಿಂಗಳವರೆಗೆ ಅಂದರೆ 90 ದಿನಗಳವರೆಗೆ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್‌ನ ಉಚಿತ ಚಂದಾದಾರಿಕೆಯನ್ನು ಪಡೆಯುತ್ತಾರೆ. ಇದಲ್ಲದೆ, ಇದರಲ್ಲಿ ಬಳಕೆದಾರರು ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ನ ಉಚಿತ ಚಂದಾದಾರಿಕೆಯನ್ನು ಕೂಡಾ ಪಡೆಯುತ್ತಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಚಲನಚಿತ್ರಗಳು, ವೆಬ್ ಸರಣಿಗಳು ಇತ್ಯಾದಿಗಳನ್ನು ವೀಕ್ಷಿಸಲು ಇಷ್ಟಪಡುವ ಬಳಕೆದಾರರಿಗೆ ಈ ಯೋಜನೆಗಳು ಉತ್ತಮವಾಗಿದೆ. ಈ ಪ್ಲಾನ್ ಅನ್ನು ರೀಚಾರ್ಜ್ ಮಾಡಲು ಬಯಸಿದರೆ, ಅದನ್ನು Jioನ ಅಧಿಕೃತ ವೆಬ್‌ಸೈಟ್, My Jio ಅಪ್ಲಿಕೇಶನ್ ಮತ್ತು Google Pay, Phone Pay ಮುಂತಾದ ಆನ್‌ಲೈನ್ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಮಾಡಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.