ನವದೆಹಲಿ: ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಸೇವಿಂಗ್ ಸೆಂಡ್ ಸೇಲ್ ಪ್ರಾರಂಭವಾಗಿದೆ. ಇದು ಇಂದಿನಿಂದ ಮಾರ್ಚ್ 15ರವರೆಗೆ ನಡೆಯಲಿದೆ. ಈ ಸೆಲ್‌ನಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ ಅನೇಕ ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿ ದೊರೆಯುತ್ತಿವೆ. ಫ್ಲಿಪ್‌ಕಾರ್ಟ್‌ನ ಮಾರಾಟದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಉತ್ತಮ ರಿಯಾಯಿತಿ ಲಭ್ಯವಿದೆ. ನೀವು ಸ್ಮಾರ್ಟ್‌ಫೋನ್ ಖರೀದಿಸಿದರೆ ಭರ್ಜರಿ ಉಳಿತಾಯ ಮಾಡಬಹುದು. ಸ್ಮಾರ್ಟ್‌ಫೋನ್‌ಗಳ ಖರೀದಿಯ ಮೇಲೆ ಅತಿದೊಡ್ಡ ರಿಯಾಯಿತಿ ನೀಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ಗ್ರಾಹಕರು 17,000 ರೂ. ಮೌಲ್ಯದ ಸ್ಮಾರ್ಟ್‍ಫೋನ್‍ಅನ್ನು ಕೇವಲ 1,000 ರೂ.ಗಿಂತ ಕಡಿಮೆ ಬೆಲೆಗೆ ಉತ್ತಮ  ಖರೀದಿಸಬಹುದು. ನೀವು ಸಹ ಈ ಸ್ಮಾರ್ಟ್‌ಫೋನ್ ಮನೆಗೆ ತೆಗೆದುಕೊಂಡು ಹೋಗಬಯಸಿದರೆ, ಇಂದು ನಾವು ಈ ಸ್ಮಾರ್ಟ್‌ಫೋನ್ ಮತ್ತು ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ನೀಡಲಾಗುತ್ತಿರುವ ಆಫರ್‍ಗಳ ಮಾಹಿತಿ ನೀಡುತ್ತಿದ್ದೇವೆ.


ಇದನ್ನೂ ಓದಿಮಾರುಕಟ್ಟೆಗೆ ಕಾಲಿಡುತ್ತಿದೆ iPhone 14ನಂತೆ ಕಾಣುವ ಈ ಸೂಪರ್ ಫೋನ್


ಸ್ಮಾರ್ಟ್‌ಫೋನ್ & ಕೊಡುಗೆ ಏನು?


ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಮಾರಾಟದಲ್ಲಿ ಗರಿಷ್ಠ ರಿಯಾಯಿತಿ ನೀಡಲಾಗುತ್ತಿರುವ ಸ್ಮಾರ್ಟ್‌ಫೋನ್‌ ಎಂದರೆ ಅದು Samsung Galaxy F13. ಈ ಸ್ಮಾರ್ಟ್‌ಫೋನ್‌ನ 128GB ಸ್ಟೋರೇಜ್ ಮತ್ತು 4GB RAM ಮಾದರಿಯು ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನ ನೈಜ ಬೆಲೆ 16,999 ರೂ. ಇದೆ. ಆದರೆ ಗ್ರಾಹಕರಿಗೆ ಇದರ ಮೇಲೆ ಶೇ.37ರಷ್ಟು ರಿಯಾಯಿತಿ ನೀಡಲಾಗುತ್ತದೆ. ಇದರ ನಂತರ ಈ ಸ್ಮಾರ್ಟ್‌ಫೋನ್‌ನ ಬೆಲೆ 10,699 ರೂ. ಆಗುತ್ತದೆ. ಈ ಸ್ಮಾರ್ಟ್‌ಫೋನ್ ಖರೀದಿಯ ಮೇಲೆ ಗ್ರಾಹಕರಿಗೆ ಮತ್ತೊಂದು ಕೊಡುಗೆಯೂ ಇದೆ.   


ವಿನಿಮಯ ಕೊಡುಗೆ ಲಾಭ ಪಡೆಯಿರಿ


ಈ ಸ್ಮಾರ್ಟ್‍ಫೋನ್ ಖರೀದಿಯ ಮೇಲೆ ಎಕ್ಸ್ಚೇಂಜ್ ಆಫರ್ ಸಹ ನೀಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ನ ಮೇಲೆ ಕಂಪನಿಯು 10,100 ರೂ. ಎಕ್ಸ್‌ಚೇಂಜ್ ಬೋನಸ್ ನೀಡಲಾಗುತ್ತಿದೆ. ಈ ಎಲ್ಲಾ ಆಫರ್ ಬಳಸಿಕೊಂಡರೆ ಈ ಸ್ಮಾರ್ಟ್‌ಫೋನ್ ಖರೀದಿಸಲು ನೀವು ಕೇವಲ 599 ರೂ. ಪಾವತಿಸಬೇಕಾಗುತ್ತದೆ. ಈ ಕೊಡುಗೆಯು ಕೆಲವೇ ದಿನಗಳವರೆಗೆ ಇರುತ್ತದೆ. ಹೀಗಾಗಿ ನೀವು ಇದರ ಲಾಭ  ಪಡೆಯಬಯಸಿದರೆ ಕೂಡಲೇ ಖರೀದಿಸುವುದು ಉತ್ತಮ.


ಇದನ್ನೂ ಓದಿ: ಬೈಕ್ ಪ್ರಿಯರೇ ಗಮನಿಸಿ! ಈ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಈ ಬೈಕ್‌ಗಳು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.