Amazon Prime Video: ತನ್ನ ಬಳಕೆದಾರರಿಗೆ ಅದ್ಭುತ ವೈಶಿಷ್ಟ್ಯ ನೀಡಲಿದೆ Amazon Prime

Amazon Prime Video New Feature - ಅಮೀಜಾನ್ ಪ್ರೈಮ್ ವೀಡಿಯೊ ತನ್ನ ಬಳಕೆದಾರರಿಗೆ ಅದ್ಭುತ ವೈಶಿಷ್ಟ್ಯ ತರುತ್ತಿದೆ. ಈ ಹೊಸ ವೈಶಿಷ್ಟ್ಯವನ್ನು ಬಳಸಿ ಬಳಕೆದಾರರು ಟಿವಿ ಷೋ ಹಾಗೂ ಫಿಲ್ಮ್ ಕ್ಲಿಪ್ ಗಳನ್ನು ಹಂಚಿಕೆ ಮಾಡಬಹುದು. ಈ ಕುರಿತು ಹೇಳಿಕೆ ನೀಡಿರುವ ಕಂಪನಿ, ಕ್ಲಿಪ್ ಗಳನ್ನೂ ನೇರವಾಗಿ ಸಂದೇಶದ ರೂಪದಲ್ಲಿ ಹಂಚಿಕೊಳ್ಳಬಹುದಾಗಿದೆ. ಹಾಗಾದರೆ ಬನ್ನಿ ಹೇಗೆ ತಿಳಿದುಕೊಳ್ಳೋಣ.  

Written by - Nitin Tabib | Last Updated : Nov 12, 2021, 06:25 PM IST
  • ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯ ಪರಿಚಯಿಸಲು ಮುಂದಾದ ಅಮೆಜಾನ್,
  • ಈ ವೈಶಿಷ್ಟ್ಯದಿಂದ ಬಳಕೆದಾರರು ಟಿವಿ ಹಾಗೂ ಫಿಲ್ಮ್ ಕ್ಲಿಪ್ ಅನ್ನು ಹಂಚಿಕೊಳ್ಳಬಹುದು.
  • ಅವುಗಳನ್ನು ನೀವು ಇನ್ಸ್ಟಾಗ್ರಾಮ್, ಫೇಸ್ಬುಕ್, ಟ್ವಿಟ್ಟರ್, ಐಮೆಸೇಜ್ ಹಾಗೂ ವಾಟ್ಸ್ ಆಪ್ ಮಾಧ್ಯಮದ ಮೂಲಕ ಅಪ್ಲೋಡ್ ಮಾಡಬಹುದು.
Amazon Prime Video: ತನ್ನ ಬಳಕೆದಾರರಿಗೆ ಅದ್ಭುತ ವೈಶಿಷ್ಟ್ಯ ನೀಡಲಿದೆ Amazon Prime title=
Amazon Prime Video New Feature (File Photo)

ನವದೆಹಲಿ: Amazon Prime Video Feature - ಟೆಕ್ ದೈತ್ಯ ಅಮೆಜಾನ್ ಪ್ರೈಮ್ ವೀಡಿಯೊಗೆ ಹೊಸ ವೈಶಿಷ್ಟ್ಯವನ್ನು ಸೇರಿಸುತ್ತಿದೆ. ಇದರಿಂದ ಪ್ರೈಮ್ ಬಳಸುವ iOS ಬಳಕೆದಾರರಿಗೆ ಯುಎಸ್‌ನಲ್ಲಿ ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳ ವೀಡಿಯೊ ಕ್ಲಿಪ್‌ಗಳನ್ನು ಹಂಚಿಕೊಳ್ಳಲು ಸಾಧ್ಯವಾಗಲಿದೆ. ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಅಥವಾ ನೇರ ಸಂದೇಶದ ಮೂಲಕ ಹಂಚಿಕೊಳ್ಳಬಹುದು ಎಂದು ಕಂಪನಿ ಹೇಳಿದೆ. "ನಿಮ್ಮ ಐಒಎಸ್ ಮೊಬೈಲ್ ಸಾಧನದಲ್ಲಿ ಪ್ರೈಮ್ ವಿಡಿಯೋ ಅಪ್ಲಿಕೇಶನ್‌ನಲ್ಲಿ ಎಪಿಸೋಡ್ ವೀಕ್ಷಿಸುತ್ತಿರುವಾಗ, 'ಕ್ಲಿಪ್ ಹಂಚಿಕೊಳ್ಳಿ' (Amazon Prime Video Sharing Clip) ಬಟನ್ ಒತ್ತಿರಿ, ಅದು ಪ್ರದರ್ಶನವನ್ನು ನಿಲ್ಲಿಸಿ, ಕ್ಲಿಪ್ ಅನ್ನು ತೆರೆಯುತ್ತದೆ, ಎಡಿಟ್ ಮಾಡುತ್ತದೆ ಮತ್ತು ಪ್ರದರ್ಶಿಸುತ್ತದೆ" ಎಂದು ಕಂಪನಿಯು ಬ್ಲಾಗ್‌ಪೋಸ್ಟ್‌ನಲ್ಲಿ ಈ ಕುರಿತು ಮಾಹಿತಿ ನೀಡಿದೆ. 

ಈ ರೀತಿ ಹಂಚಿಕೊಳ್ಳಬಹುದು
"ನೀವು ಇದೀಗ ವೀಕ್ಷಿಸಿದ 30-ಸೆಕೆಂಡ್ ಕ್ಲಿಪ್ ಅನ್ನು ಪ್ರೈಮ್ (Amazon Prime Video Latest News) ವೀಡಿಯೊ ರಚಿಸುತ್ತದೆ ಮತ್ತು ನೀವು ಕ್ಲಿಪ್ ಅನ್ನು ಫಾರ್ವರ್ಡ್  ಅಥವಾ ಬ್ಯಾಕ್ವರ್ಡ್ ಮಾಡಲು ಸಾಧ್ಯವಾಗುತ್ತದೆ. ಹಂಚಿಕೊಳ್ಳುವ ಮೊದಲು ನೀವು ಅದನ್ನು ಪೂರ್ವವೀಕ್ಷಣೆ ಮಾಡಲು ಸಹ ಸಾಧಯ್ವಾಗಲಿದೆ"  ಎಂದು ಬ್ಲಾಗ್ ನಲ್ಲಿ ಹೇಳಲಾಗಿದೆ. ಅದರಂತೆ, ನೀವು ಒಮ್ಮೆ ಕ್ಲಿಪ್ ಅನ್ನು ಹಂಚಿಕೊಳ್ಳಲು ಸಿದ್ಧವಾದಾಗ ಪರದೆಯ ಮೇಲೆ 'ಹಂಚಿಕೊಳ್ಳಿ' ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ನೀವು ಅದನ್ನು Instagram, Facebook, Twitter, iMessage, Messenger ಮತ್ತು WhatsApp ಮೂಲಕ ಅಪ್‌ಲೋಡ್ ಮಾಡಬಹುದು.

ಇದನ್ನೂ ಓದಿ-ನಿಮಗೂ Online Shopping ಬಗೆಗಿನ ಈ ಮೆಸೇಜ್ ಬರುತ್ತಿದ್ದರೆ ಹುಷಾರಾಗಿರಿ, ಇದೊಂದು ವಂಚನೆಯ ಜಾಲ

ಈ ಚಿತ್ರವನ್ನು ಹಂಚಿಕೊಳ್ಳಬಹುದು
ಆರಂಭಿಕ ರೋಲ್‌ಔಟ್‌ಗಾಗಿ, ಬಳಕೆದಾರರು ಸೀಮಿತ ಸಂಖ್ಯೆಯ ಪ್ರದರ್ಶನಗಳಿಂದ ಮಾತ್ರ ಕ್ಲಿಪ್‌ಗಳನ್ನು ಹಂಚಿಕೊಳ್ಳಬಹುದು. ಈ ವೈಶಿಷ್ಟ್ಯವು ಆರಂಭದಲ್ಲಿ "ದಿ ಬಾಯ್ಸ್" (ಸೀಸನ್ ಒನ್), "ದಿ ವೈಲ್ಡ್ಸ್", "ಇನ್ವಿನ್ಸಿಬಲ್" ಮತ್ತು "ಫೇರ್‌ಫ್ಯಾಕ್ಸ್" ಹಾಗೂ ಬಹುತೇಕ  Amazon Originals ಚಲನಚಿತ್ರಗಳು ಮತ್ತು ಸರಣಿಗಗಳಿಗೆ ಲಭ್ಯವಿರಲಿದೆ.

ಇದನ್ನೂ ಓದಿ-ಎಚ್ಚರ..! ಈ ‘Paytm’ ಆಪ್ ಬಳಸಿದರೆ ಅನುಭವಿಸಬೇಕಾದೀತು ಜೈಲು ವಾಸ, ಸುರಕ್ಷಿತವಾಗಿರಲು ಹೀಗೆ ಮಾಡಿ

ಬಳಕೆದಾರರಿಗೆ ತನ್ನ ವಿಷಯವನ್ನು ಹಂಚಿಕೊಳ್ಳಲು ಅನುಮತಿಸುವ Amazon ನಿರ್ಧಾರವು ಇತರ ಸ್ಟ್ರೀಮಿಂಗ್ ಸೇವೆಗಳತ್ತ ಬದಲಾವಣೆಯನ್ನು ಸಂಕೇತಿಸುತ್ತದೆ. ಪ್ರಸ್ತುತ ಬಳಕೆದಾರರು ತಮ್ಮ ಸರಣಿ ಅಥವಾ ಚಲನಚಿತ್ರಗಳಿಂದ ವೀಡಿಯೊ ಕ್ಲಿಪ್‌ಗಳನ್ನು ಅಪ್‌ಲೋಡ್ ಮಾಡಲು ಅಮೆಜಾನ್ ಅನುಮತಿಸುವುದಿಲ್ಲ.

ಇದನ್ನೂ ಓದಿ-Xiaomi ಸ್ಮಾರ್ಟ್ ವಾಚ್‌ನ ಕ್ರೇಜ್, ನಿಮಿಷಗಳಲ್ಲಿ ದಾಖಲೆಯ ಮಾರಾಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News