ಬೈಕ್ ಪ್ರಿಯರೇ ಗಮನಿಸಿ! ಈ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಈ ಬೈಕ್‌ಗಳು!

ಈ ತಿಂಗಳಲ್ಲಿ ಮಾರುಕಟ್ಟೆಗೆ ಕಾಲಿಡಲೈವ್ ಈ ಬೈಕ್ ಗಳು. ಈ ಬೈಕ್ ಗಳ ವೈಶಿಷ್ಟ್ಯಗಳು ಏನಿರಲಿವೆ ನೋಡೋಣ.  

Written by - Ranjitha R K | Last Updated : Mar 10, 2023, 02:22 PM IST
  • ಬೈಕ್ ಪ್ರಿಯರಿಗೊಂದು ಸಿಹಿ ಸುದ್ದಿಯಿದೆ
  • ಮಾರುಕಟ್ಟೆಗೆ ಬರಲಿವೆ ಹೊಸ ಹೊಸ ಬೈಕ್ ಗಳು
  • ಏನಿರಲಿದೆ ಈ ಬೈಕ್ ಗಳ ವೈಶಿಷ್ಟ್ಯಗಳು
ಬೈಕ್ ಪ್ರಿಯರೇ ಗಮನಿಸಿ!  ಈ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಈ ಬೈಕ್‌ಗಳು!   title=

ಬೆಂಗಳೂರು : ಬೈಕ್ ಪ್ರಿಯರಿಗೊಂದು ಸಿಹಿ ಸುದ್ದಿಯಿದೆ. ಬೈಕ್ ಖರೀದಿಸುವ ವ ಯೋಜನೆ ಇದ್ದರೆ ಮಾರುಕಟ್ಟೆಗೆ ಹೊಸ ಹೊಸ ಬೈಕ್ ಗಳು ಕಾಲಿಡಲಿವೆ. ಮಾರ್ಚ್ ತಿಂಗಳಿನಲ್ಲಿ, ಹೋಂಡಾ, ಟಿವಿಎಸ್, ರಾಯಲ್ ಎನ್‌ಫೀಲ್ಡ್ ಮತ್ತು ಬಜಾಜ್‌ನಂತಹ ಕಂಪನಿಗಳು ತಮ್ಮ ಹೊಸ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿವೆ. 

ಹೋಂಡಾದ ಹೊಸ 100cc ಬೈಕ್: 
ಮಾರ್ಚ್ 15, 2023 ರಂದು, ಹೋಂಡಾ ಭಾರತದಲ್ಲಿ ಹೊಸ 100 cc ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಲಿದೆ. ಇದು ಹೀರೋ ಸ್ಪ್ಲೆಂಡರ್, ಎಚ್‌ಎಫ್ ಡಿಲಕ್ಸ್, ಬಜಾಜ್ ಪ್ಲಾಟಿನಾ ಮುಂತಾದ ಬೈಕ್‌ಗಳಿಗೆ ಪೈಪೋಟಿ ನೀಡಲಿದೆ. ಕಂಪನಿಯ ಹೊಸ ಕೊಡುಗೆಯು 100cc ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌ನೊಂದಿಗೆ ಬರಬಹುದು ಎನ್ನಲಾಗಿದೆ. ಇದು ಹೊಸ RDE ಮಾನದಂಡಗಳಿಗೆ ಅನುಗುಣವಾಗಿರುತ್ತದೆ ಮತ್ತು E20 ಇಂಧನದಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಈ ಬಗ್ಗೆ  ಈ ಬಗ್ಗೆ ಹೆಚ್ಚಿನ ನಿಖರ ಮಾಹಿತಿಯನ್ನು ಕಂಪನಿ ಬಹಿರಂಗಪಡಿಸಿಲ್ಲ. 

ಇದನ್ನೂ ಓದಿ : ಮಾರುತಿ ಕಾರುಗಳ ಮೇಲೆ ಬಂಪರ್ ಡಿಸ್ಕೌಂಟ್- ಮಾರ್ಚ್ 31ರವರೆಗೆ ಮಾತ್ರ ಈ ಸುವರ್ಣಾವಕಾಶ

ಬಜಾಜ್ ಪಲ್ಸರ್ 220ಎಫ್: 
ಬಜಾಜ್ ಆಟೋ ಶೀಘ್ರದಲ್ಲೇ ಪಲ್ಸರ್ 220ಎಫ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಮರುಪರಿಚಯಿಸಲಿದೆ. ಇದಕ್ಕಾಗಿ, ದೇಶಾದ್ಯಂತ ಆಯ್ದ ಡೀಲರ್‌ಶಿಪ್‌ಗಳಲ್ಲಿ ಈಗಾಗಲೇ ಅನೌಪಚಾರಿಕವಾಗಿ ಬುಕ್ಕಿಂಗ್‌ಗಳು ಪ್ರಾರಂಭವಾಗಿವೆ. ಇದು 220cc ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್, FI ಎಂಜಿನ್ ಅನ್ನು ಹೊಂದಿರುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. 

ಟಿವಿಎಸ್ ಐ ಕ್ಯೂಬ್ ಎಸ್ ಟಿ :
TVS ಮೋಟಾರ್ ಕಂಪನಿಯು ಕಳೆದ ವರ್ಷ ಮೇ ತಿಂಗಳಲ್ಲಿ ನವೀಕರಿಸಿದ iQube ಎಲೆಕ್ಟ್ರಿಕ್ ಸ್ಕೂಟರ್ ಸರಣಿಯನ್ನು ಪರಿಚಯಿಸಿತು. ಆದರೆ  ಟಾಪ್-ಸ್ಪೆಕ್ iQube ST ಬೆಲೆಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಇದು ಈ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೊಸ TVS iQube ST 4.56 kWh ಬ್ಯಾಟರಿ ಪ್ಯಾಕ್ ಅನ್ನು  ಹೊಂದಿರಲಿದ್ದು, ಒಂದೇ ಚಾರ್ಜ್‌ನಲ್ಲಿ 145 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಕೇವಲ 1700 ರೂಪಾಯಿ ಖರ್ಚು ಮಾಡಿದರೆ ಸಾಕು ಕಾರಿನ ಹಿಂಬದಿ ಸೀಟನ್ನು ಹಾಸಿಗೆಯನ್ನಾಗಿ ಬದಲಿಸಬಹುದು !

Triumph Street Triple R, RS : Triumph ಮೋಟಾರ್‌ಸೈಕಲ್ಸ್ ಭಾರತದಲ್ಲಿ ಹೊಸ ಸ್ಟ್ರೀಟ್ ಟ್ರಿಪಲ್ ಆರ್ ಮತ್ತು ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಅನ್ನು ಮಾರ್ಚ್ 15, 2023 ರಂದು ಬಿಡುಗಡೆ ಮಾಡಲಿದೆ. ಈ ವರ್ಷದ ಏಪ್ರಿಲ್‌ನಲ್ಲಿ ವಿತರಣೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಹೊಸ ಸ್ಟ್ರೀಟ್ ಟ್ರಿಪಲ್ '765' ಶ್ರೇಣಿಯು 765cc, ಇನ್‌ಲೈನ್-3 ಸಿಲಿಂಡರ್ ಎಂಜಿನ್‌ನೊಂದಿಗೆ ಬರಲಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News