ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಯಮಹಾ R15 V4 ಡಾರ್ಕ್ ನೈಟ್ ಆವೃತ್ತಿ

Yamaha: ದೇಶದ ಅತ್ಯಂತ ಜನಪ್ರಿಯ ಮೋಟಾರ್‌ಸೈಕಲ್ ಕಂಪನಿಯಾದ ಯಮಹಾ ತನ್ನ YZF-R15 V4 ಮೋಟಾರ್‌ಸೈಕಲ್ ಅನ್ನು ನವೀಕರಿಸಿದ್ದು  ಬೈಕ್‌ಗೆ ಹೊಸ 'ಡಾರ್ಕ್ ನೈಟ್' ಬಣ್ಣದ ಸ್ಕೀಮ್ ನೀಡಿದೆ. 

Written by - Yashaswini V | Last Updated : May 23, 2023, 03:01 PM IST
  • ಈ ಬೈಕ್ 155cc, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್‌ನೊಂದಿಗೆ ಬರುತ್ತದೆ
  • ಇದು 18.4bhp ಮತ್ತು 14.2Nm ಅನ್ನು ಉತ್ಪಾದಿಸುತ್ತದೆ.
  • ಪ್ರಸರಣ ಕರ್ತವ್ಯಗಳನ್ನು ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ನಿಂದ ನಿರ್ವಹಿಸಲಾಗುತ್ತದೆ.
ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಯಮಹಾ R15 V4 ಡಾರ್ಕ್ ನೈಟ್ ಆವೃತ್ತಿ title=

Yamaha R15 V4 Dark Knight Edition: ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಯಮಹಾ ಕಂಪನಿ ಇತ್ತೀಚೆಗೆ ಅತ್ಯಂತ ಜನಪ್ರಿಯ YZF-R15 V4 ಮೋಟಾರ್‌ಸೈಕಲ್ ಅನ್ನು ನವೀಕರಿಸಿದೆ. ಈ ಬೈಕ್‌ಗೆ ಹೊಸ 'ಡಾರ್ಕ್ ನೈಟ್' ಬಣ್ಣದ ಸ್ಕೀಮ್ ನೀಡಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಬೈಕ್ ಕೆಂಪು, ನೀಲಿ ಮತ್ತು ಇಂಟೆನ್ಸಿಟಿ ವೈಟ್ ಬಣ್ಣಗಳಲ್ಲಿಯೂ ಲಭ್ಯವಿದೆ, ಈ ಎಲ್ಲಾ ಬೈಕ್‌ಗಳ ಬೆಲೆಯನ್ನು ಕ್ರಮವಾಗಿ 1.81 ಲಕ್ಷ, 1.82 ಲಕ್ಷ ಮತ್ತು 1.86 ಲಕ್ಷ ರೂ.ಗಳಿಗೆ ನಿಗದಿಗೊಳಿಸಲಾಗಿದೆ. 

ಯಮಹಾ ಮೋಟಾರ್‌ಸೈಕಲ್ ಗಳ ಇತರ ರೂಪಾಂತರಗಳಿಗೆ ಹೋಲಿಸಿದರೆ R15 V4 ಡಾರ್ಕ್ ನೈಟ್‌ನಲ್ಲಿ ಬಣ್ಣದ ಸ್ಕೀಮ್ ಅನ್ನು ಹೊರತುಪಡಿಸಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಎಂಬುದು ಗಮನಾರ್ಹವಾಗಿದೆ. ಈ ಬೈಕ್ 155cc, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್‌ನೊಂದಿಗೆ ಬರುತ್ತದೆ, ಇದು 18.4bhp ಮತ್ತು 14.2Nm ಅನ್ನು ಉತ್ಪಾದಿಸುತ್ತದೆ. ಪ್ರಸರಣ ಕರ್ತವ್ಯಗಳನ್ನು ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ನಿಂದ ನಿರ್ವಹಿಸಲಾಗುತ್ತದೆ ಎಂದು ತಿಳಿದುಬಂದಿದೆ. 
 
ಇದನ್ನೂ ಓದಿ- Automatic Cars: ಇವೇ ನೋಡಿ ಕೈಗೆಟುಕುವ ದರದಲ್ಲಿ ಲಭ್ಯವಿರುವ ಆಟೋಮ್ಯಾಟಿಕ್ ಕಾರುಗಳು

YZF-R15 V4 ಮೋಟಾರ್‌ಸೈಕಲ್ 282 ಎಂಎಂ ಮುಂಭಾಗದ ಡಿಸ್ಕ್ ಮತ್ತು 220 ಎಂಎಂ ಹಿಂಭಾಗದ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಯಮಹಾ R15 V4 ಡ್ಯುಯಲ್-ಚಾನೆಲ್ ABS (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ನೊಂದಿಗೆ ಬರುತ್ತದೆ. ಸಸ್ಪೆನ್ಷನ್ ಸೆಟಪ್ USD ಫೋರ್ಕ್‌ಗಳನ್ನು ಮುಂಚೂಣಿಯಲ್ಲಿ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಕೂಡ ಒಳಗೊಂಡಿದೆ ಎಂದು ಕಂಪನಿ ಮಾಹಿತಿ ನೀಡಿದೆ.

ಇನ್ನೂ YZF-R15 V4 ಮೋಟಾರ್‌ಸೈಕಲ್ ನ ಉದ್ದ 1990mm ಆಗಿದ್ದರೆ, ಇದರ ಅಗಲ 725mm ಮತ್ತು ಇದರ ಎತ್ತರ 1135mm ಆಗಿದೆ. ಇದು 1325mm ವ್ಹೀಲ್ ಬೇಸ್ ಮತ್ತು 170mm ಗ್ರೌಂಡ್ ಕ್ಲಿಯರೆನ್ಸ್  ನೊಂದಿಗೆ ಬರುತ್ತದೆ. ಈ ಬೈಕ್‌ನ ಸೀಟ್ ಎತ್ತರ  815 ಮಿಮೀ ಎಂದು ತಿಳಿದುಬಂದಿದೆ. 

ಇದನ್ನೂ ಓದಿ- Top Selling Cars in Pakistan: ಪಾಕಿಸ್ತಾನದಲ್ಲಿ ಮಾರಾಟವಾಗುವ ಟಾಪ್ 5 ಕಾರುಗಳಲ್ಲಿ ಮೂರು ಭಾರತೀಯ ಕಾರುಗಳು 

YZF-R15 V4 ಮೋಟಾರ್‌ಸೈಕಲ್ ನ ವೈಶಿಷ್ಟ್ಯಗಳು: 
ಇದು ಬೈ-ಫಂಕ್ಷನಲ್ ಹೆಡ್‌ಲೈಟ್, ಎಲ್‌ಇಡಿ ಪೊಸಿಷನ್ ಲೈಟ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸ್ವಿಚ್, ಸಂಪೂರ್ಣ ಡಿಜಿಟಲ್ ಎಲ್‌ಸಿಡಿ ಮೀಟರ್ ಕನ್ಸೋಲ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಯಮಹಾ ವೈ-ಕನೆಕ್ಟ್ ಅಪ್ಲಿಕೇಶನ್ ಸೇರಿದಂತೆ ಇನ್ನೂ ಕೆಲವು  ವೈಶಿಷ್ಟ್ಯಗಳೊಂದಿಗೆ ಬರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News