WhatsApp: ಬದಲಾವಣೆ ಜಗದ ನಿಯಮ ಎನ್ನುವ ಮಾತು ತಂತ್ರಜ್ಞಾನ ಜಗತ್ತಿಗೆ ಹೆಚ್ಚು ಅನ್ವಯವಾಗುತ್ತದೆ. ಅದರಲ್ಲೂ ಇಂಟರ್ನೆಟ್ ಬಳಸಿ ಮಾಡುವ ಕೌಶಲ್ಯಗಳಂತೂ ಎಷ್ಟು ಅಪಡೇಟ್ ಆದ್ರೂ ಕಮ್ಮಿ ಎನ್ನುವಂತಾಗಿದೆ. ಸದ್ಯದ ಉತ್ಕೃಷ್ಟಗೊಂಡಿರುವ ವಾಟ್ಸಪ್ ಅಪ್ಲಿಕೇಶನ್ ನಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವಿಮಾ ಪಾಲಿಸಿ ಮತ್ತಿತರ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಈಗ ಮೊಬೈಲ್ ಇಲ್ಲದೆ ಇರುವವರನ್ನು ಹೇಗೆ ಊಹಿಸಿಕೊಳ್ಳಲು ಸಾಧ್ಯವಿಲ್ಲವೋ, ಹಾಗೆ ವಾಟ್ಸಪ್ ಇಲ್ಲದವರನ್ನೂ ಅಂದಾಜು ಮಾಡಿಕೊಳ್ಳುವುದು ಕಮ್ಮಿ. ಮೆಟಾ ಮಾಲೀಕತ್ವದ ವಾಟ್ಸಪ್ ಅಪ್ಲಿಕೇಶನ್ ಕೇವಲ ಚಾಟ್ ಮಾಡುವ, ಫೋಟೋ ವಿಡಿಯೋ ಷೇರು ಮಾಡುವ ಅಥವಾ ವಿಡಿಯೋ ಕಾಲ್ ಮಾಡುವುದಕ್ಕಷ್ಟೇ ಸೀಮಿತವಾಗಿಲ್ಲ. ನಾನಾ ರೀತಿಯಲ್ಲಿ ಬಳಸಬಹುದಾಗಿದೆ. ಅವುಗಳ ಪೈಕಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವಿಮಾ ಪಾಲಿಸಿ ಮತ್ತಿತರ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದು ವಿಶೇಷವಾಗಿದೆ.
ಇದನ್ನೂ ಓದಿ- Jio 200 ರೂ.ಗಿಂತ ಕಡಿಮೆ ಬೆಲೆಯ ಬೊಂಬಾಟ್ ರಿಚಾರ್ಜ್ ಪ್ಲಾನ್
ಸದ್ಯ MyGov ನೀಡಿರುವ ವಾಟ್ಸಪ್ ಚಾಟ್ ಬಾಕ್ಸ್ ನಲ್ಲಿ ಹಲವು ಸೇವೆಗಳನ್ನು ನೀಡಲಾಗಿದೆ. ಇದರ ಸಹಾಯದಿಂದ ಡಿಜಿಲಾಕರ್ ಅನ್ನು ರಚಿಸಬಹುದು. ದೃಢೀಕರಣ ಮಾಡಬಹುದು. ಜೊತೆಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಆಧಾರ್, ಡ್ರೈವಿಂಗ್ ಲೈಸೆನ್ಸ್ ಮತ್ತಿತರ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಇದನ್ನೂ ಓದಿ- ಎಷ್ಟೇ ಪ್ರಯತ್ನಿಸಿದರೂ, ನಿಮ್ಮ ಚಾಟ್‌ಗಳನ್ನು ಓದಲಾಗುವುದಿಲ್ಲ! ವಾಟ್ಸಾಪ್‌ನಲ್ಲಿ ರಹಸ್ಯ ಕೋಡ್ ಇರಿಸಿಕೊಳ್ಳಿ
MyGov ಹೆಲ್ಪ್ ಲೈನ್ ವಾಟ್ಸಪ್ ಆ್ಯಪ್ನ ಸಹಾಯವಾಣಿ ನಂಬರ್ ಒಂದನ್ನು ನೀಡಿದ್ದು ಅದರ ನೆರವಿನಿಂದ ಡಿಜಿಲಾಕರ್ ಖಾತೆಗೆ ಸೈನ್ ಅಪ್ ಆಗಬೇಕು. ನಂತರ ಡಿಜಿಲಾಕರ್ ಮೂಲಕ ದಾಖಲೆಗಳನ್ನು ವಾಟ್ಸಪ್ ನಲ್ಲೇ ತೆಗೆದುಕೊಳ್ಳಬಹುದು. ಒಂದೊಮ್ಮೆ ಈಗಾಗಲೇ ಡಿಜಿಲಾಕರ್ ಖಾತೆ ಹೊಂದಿದ್ದರೆ ದಾಖಲೆಗಳನ್ನು ತೆಗೆಯುವುದು ಮತ್ತಷ್ಟು ಸುಲಭವಾಗುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.