Social Media: ಜೀವನದಲ್ಲಿ ವಿಷ ಬೆರೆಸುತ್ತಿವೆ ಸಾಮಾಜಿಕ ಮಾಧ್ಯಮಗಳು, ಇಂದಿನಿಂದಲೇ ಈ ಕೆಲಸ ಮಾಡಿ

Social Media Use: ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆ ನಿಮ್ಮ ಮಾನಸಿಕ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಮತ್ತು ನಿಮ್ಮನ್ನು ಇತರರೊಂದಿಗೆ ಹೋಲಿಸಲು ಅದು ನಿಮ್ಮನ್ನು ಹೇಗೆ ಒತ್ತಾಯಿಸುತ್ತದೆ?  

Written by - Nitin Tabib | Last Updated : Jan 2, 2023, 08:12 PM IST
  • ವಿಶ್ವಾದ್ಯಂತ ಕರೋನಾ ಸಾಂಕ್ರಾಮಿಕ ಸಮಯದಲ್ಲಿ,
  • ಕಳಪೆ ಮಾನಸಿಕ ಆರೋಗ್ಯದಿಂದ ಬಳಲುತ್ತಿರುವವರ ಸಂಖ್ಯೆ ಶೇ.66 ಕ್ಕೆಏರಿದೆ.
  • ಏಕೆಂದರೆ ಹೆಚ್ಚಿನವರು ಮನೆಯಲ್ಲೇ ಇದ್ದು ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುತ್ತಿದ್ದರು.
Social Media: ಜೀವನದಲ್ಲಿ ವಿಷ ಬೆರೆಸುತ್ತಿವೆ ಸಾಮಾಜಿಕ ಮಾಧ್ಯಮಗಳು, ಇಂದಿನಿಂದಲೇ ಈ ಕೆಲಸ ಮಾಡಿ title=
Social Media Side Effects

Social Media Affects Mental Health: ಸಾಮಾಜಿಕ ಮಾಧ್ಯಮಗಳು ಜನರ ಜೀವನವನ್ನು ಎಷ್ಟೊಂದು ಸುಲಭಗೊಳಿಸಿವೆಯೋ ಅಷ್ಟೇ ಜನರ ಜೀವನವನ್ನು ಕಷ್ಟಕರವಾಗಿಸಿವೆ. ಇಂದಿನ ಕಾಲದಲ್ಲಿ, ಸಾಮಾಜಿಕ ಮಾಧ್ಯಮವನ್ನು ಬಳಸದ ವ್ಯಕ್ತಿಗೆ  ಜಗತ್ತಿನಲ್ಲಿ ನಡೆಯುತ್ತಿರುವ ಅನೇಕ ಘಟನೆಗಳ ಬಗ್ಗೆ ತಿಳಿದಿರುವುದಿಲ್ಲ. ಸಾಮಾಜಿಕ ಮಾಧ್ಯಮವು ಜನರನ್ನು ಜನರೊಂದಿಗೆ ಸಂಪರ್ಕಿಸಲು ಕೆಲಸ ಮಾಡಿದೆ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ಅದರ ಅತಿಯಾದ ಬಳಕೆ ಮಾನಸಿಕ ಆರೋಗ್ಯಕ್ಕೆ ಎಷ್ಟು ಹಾನಿ ಮಾಡುತ್ತದೆ? ಮತ್ತು ನಿಮ್ಮನ್ನು ಇತರರೊಂದಿಗೆ ಹೋಲಿಸಲು ಅದು ನಿಮ್ಮನ್ನು ಹೇಗೆ ಒತ್ತಾಯಿಸುತ್ತದೆ? ಎಂಬುದು ನಿಮಗೆ ತಿಳಿದಿದೆಯೇ? ಸಾಮಾಜಿಕ ಮಾಧ್ಯಮದ ಪ್ರಖರತೆಯಲ್ಲಿ ನೀವು ಅದನ್ನು ಅನುಭವಿಸಲು ಸಾಧ್ಯವಾಗದಿರಬಹುದು, ಆದರೆ ಅದು ನಿಮ್ಮ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ನಿಮಗೆ ಅರಿವಿಲ್ಲದೆಯೇ ನೀವು ಒತ್ತಡ, ಆತಂಕ ಮತ್ತು ಖಿನ್ನತೆಗೆ ಗುರಿಯಾಗುತ್ತಿರುವಿರಿ.

ಇತ್ತೀಚಿಗೆ ನಡೆಸಲಾಗಿರುವ ಒಂದು ಸಮೀಕ್ಷೆಯ ಪ್ರಕಾರ ಶೇಕಡಾ 25ರಷ್ಟು ಜನರು ಸಾಮಾಜಿಕ ಮಾಧ್ಯಮಗಳು ತಮ್ಮ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇದರ ಬಳಕೆಯನ್ನು ಕಡಿಮೆ ಮಾಡುವುದರಿಂದ ಮಾನಸಿಕ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ ಎಂದು ಶೇಕಡಾ 53 ರಷ್ಟು ಜನರು ಹೇಳಿದ್ದಾರೆ. ವಿಶ್ವಾದ್ಯಂತ ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ಕಳಪೆ ಮಾನಸಿಕ ಆರೋಗ್ಯದಿಂದ ಬಳಲುತ್ತಿರುವವರ ಸಂಖ್ಯೆ ಶೇ.66 ಕ್ಕೆಏರಿದೆ. ಏಕೆಂದರೆ ಹೆಚ್ಚಿನವರು ಮನೆಯಲ್ಲೇ ಇದ್ದು ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುತ್ತಿದ್ದರು. ಮತ್ತೊಂದು ಜಾಗತಿಕ ಸಮೀಕ್ಷೆಯ ಪ್ರಕಾರ, 1,500 ಅಮೆರಿಕನ್ನರಲ್ಲಿ ಶೇ.86 ರಷ್ಟು ಜನರು ಸಾಮಾಜಿಕ ಮಾಧ್ಯಮವು ನೇರವಾಗಿ ತಮ್ಮ ಸಂತೋಷ ಮತ್ತು ಸ್ವಯಂ-ಚಿತ್ರಣದ ಮೇಲೆ  ಋಣಾತ್ಮಕವಾಗಿ ಪರಿಣಾಮ ಬೀರಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಕೆಲವರು ಆತಂಕ, ಒಂಟಿತನ ಮತ್ತು ಖಿನ್ನತೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳುವುದರಿಂದ ಆಗುವ  ಪ್ರಯೋಜನಗಳು
ಯುಎಸ್, ಯುಕೆ, ಆಸ್ಟ್ರೇಲಿಯಾ ಮತ್ತು ನಾರ್ವೆಯ 2022 ರ ಕ್ರಾಸ್-ನ್ಯಾಶನಲ್ ಆನ್‌ಲೈನ್ ಸಮೀಕ್ಷೆಯು ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಸಾಮಾಜಿಕ ಮಾಧ್ಯಮವನ್ನು ಮನರಂಜನೆಗಾಗಿ ಅಥವಾ ಒಂಟಿತನವನ್ನು ಕಡಿಮೆ ಮಾಡಲು ಬಳಸುವ ಜನರು ಕೆಟ್ಟ ಮಾನಸಿಕ ಆರೋಗ್ಯವನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದೆ. ವಾಸ್ತವದಲ್ಲಿ, ನಾವು ಸಾಮಾಜಿಕ ಮಾಧ್ಯಮದಲ್ಲಿ ಏನನ್ನಾದರೂ ನೋಡಿದಾಗ, ಅದರ ಕಾರಣದಿಂದಾಗಿ ನಾವು ನಮ್ಮನ್ನು ಅನುಮಾನಿಸಲು ಪ್ರಾರಂಭಿಸುತ್ತೇವೆ, ನಾವು ಆಗಾಗ್ಗೆ ಆತಂಕ ಮತ್ತು ಉದ್ವೇಗಕ್ಕೆ ಬಲಿಯಾಗುತ್ತೇವೆ. ನಾವು ಸಾಮಾಜಿಕ ವೇದಿಕೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುತ್ತೇವೆ ಮತ್ತು ಅದರಲ್ಲಿ ಕಡಿಮೆ ಇಷ್ಟಗಳು ಇದ್ದಲ್ಲಿ ಅಥವಾ ಯಾರಾದರೂ ಆ ಪೋಸ್ಟ್ ಅನ್ನು ತೀವ್ರವಾಗಿ ಟೀಕಿಸಿದರೆ, ಅದರಿಂದ ನಾವು ಹೆಚ್ಚು ಪ್ರಭಾವಕ್ಕೆ ಒಳಗಾಗುತ್ತೇವೆ ಮತ್ತು ಚಿಂತಿಸಲಾರಂಭಿಸುತ್ತೇವೆ. ಮುಂದಿನ ಹಲವು ಗಂಟೆಗಳ ಕಾಲ ಮನಸ್ಸಿನಲ್ಲಿ ಆ ವಿಷಯವೇ ನಡೆಯುತ್ತಿರುತ್ತದೆ.

ಇದನ್ನೂ ಓದಿ-Alert ! 2023 ರಲ್ಲಿ ಕೊರೊನಾ ಬಳಿಕ 2ನೇ ಅತಿದೊಡ್ಡ ಮಾರಕ ಸಾಬೀತಾಗಬಹುದು ಈ ಸೂಪರ್ ಬಗ್

ಸಾಮಾಜಿಕ ಮಾಧ್ಯಮದೊಂದಿಗೆ ಸಂಪರ್ಕದಲ್ಲಿರುವುದು ಒಳ್ಳೆಯದು, ಆದರೆ ಅದರ ಅತಿಯಾದ ಬಳಕೆ ನಿಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೋಶಿಯಲ್ ಮೀಡಿಯಾದಿಂದ ವಿರಾಮ ತೆಗೆದುಕೊಳ್ಳುವುದರಿಂದ ಆಗುವ ಲಾಭಗಳೇನು ಎಂಬುದನ್ನು ತಿಳಿದುಕೊಳ್ಳೋಣ?

ಇದನ್ನೂ ಓದಿ-Diabetes: ಮಧುಮೇಹ ರೋಗಿಗಳಿಗೆ ತುಂಬಾ ಪರಿಣಾಮಕಾರಿಯಾಗಿದೆ ಜಾಮೂನ್ ವಿನೆಗಾರ್

1. ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳುವ ಮೊದಲ ಪ್ರಯೋಜನವೆಂದರೆ ನೀವು ಇತರರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳುವುದಿಲ್ಲ. ತನ್ನನ್ನು ಇತರರಿಗಿಂತ ಕಡಿಮೆ ಎಂದು ನೀವು ಭಾವಿಸುವುದಿಲ್ಲ.

2. ನೀವು ಖಿನ್ನತೆ ಮತ್ತು ಉದ್ವೇಗದಿಂದ ದೂರವಿರುತ್ತೀರಿ. ನಿಮ್ಮ ಮೂಡ್ ಚೆನ್ನಾಗಿರುತ್ತದೆ. ಉತ್ಪಾದಕ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ.

3. ಪ್ರತಿದಿನ ಹೈಲೈಟ್ ಆಗಲು  ನೀವು "ಯಾವ ಪೋಸ್ಟ್ ಅನ್ನು ಪೋಸ್ಟ್ ಮಾಡಬೇಕು" ಎಂಬುದು ಯೋಚಿಸಬೇಕಾಗಿಲ್ಲ.

4. ನಿಜ ಜೀವನದೊಂದಿಗಿನ ನಿಮ್ಮ ಸಂಪರ್ಕವು ಉತ್ತಮವಾಗಿರುತ್ತದೆ.

5. ನಿಮ್ಮ ಉತ್ಪಾದಕ ಕೆಲಸಗಳಿಗಾಗಿ ಸಾಮಾಜಿಕ ಮಾಧ್ಯಮದಿಂದ ಉಳಿದ ಸಮಯವನ್ನು ಬಳಸಲು ನಿಮಗೆ ಸಾಧ್ಯವಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News