ನವದೆಹಲಿ : ಅಮೆರಿಕದಲ್ಲಿ Black Friday Sale ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳು (Smartphone) ಅತ್ಯಂತ ಅಗ್ಗದ ಬೆಲೆಗೆ ಮಾರಾಟವಾಗುತ್ತಿದೆ. ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಫೋನ್‌ಗಳು ಸಹ ಅತ್ಯಂತ ಕಡಿಮೆ  ಬೆಲೆಗೆ ಲಭ್ಯವಿವೆ. USನಾದ್ಯಂತ ಹಲವಾರು ಕಂಪನಿಗಳು ಸ್ಮಾರ್ಟ್‌ವಾಚ್‌ಗಳು (Smart watch) ಫಿಟ್‌ನೆಸ್ ಟ್ರ್ಯಾಕರ್‌ಗಳು ಮತ್ತು TWS ಇಯರ್‌ಬಡ್‌ಗಳಂತಹ ಪರಿಕರಗಳು ಸೇರಿದಂತೆ ಈ ಎಲ್ಲಾ ಉತ್ಪನ್ನಗಳ ಮೇಲೆ ರಿಯಾಯಿತಿ (Discount) ಸಿಗಲಿವೆ.  ಈ ಹಿನ್ನೆಲೆಯಲ್ಲಿ ಅಗ್ಗದ ಬೆಲೆಗೆ ಸ್ಮಾರ್ಟ್‌ಫೋನ್ ಖರೀದಿಸಬಹುದಾಗಿದೆ. 


COMMERCIAL BREAK
SCROLL TO CONTINUE READING

Apple iPhone 13 ಮೇಲೆ 37 ಸಾವಿರ ರಿಯಾಯಿತಿ :
ಆಪಲ್ ಸಾಧನಗಳ ಬಗ್ಗೆ ಹೇಳುವುದಾದರೆ, ಖರೀದಿದಾರರು  Verizon Wirelessನಲ್ಲಿ ಆಪಲ್ ಐಫೋನ್‌ಗಳ (iPhone) ಖರೀದಿಯಲ್ಲಿ 500$ ಅಂದಾಜು 37 ಸಾವಿರ ರೂ.ವರೆಗೆ ಉಳಿತಾಯ ಮಾಡಬಹುದು. ಈ ಆಫರ್‌ iPhone 13, iPhone 12, iPhone 11, iPhone 11 Pro Max, iPhone XR, iPhone X ಮತ್ತು iPhone 8 ಮೇಲೆ ಲಭ್ಯವಿದೆ.


ಇದನ್ನೂ ಓದಿ : WhatsApp Users Alert! ಈ ಒಂದು ಸಂದೇಶ ನಿಮ್ಮ ಖಾತೆ ಖಾಲಿ ಮಾಡಬಹುದು ಎಚ್ಚರ!


Google Pixel 6 ನಲ್ಲಿಯೂ ಭಾರೀ ರಿಯಾಯಿತಿ :
Verizon.com ನಲ್ಲಿ Google Pixel 5, Google Pixel 6 ಮತ್ತು Google Pixel 6 Pro ಸ್ಮಾರ್ಟ್‌ಫೋನ್‌ಗಳ ಖರೀದಿಯಲ್ಲಿ  700 $ ಅಂದರೆ 52 ಸಾವಿರ ರೂ.ವರೆಗೆ ರಿಯಾಯಿತಿ  (Discount) ಪಡೆಯಬಹುದು.  ಕ್ಲೌಡಿ ವೈಟ್, ಸ್ಟಾರ್ಮಿ ಬ್ಲ್ಯಾಕ್, ಸೊರ್ಟಾ ಸನ್ನಿ ಮತ್ತು ಜಸ್ಟ್ ಬ್ಲ್ಯಾಕ್ ಬಣ್ಣದ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಲ್ಲಿ (Smartphone) ಈ ಕೊಡುಗೆಗಳು ಲಭ್ಯವಿವೆ.


Apple Watch ಮೇಲೆ  7000 ರೂ. ವರೆಗೆ ರಿಯಾಯಿತಿ :
 ಸ್ಮಾರ್ಟ್ ವಾಚ್‌ಗಳ ಖರೀದಿಯ ಮೇಲೆ ಆಫರ್‌ಗಳನ್ನು ಹುಡುಕುತ್ತಿದ್ದರೆ, Verizon.com ನಲ್ಲಿ Apple Watch 7, Apple Watch 6 ಮತ್ತು Apple Watch SE ಸೇರಿದಂತೆ ವ್ಯಾಪಕ ಶ್ರೇಣಿಯ Apple ವಾಚ್‌ಗಳಲ್ಲಿ 100 $ ಅಂದಾಜು  7,000 ರೂ ವರೆಗೆ ಉಳಿತಾಯ ಮಾಡಬಹುದು. 


ಇದನ್ನೂ ಓದಿ : ಮಾರುಕಟ್ಟೆಗೆ ಲಗ್ಗೆ ಇಡಲಿದೆ Redmiಯ ಈ ಸುಂದರ 5G ಸ್ಮಾರ್ಟ್‌ಫೋನ್, ವೈಶಿಷ್ಟ್ಯಗಳನ್ನು ತಿಳಿಯಿರಿ 


Apple iPad ಮೇಲೆ 26 ಸಾವಿರ ರೂಪಾಯಿ ರಿಯಾಯಿತಿ :
Verizon.com ನಲ್ಲಿ Apple iPad, iPad Pro, iPad mini ಮತ್ತು iPad Air ಖರೀದಿಯ ಮೇಲೆ 350 $ ಅಂದರೆ 26 ಸಾವಿರ ರೂ ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಈ ಪಟ್ಟಿಯಲ್ಲಿ iPad 9th ಜನರೆಶನ್‌,  iPad Air 4th ಜನರೆಶನ್‌ iPad Proಗಳನ್ನು ಒಳಗೊಂಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.