Best Selling Electric Scooter : 2022 ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟ ಹೆಚ್ಚಾಗಿದೆ. ಅಂಕಿಅಂಶಗಳನ್ನು ನೋಡಿದರೆ, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟದಲ್ಲಿ 305% ಕ್ಕಿಂತ ಹೆಚ್ಚು  ಗ್ರೋಥ್ ಕಂಡುಬಂದಿದೆ. 2022 ರಲ್ಲಿ ಒಟ್ಟು 6,15,365 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದೆ.  ಅದೇ 2019 ರಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಒಟ್ಟು ಮಾರಾಟವು 28,280 ಯುನಿಟ್ ಆಗಿದೆ.  2021ರಲ್ಲಿ ಇದು 1.51 ಲಕ್ಷ ಯೂನಿಟ್‌ಗಳಿಗೆ ಏರಿಕೆಯಾಗಿದೆ. ಮೂರು ಕಂಪನಿಗಳ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ. 2022 ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿರುವ ಟಾಪ್ 3 ಕಂಪನಿಗಳ  ಮಾಹಿತಿ ಇಲ್ಲಿದೆ. 


COMMERCIAL BREAK
SCROLL TO CONTINUE READING

1. ಓಲಾ ಎಲೆಕ್ಟ್ರಿಕ್ :
ಓಲಾ ಎಲೆಕ್ಟ್ರಿಕ್ 2022 ರಲ್ಲಿ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿರುವ ಕಂಪನಿಯಾಗಿದೆ. ಇದು ಒಟ್ಟು 1,08,130 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಅದರಲ್ಲೂ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಈ ಕಂಪನಿಯ ಸ್ಕೂಟರ್ ಹೆಚ್ಚು ಮಾರಾಟವಾಗಿದೆ. ಕಂಪನಿಯು Ola S1, Ola S1 Pro, Ola S1 Air ನಂತಹ ಉತ್ತಮ ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಪೈಕಿ Ola S1 Pro ಉತ್ತಮ ರೇಂಜ್ ನೀಡುತ್ತದೆ. 


ಇದನ್ನೂ ಓದಿ : 32 ಇಂಚಿನ ಬೆಲೆಯಲ್ಲಿ 55 ಇಂಚಿನ ಸ್ಮಾರ್ಟ್ ಟಿವಿ.! ಮುಗಿ ಬಿದ್ದು ಖರೀದಿಸುತ್ತಿರುವ ಗ್ರಾಹಕರು .!


2. ಓಕಿನಾವಾ ಆಟೋಟೆಕ್ :
ಓಕಿನಾವಾ ಆಟೋಟೆಕ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಂಪನಿಯ iPraise+ ಮತ್ತು Praise Pro ಸ್ಕೂಟರ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಪ್ರಸ್ತುತ ಕಂಪನಿಯು ಪ್ರಮುಖ ಮೆಟ್ರೋ ನಗರಗಳಲ್ಲಿ 350 ಕ್ಕೂ ಹೆಚ್ಚು  ಡೀಲರ್ ನೆಟ್ವರ್ಕ್ ಹೊಂದಿದೆ.


3. ಹೀರೋ ಎಲೆಕ್ಟ್ರಿಕ್ :
ಮಾರಾಟದ ವಿಚಾರದಲ್ಲಿ ಹೀರೋ ಎಲೆಕ್ಟ್ರಿಕ್ ಮೂರನೇ ಸ್ಥಾನದಲ್ಲಿದೆ. ಇದು 2022 ರಲ್ಲಿ ಒಟ್ಟು 96,906 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಮಾರ್ಚ್ 2022 ರಲ್ಲಿ 10,000-ಯೂನಿಟ್ ಸ್ಕೂಟರ್ ಮಾರಾಟವಾದ ಮೊದಲ ಕಂಪನಿಯಾಗಿದೆ. ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ವ್ಯಾಪಕ ಪೋರ್ಟ್‌ಫೋಲಿಯೊವನ್ನು ಹೊಂದಿದೆ. 


ಇದನ್ನೂ ಓದಿ : ಇನ್ಮುಂದೆ ಈ 49 ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸಲ್ಲ WhatsApp- ಈ ಪಟ್ಟಿಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ ಇದೆಯೇ?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.