ಈ ಒಂದು ನಂಬರ್ ಗೆ ಡಯಲ್ ಮಾಡಿದರೆ ಸಾಕು ಆಕ್ಟಿವ್ ಆಗಿ ಬಿಡುತ್ತದೆ BSNL 4G ಸಿಮ್!

ಈಗ   BSNL 4G ಸಿಮ್ ಖರೀದಿ ಮಾತ್ರವಲ್ಲ ಅದನ್ನು ಆಕ್ಟಿವ್ ಮಾಡುವುದು ಕೂಡಾ ಬಹಳ ಸುಲಭ. 

Written by - Ranjitha R K | Last Updated : Aug 13, 2024, 11:52 AM IST
  • ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಸರಾಸರಿ 15 ಪ್ರತಿಶತದಷ್ಟು ಹೆಚ್ಚಳ
  • BSNL ಕಂಪನಿಯ ಕಡೆಗೆ ಮುಖ ಮಾಡುತ್ತಿರುವ ಗ್ರಾಹಕರು
  • ಹೊಸ BSNL ಸಿಮ್ ಕಾರ್ಡ್ ಅನ್ನು ಆಕ್ಟಿವ್ ಮಾಡುವುದು ಹೇಗೆ?
ಈ ಒಂದು ನಂಬರ್ ಗೆ ಡಯಲ್ ಮಾಡಿದರೆ ಸಾಕು ಆಕ್ಟಿವ್ ಆಗಿ ಬಿಡುತ್ತದೆ  BSNL 4G ಸಿಮ್! title=

How to activate BSNL 4G SIM card : ಭಾರತದ ದೊಡ್ಡ ಟೆಲಿಕಾಂ ಕಂಪನಿಗಳಾದ Airtel, Jio ಮತ್ತು Vi ಇತ್ತೀಚೆಗೆ ತಮ್ಮ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಸರಾಸರಿ 15 ಪ್ರತಿಶತದಷ್ಟು ಹೆಚ್ಚಿಸಿವೆ.ಈ ಕಾರಣದಿಂದಾಗಿ,ಅನೇಕ ಗ್ರಾಹಕರು ಅಗ್ಗದ ರೀಚಾರ್ಜ್ ಯೋಜನೆಗಳನ್ನು ಒದಗಿಸುವ BSNL ಕಂಪನಿಯ ಕಡೆಗೆ ಮುಖ ಮಾಡುತ್ತಿದ್ದಾರೆ. ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯಲು ಕಂಪನಿಯು ದೇಶದಲ್ಲಿ ತನ್ನ 4G ಸೇವೆಗಳನ್ನು ವೇಗವಾಗಿ ವಿಸ್ತರಿಸುತ್ತಿದೆ. ಮುಂದಿನ ವರ್ಷ 5G ಸೇವೆಗಳನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಇದಲ್ಲದೆ, ಸರ್ಕಾರಿ ಕಂಪನಿಯು ತನ್ನ ಗ್ರಾಹಕರಿಗೆ 4G ಮತ್ತು 5G ಸಿಮ್ ಕಾರ್ಡ್‌ಗಳ ವಿತರಣೆಯನ್ನು ಈಗಾಗಲೇ ಪ್ರಾರಂಭಿಸಿದೆ.

BSNL ಸಿಮ್ ಪಡೆಯಲು ಬಯಸುವ ಜನರು ಅದನ್ನು ಮಾರುಕಟ್ಟೆ, BSNL ಕಚೇರಿ ಅಥವಾ ಮನೆಯಲ್ಲಿ  ಹೋಂ ಡೆಲಿವೆರಿ ಮೂಲಕ ಪಡೆಯಬಹುದು. ಜುಲೈ 2024 ರಲ್ಲಿ ಆಂಧ್ರಪ್ರದೇಶದಲ್ಲಿ 2.17 ಲಕ್ಷ ಹೊಸ ಸಂಪರ್ಕಗಳನ್ನು ಸೇರಿಸುವ ಮೂಲಕ ಕಂಪನಿಯು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ. ಹೊಸ ಸಂಪರ್ಕಗಳ ಹೆಚ್ಚಳದಿಂದ ರಾಜ್ಯದಲ್ಲಿ ಬಿಎಸ್‌ಎನ್‌ಎಲ್‌ನ ಒಟ್ಟು ಸಂಪರ್ಕಗಳ ಸಂಖ್ಯೆ 40 ಲಕ್ಷಕ್ಕೆ ತಲುಪಲಿದೆ.BSNL ಗ್ರಾಹಕರು ತಮ್ಮ ಹೊಸ ಸಿಮ್ ಅನ್ನು ಆಕ್ಟಿವ್ ಮಾಡುವುದು ಕೂಡಾ ಬಹಳ ಸುಲಭ. ಹೊಸ BSNL ಗ್ರಾಹಕರಾಗಿದ್ದರೆ ಮತ್ತು ನಿಮ್ಮ BSNL ಸಿಮ್ ಅನ್ನು ಆಕ್ಟಿವ್ ಮಾಡುವುದು ಹೀಗ್ ಎನ್ನುವ ಮಾಹಿತಿ ಇಲ್ಲಿದೆ. 

ಇದನ್ನೂ ಓದಿ : ಇನ್ನು ಬಿಸಿಲಿನಿಂದಲೇ ಚಾರ್ಜ್ ಆಗುವುದು ಸ್ಮಾರ್ಟ್ ಫೋನ್! ವಿಜ್ಞಾನಿಗಳ ಹೊಸ ಆವಿಷ್ಕಾರವಿದು

ಹೊಸ BSNL ಸಿಮ್ ಕಾರ್ಡ್ ಅನ್ನು ಆಕ್ಟಿವ್ ಮಾಡುವುದು ಹೇಗೆ? : 
ಹಂತ 1: ನಿಮ್ಮ BSNL ಸಿಮ್ ಕಾರ್ಡ್ ಅನ್ನು ಮೊಬೈಲ್ ಫೋನ್‌ನಲ್ಲಿ ಹಾಕಿ ಫೋನ್ ಅನ್ನು ರಿಸ್ಟಾರ್ಟ್ ಮಾಡಿ. 
ಹಂತ 2: ನೆಟ್‌ವರ್ಕ್ ಸಿಗ್ನಲ್‌ಗಾಗಿ ನಿರೀಕ್ಷಿಸಿ.
ಹಂತ 3: ಫೋನ್ ಪರದೆಯ ಮೇಲೆ ನೆಟ್‌ವರ್ಕ್ ಸಿಗ್ನಲ್ ಕಾಣಿಸಿದಾಗ ಫೋನ್ ಅಪ್ಲಿಕೇಶನ್ ತೆರೆಯಿರಿ.
ಹಂತ 4: ನಿಮ್ಮ ಫೋನ್‌ನಿಂದ 1507 ಸಂಖ್ಯೆಗೆ ಕರೆ ಮಾಡುವ ಮೂಲಕ ನಿಮ್ಮ ಗುರುತನ್ನು ಪರಿಶೀಲಿಸಿ.
ಹಂತ 5: ನಿಮ್ಮ ಭಾಷೆ, ಗುರುತು ಮತ್ತು ವಿಳಾಸದ ಬಗ್ಗೆ ನಿಮ್ಮನ್ನು ಕೇಳಲಾಗುತ್ತದೆ.
ಹಂತ 6: ಟೆಲಿ-ಪರಿಶೀಲನೆಗಾಗಿ ನೀಡಲಾದ ಸೂಚನೆಗಳನ್ನು ಅನುಸರಿಸಿ.
ಹಂತ 7: ಪ್ರಕ್ರಿಯೆಯು ಪೂರ್ಣಗೊಂಡ ನಂತರ, ನಿಮ್ಮ BSNL ಸಿಮ್ ಅನ್ನು ಆಕ್ಟಿವ್ ಮಾಡಲಾಗುತ್ತದೆ. 
ಹಂತ 8: ನಿಮ್ಮ ಫೋನ್‌ಗೆ ನಿರ್ದಿಷ್ಟ ಇಂಟರ್ನೆಟ್ ಸೆಟ್ಟಿಂಗ್‌ಗಳನ್ನು ನೀಡಲಾಗುತ್ತದೆ.

ಹಂತ 9: ಈ ಸೆಟ್ಟಿಂಗ್‌ಗಳನ್ನು ಸೇವ್ ಮಾಡಿಕೊಳ್ಳಿ. ಇದರಿಂದ ನಿಮ್ಮ ಸಿಮ್ ಕಾರ್ಡ್ ಸರಿಯಾಗಿ ಕಾರ್ಯನಿರ್ವಹಿಸುತ್ತದೆ.
ಹಂತ 10: ಈಗ ನೀವು ನಿಮ್ಮ ಸಿಮ್ ಕಾರ್ಡ್‌ನಿಂದ ಫೋನ್ ಮಾಡಬಹುದು ಇಂಟರ್ನೆಟ್ ಬಳಸಬಹುದು.

ಇದನ್ನೂ ಓದಿ : OnePlus 12 specifications: ಅತ್ಯಂತ ಅಗ್ಗದ ಬೆಲೆಗೆ OnePlus 12 ಲಭ್ಯ, ಇಂದೇ ಖರೀದಿಸಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News