Hyundai Exter Launch Date : ಪ್ರಸ್ತುತ ಮೈಕ್ರೋ ಎಸ್‌ಯುವಿ ವಿಭಾಗವನ್ನು ಟಾಟಾ ಪಂಚ್  ಆಳುತ್ತಿದೆ. ಟಾಟಾ ಪಂಚ್ ಮಾರುಕಟ್ಟೆಗೆ ಬಿಡುಗಡೆಯಾಗಿ ಸುಮಾರು ಒಂದೂವರೆ ವರ್ಷ ಕಳೆದಿದೆ. ಇಲ್ಲಿಯವರೆಗೆ ಸುಮಾರು ಎರಡು ಲಕ್ಷ ಯುನಿಟ್‌ಗಳು ಮಾರಾಟ ಕೂಡಾ ಆಗಿವೆ. ಇದು ದೇಶದಲ್ಲಿ ಹೆಚ್ಚು ಮಾರಾಟವಾಗುವ ಎಸ್‌ಯುವಿಗಳಲ್ಲಿ ಒಂದಾಗಿದೆ. ಆದರೆ, ಈಗ ಹ್ಯುಂಡೈ ಈ ವಿಭಾಗದಲ್ಲಿ ತನ್ನದೇ ಆದ ಹೊಸ ಕಾರನ್ನು ಹೊರ  ತರುತ್ತಿದೆ. ಶೀಘ್ರದಲ್ಲೇ ಹ್ಯುಂಡೈನ ಕ್ಸೆಟರ್ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ಹುಂಡೈ ಮೋಟಾರ್ ಇಂಡಿಯಾ ತನ್ನ ಮೈಕ್ರೋ ಎಸ್ಯುವಿ-ಕ್ಸೆಟರ್ ಬೆಲೆಯನ್ನು ಜುಲೈ 10 ರಂದು ಪ್ರಕಟಿಸಲಿದೆ. ಎಲ್ಲಾ ಹೊಸ ಹ್ಯುಂಡೈ Exter ಕಂಪನಿಯ ಅಗ್ಗದ SUV ಆಗಿರಲಿದೆ.  ಇದಕ್ಕಾಗಿ 11,000 ರೂ.ಗಳ ಟೋಕನ್ ಮೊತ್ತದೊಂದಿಗೆ ಮುಂಗಡ ಬುಕ್ಕಿಂಗ್ ಕೂಡಾ ನಡೆಯುತ್ತಿದೆ. 


COMMERCIAL BREAK
SCROLL TO CONTINUE READING

ಹ್ಯುಂಡೈ ಎಕ್ಸ್‌ಟರ್ ಅನ್ನು ಪವರ್ ನೀಡುವ ಸಲುವಾಗಿ 1.2-ಲೀಟರ್   ನ್ಯಾಚ್ಯುರಲಿ ಆಸ್ಪಿರೇಟೆಡ್  ಪೆಟ್ರೋಲ್ ಎಂಜಿನ್ ನೀಡಲಾಗಿದೆ. ಈ ಎಂಜಿನ್ ಅನ್ನು   ಗ್ರಾಂಡ್ i10 ನಿಯೋಸ್ ಮತ್ತು ಕೆಲವು ಇತರ ಹ್ಯುಂಡೈ ಕಾರುಗಳಲ್ಲಿ ಕೂಡಾ ನೀಡಲಾಗಿದೆ. ಈ ಎಂಜಿನ್ 82 Bhp ಗರಿಷ್ಠ ಶಕ್ತಿ ಮತ್ತು 113 Nm ಪೀಕ್ ಟಾರ್ಕ್ ಅನ್ನು  ಜನರೇಟ್ ಮಾಡುತ್ತದೆ. ಇದಕ್ಕೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು AMT ಆಯ್ಕೆಯನ್ನು ನೀಡಲಾಗಿದೆ. ಹ್ಯುಂಡೈ ಎಕ್ಸ್‌ಟರ್ ಸಿಎನ್‌ಜಿ ಆಯ್ಕೆಯೊಂದಿಗೆ ಬರಲಿದೆ. 


ಇದನ್ನೂ ಓದಿ : BSNL ಗ್ರಾಹಕರಿಗೆ ಬಿಗ್ ನ್ಯೂಸ್ ! ಬಹುದಿನದ ಬೇಡಿಕೆ ಈಡೇರಿಸಿದ ಕೇಂದ್ರ ಸರ್ಕಾರ


ಹ್ಯುಂಡೈನ ಹೊಸ ಮೈಕ್ರೊ SUVನ ಕೆಲವು ಸೆಗ್ಮೆಂಟ್ ನಲ್ಲಿ ಫಸ್ಟ್ ಫೀಚರ್ ಸಿಗಲಿದೆ. ಇದು ಎಲೆಕ್ಟ್ರಿಕ್ ಸನ್‌ರೂಫ್, ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಕ್ಯಾಮೆರಾಗಳೊಂದಿಗೆ ಡ್ಯಾಶ್‌ಕ್ಯಾಮ್ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. Xeter ಎಲ್ಲಾ ರೂಪಾಂತರಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು  ಸ್ಟ್ಯಾಂಡರ್ಡ್ ಮಾದರಿಯಲ್ಲಿ ನೀಡಲಾಗುತ್ತದೆ. ಅಲ್ಲದೆ ಎಲ್ಲಾ ವೆರಿಯೇಂಟ್ ಗಳಲ್ಲಿಯೂ ಆರು ಏರ್ ಬ್ಯಾಗ್ ಪಡೆಯುವ ಮೊದಲ ಸಬ್ ಕಾಂಪ್ಯಾಕ್ಟ್ SUV ಇದಾಗಿರಲಿದೆ.  ಈ ಕಾರಿನ ಇತರ ವೈಶಿಷ್ಟ್ಯಗಳೆಂದರೆ ಇದು ESC,ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ ಮೆಂಟ್, ಹಿಲ್ ಅಸಿಸ್ಟ್ ಕಂಟ್ರೋಲ್ ಇತ್ಯಾದಿಗಳನ್ನು ಸಹ ಹೊಂದಿರುತ್ತದೆ.


ಎಲ್ಲಾ-ಹೊಸ ಹುಂಡೈ ಎಕ್ಸ್‌ಟರ್ ಅನ್ನು EX, S, SX, SX(O) ಮತ್ತು SX(O) ಕನೆಕ್ಟ್ ಟ್ರಿಮ್‌ಗಳಲ್ಲಿ ನೀಡಲಾಗುವುದು. ಇದು ಹ್ಯುಂಡೈನ ಸಾಲಿನಲ್ಲಿ ಅತ್ಯಂತ ಅಗ್ಗದ SUV ಆಗಿರುತ್ತದೆ. ಇದರ ಬೆಲೆ ಸುಮಾರು 6 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ಸಾಧ್ಯತೆ ಇದೆ. ಹ್ಯುಂಡೈ ಎಕ್ಸ್‌ಟರ್ ನೇರವಾಗಿ ಟಾಟಾ ಪಂಚ್, ಸಿಟ್ರೊಯೆನ್ ಸಿ3, ನಿಸ್ಸಾನ್ ಮ್ಯಾಗ್ನೈಟ್ ಇತ್ಯಾದಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.


ಇದನ್ನೂ ಓದಿ : ಏರ್‌ಟೆಲ್‌ನ ಅಗ್ಗದ ಯೋಜನೆಯಲ್ಲಿ ಫುಲ್ ಫ್ರೀ ಆಗಿ ಸಿಗಲಿದೆ Amazon Prime, Disney+ Hotstar


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ