Private Jet Booking : ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸುವುದು ಕೇವಲ ಕನಸು ಎನ್ನುವ ಭಾವನೆ ನಿಮ್ಮಲ್ಲಿ ಇದ್ದರೆ ನಿಮ್ಮ ಯೋಚನೆ ತಪ್ಪು.ನಿಮ್ಮ ಈ ಕನಸನ್ನು ನನಸಾಗಿಸುವ ಸುಲಭ ವಿಧಾನ ಇಲ್ಲಿದೆ.ಕೈಗೆಟುಕುವ ಬೆಲೆಯಲ್ಲಿ ಕೂಡಾ ಪ್ರೈವೇಟ್ ಜೆಟ್ ಬುಕ್ ಮಾಡುವುದು ಸಾಧ್ಯವಾಗುತ್ತದೆ.ಈ ಮೂಲಕ ಖಾಸಗಿ ಜೆಟ್‌ನಲ್ಲಿ ಬಹಳ ಸುಲಭವಾಗಿ ಪ್ರಯಾಣಿಸಬಹುದು.ಇದಕ್ಕಾಗಿ ನೀವು ಕೆಲವು ಸಲಹೆಗಳನ್ನು ಅನುಸರಿಸಬೇಕು.


COMMERCIAL BREAK
SCROLL TO CONTINUE READING

 Empty Leg Flights ಬುಕ್ ಮಾಡಿ:
ಭಾರತದಲ್ಲಿ ಖಾಸಗಿ ಜೆಟ್ ಕಂಪನಿಗಳು  Empty Leg Flightಗಳನ್ನು ನೀಡುತ್ತವೆ.  ಇದರಲ್ಲಿ ಜೆಟ್ ಒನ್ ವೆ ಪ್ರಯಾಣದ ನಂತರ ಖಾಲಿ ಹಿಂತಿರುಗುತ್ತದೆ.ಕಂಪನಿಗಳು ಅಂತಹ ವಿಮಾನಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತವೆ.ಇದಕ್ಕಾಗಿ ಭಾರತದಲ್ಲಿ ಖಾಸಗಿ ಜೆಟ್ ಸೇವೆಗಳನ್ನು ಒದಗಿಸುವ JetSetGo, BookMyJet ಅಥವಾ JetSmart ನಂತಹ ಕಂಪನಿಗಳನ್ನು ಸಂಪರ್ಕಿಸಬಹುದು.


ಇದನ್ನೂ ಓದಿ : ಪ್ಯಾಂಟ್ ಜೇಬಿನಲ್ಲಿ ಮೊಬೈಲ್‌ ಇಟ್ಟುಕೊಳ್ಳೋ ಅಭ್ಯಾಸ ನಿಮಗಿದ್ಯಾ? ಇದರಿಂದಾಗುವ ಸಮಸ್ಯೆಗಳ ಬಗ್ಗೆ ಈಗಲೇ ಅರಿತುಕೊಳ್ಳಿ


ಲಾಸ್ಟ್ ಮಿನಿಟ್ ಡೀಲ್‌:
ಪ್ರಯಾಣದ ದಿನಾಂಕಗಳು ಹೊಂದಿಕೊಳ್ಳುವಂತಿದ್ದರೆ, ನೀವು ಲಾಸ್ಟ್ ಮಿನಿಟ್ ಡೀಲ್‌ಗಳನ್ನು ಕೂಡಾ ಪಡೆಯಬಹುದು.ಖಾಸಗಿ ಜೆಟ್ ಕಂಪನಿಗಳು ಸಾಮಾನ್ಯವಾಗಿ ಉಳಿದ ಸೀಟುಗಳನ್ನು ಅಗ್ಗವಾಗಿ ಮಾರಾಟ ಮಾಡುತ್ತವೆ.ಅಂತಹ ಡೀಲ್‌ಗಳಿಗಾಗಿ ನೀವು ಫ್ಲೈ ಬ್ಲೇಡ್ ಇಂಡಿಯಾ ಮತ್ತು ಜೆಟ್‌ಸೆಟ್‌ಗೊದಂತಹ ಪ್ಲಾಟ್‌ಫಾರ್ಮ್‌ಗಳನ್ನು ಬಳಸಬಹುದು.


ಜೆಟ್ ಶೇರಿಂಗ್ :
ಭಾರತದಲ್ಲಿನ ಕೆಲವು ಕಂಪನಿಗಳು ಜೆಟ್ ಶೇರಿಂಗ್ ಆಯ್ಕೆಯನ್ನು ಒದಗಿಸುತ್ತವೆ.ಇದರಲ್ಲಿ ಇತರ ಪ್ರಯಾಣಿಕರೊಂದಿಗೆ ಜೆಟ್ ಅನ್ನು ಹಂಚಿಕೊಳ್ಳಬಹುದು. ಇದು ನಿಮ್ಮ ವೆಚ್ಚವನ್ನು ಕಡಿಮೆ ಮಾಡುತ್ತದೆ. JetSetGo ಮತ್ತು BookMyJet ಸೇವೆಗಳನ್ನು ಒದಗಿಸುತ್ತವೆ.ಅಲ್ಲಿ ಅದೇ ಜೆಟ್‌ನಲ್ಲಿ ಇತರ ಪ್ರಯಾಣಿಕರೊಂದಿಗೆ ಪ್ರಯಾಣಿಸಬಹುದು.


ಮೆಂಬರ್ ಶಿಪ್ ಪ್ರೋಗ್ರಾಮ್ :
ನೀವು ನಿಯಮಿತವಾಗಿ ಪ್ರಯಾಣಿಸುತ್ತಿದ್ದರೆ, ಮೆಂಬರ್ ಶಿಪ್ ಪ್ರೋಗ್ರಾಮ್ ಭಾಗವಾಗುವುದು ಪ್ರಯೋಜನಕಾರಿಯಾಗಿದೆ.ಈ ಕಾರ್ಯಕ್ರಮಗಳು ನಿಮಗೆ ವಿಶೇಷ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಒದಗಿಸುತ್ತವೆ.JetSetGo ಮತ್ತು ಕ್ಲಬ್ ಒನ್ ಏರ್‌ನಂತಹ ಕಂಪನಿಗಳ ಸದಸ್ಯತ್ವ ಕಾರ್ಯಕ್ರಮಗಳ ಭಾಗವಾಗಬಹುದು.


ಇದನ್ನೂ ಓದಿ : ನೀವು ಖರೀದಿಸಿದ ಸಿಲಿಂಡರ್‌ ಫುಲ್‌ ಇದ್ಯಾ ಅಥವಾ ಅರ್ಧಂಬರ್ಧ ತುಂಬಿದ್ಯಾ? ಸುಲಭವಾಗಿ ಮನೆಯಲ್ಲೇ ಹೀಗೆ ಚೆಕ್‌ ಮಾಡಿ


ನೇರವಾಗಿ ಚಾರ್ಟರ್ ಕಂಪನಿಗಳನ್ನು ಸಂಪರ್ಕಿಸಿ:
ಕೆಲವೊಮ್ಮೆ ನೀವು ಖಾಸಗಿ ಜೆಟ್ ಚಾರ್ಟರ್ ಕಂಪನಿಗಳನ್ನು ನೇರವಾಗಿ ಸಂಪರ್ಕಿಸುವ ಮೂಲಕ ವಿಶೇಷ ರಿಯಾಯಿತಿಗಳನ್ನು ಪಡೆಯಬಹುದು.ವಿಶೇಷವಾಗಿ ನೀವು ಗುಂಪಿನಲ್ಲಿ ಪ್ರಯಾಣಿಸುತ್ತಿದ್ದರೆ, ಈ ಆಯ್ಕೆಯು ಅಗ್ಗವಾಗಿ ಪರಿಣಮಿಸಬಹುದು. ಇದಕ್ಕಾಗಿ ಏರ್ ಚಾರ್ಟರ್ ಸರ್ವಿಸ್ ಇಂಡಿಯಾ ಮತ್ತು ಬುಕ್‌ಮೈಜೆಟ್‌ನಂತಹ ಕಂಪನಿಗಳನ್ನು ಸಂಪರ್ಕಿಸಬಹುದು.


ಹೀಗೆ ಮಾಡಿ :
ನಿಮ್ಮ ಸ್ನೇಹಿತರು ಅಥವಾ ವ್ಯಾಪಾರ ಸಹೋದ್ಯೋಗಿಗಳೊಂದಿಗೆ ನೀವು ಜಂಟಿ ಪ್ರವಾಸವನ್ನು ಆಯೋಜಿಸಬಹುದು.ಇದು ಪ್ರವಾಸದ ಒಟ್ಟು ವೆಚ್ಚವನ್ನು ವಿಂಗಡಿಸಲು ಅನುಮತಿಸುತ್ತದೆ, ಮತ್ತು ಪ್ರತಿಯೊಬ್ಬರೂ ಐಷಾರಾಮಿ ಅನುಭವವನ್ನು ಹೊಂದಬಹುದು.ಈ ತಂತ್ರಗಳನ್ನು ಬಳಸುವುದರ ಮೂಲಕ ನೀವು ಭಾರತದಲ್ಲಿ ಖಾಸಗಿ ಜೆಟ್ ಪ್ರಯಾಣವನ್ನು ಅಗ್ಗವಾಗಿ ಆನಂದಿಸಬಹುದು. 


ಸಾಮಾನ್ಯ ವಿಮಾನ ಮತ್ತು ಜೆಟ್ ವಿಮಾನ ದರದ ನಡುವಿನ ವ್ಯತ್ಯಾಸವೇನು? :
ನೀವು ದೆಹಲಿಯಿಂದ ಮುಂಬೈಗೆ ಹೋಗುವುದಾದರೆ ಸಾಮಾನ್ಯ (Economy) ವಿಮಾನವನ್ನು ಆರಿಸಿದರೆ, ಟಿಕೆಟ್ ದರ 4000 ರಿಂದ 15000 ರೂ.ವರೆಗೆ ಇರುತ್ತದೆ. ಬಿಸಿನೆಸ್ ಕ್ಲಾಸ್ ಆಯ್ಕೆ ಮಾಡಿದರೆ ಆ ದರ 1 ರಿಂದ 3 ಲಕ್ಷದವರೆಗೆ ಇರುತ್ತದೆ.ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಬ್ಯುಸಿನೆಸ್ ಕ್ಲಾಸ್ ದರದಲ್ಲಿ ಪ್ರೈವೇಟ್ ಜೆಟ್ ವಿಮಾನದ ಟಿಕೆಟ್ ಪಡೆಯಬಹುದು.  ಕೆಲವೊಮ್ಮೆ ಇದಕ್ಕಿಂತ ಕಡಿಮೆ ಬೆಲೆಗೆ ಕೂಡಾ ಟಿಕೆಟ್ ಸಿಗುವ ಸಾಧ್ಯತೆ ಇರುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ