ನಿಮ್ಮ ಕನಸಿನ Maruti Brezza SUV ಅನ್ನು ಕೇವಲ 3 ಲಕ್ಷಕ್ಕೆ ಮನೆಗೆ ತನ್ನಿ
ಜೀವನದಲ್ಲಿ ಒಂದು ಬಾರಿ ಆದರೂ ಕಾರ್ ಖರೀದಿಸಬೇಕು. ಅದುವೇ ಐಷಾರಾಮಿ ಕಾರ್ ಅನ್ನು ಕೊಳ್ಳಬೇಕು ಎಂಬುದು ಬಹುತೇಕ ಜನರ ಕನಸು. ಅಂತಹ ಕನಸಿನ ಕಾರುಗಳ ಸಾಲಿನಲ್ಲಿ ಮಾರುತಿ ಸುಜುಕಿಯ ಮಾರುತಿ ಬ್ರೆಝಾ ಎಸ್‌ಯುವಿ ಕೂಡ ಸೇರಿದೆ. ನೀವು ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮವಾದ ಎಸ್‌ಯುವಿ ಕಾರ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಮಾರುತಿ ಬ್ರೆಝಾ ಎಸ್ಯುವಿಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ ಎಂದು ಹೇಳಬಹುದು.
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಎಸ್‌ಯುವಿ ಕಾರ್ ಕ್ರೇಜ್ ಹೆಚ್ಚಾಗಿದೆ. ನೀವು ಸಹ ಕೈಗೆಟುಕುವ ಬೆಲೆಯಲ್ಲಿ ಎಸ್‌ಯುವಿ ಕಾರ್ ಅನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಮಾರುತಿ ಬ್ರೆಝಾ ಎಸ್‌ಯುವಿ ಅತ್ಯುತ್ತಮ ಆಯ್ಕೆಯಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ್. ಮಾರುತಿ ಸುಜುಕಿ ಕಂಪನಿಯ ಈ ಪ್ರಸಿದ್ಧ ಕಾರನ್ನು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಎಂದೂ ಕೂಡ ಕರೆಯಲಾಗುತ್ತದೆ.
2023 ರ ಫೆಬ್ರವರಿಯಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿ ಕಾರ್ ಎಂದರೆ ಮಾರುತಿ ಸುಜುಕಿ ವಿಟಾರಾ ಬ್ರೆಝಾ. ಸನ್‌ರೂಫ್, 360 ಡಿಗ್ರಿ ಕ್ಯಾಮೆರಾದಂತಹ ವೈಶಿಷ್ಟ್ಯಗಳೊಂದಿಗೆ ಲಭ್ಯವಿರುವ ಮಾರುತಿ ಬ್ರೆಝಾ ಎಸ್‌ಯುವಿ ಕಾರನ್ನು ನೀವು ಕೇವಲ 3 ಲಕ್ಷ ರೂ.ಗಳಲ್ಲಿ ಮನೆಗೆ ತರಬಹುದು. ನಿಮ್ಮ ಕನಸಿನ ಮಾರುತಿ ಬ್ರೆಝಾ ಎಸ್‌ಯುವಿಯನ್ನು ಕೇವಲ 3 ಲಕ್ಷ ರೂ.ಗಳಲ್ಲಿ ಹೇಗೆ ಮನೆಗೆ ತರಬಹುದು ಎಂದು ಯೋಚಿಸುತ್ತಿದ್ದರೆ, ಇಲ್ಲಿದೆ ಅದರ ಸಂಪೂರ್ಣ ಲೆಕ್ಕಾಚಾರ.
ಇದನ್ನೂ ಓದಿ- ಮಾರುತಿ ಆಲ್ಟೊ 800 ದರದಲ್ಲಿಯೇ ಸಿಗುತ್ತೆ ಅದಕ್ಕಿಂತ ಹಲವು ಪಟ್ಟು ಉತ್ತಮ ಕಾರ್
ಮಾರುತಿ ಬ್ರೆಝಾ ಎಸ್‌ಯುವಿ ಬೆಲೆ:
ಕಾರಿನ ಎಕ್ಸ್ ಶೋ ರೂಂ ಬೆಲೆ 8.19 ಲಕ್ಷ ರೂ.ಗಳಿಂದ 14.04 ಲಕ್ಷ ರೂ.ಗಳವರೆಗೆ ಇರಲಿದೆ. ನೀವು ಈ ಕಾರನ್ನು ಲೋನ್‌ನಲ್ಲಿ ಖರೀದಿಸಲು ಬಯಸಿದರೆ, ಕೇವಲ 3 ಲಕ್ಷ ರೂ.ಗಳನ್ನು ಪಾವತಿಸಿ ಈ ಕಾರನ್ನು ಮನೆಗೆ ತರಬಹುದಾಗಿದೆ.
ಮಾರುತಿ ಬ್ರೆಝಾ EMI ಕ್ಯಾಲ್ಕುಲೇಟರ್:
ನೀವು ಕಾರಿನ ಬೇಸ್ ವೆರಿಯಂಟ್ (ಬ್ರೆಝಾ ಎಲ್‌ಎಕ್ಸ್‌ಐ) ಖರೀದಿಸಲು ಇಚ್ಛಿಸಿದರೆ ಇದರ ಆನ್ ರೋಡ್ ವೆಚ್ಚ 9.26 ಲಕ್ಷರೂ.ಗಳಾಗಿವೆ. ನೀವು ಇದನ್ನು ಇಎಂಐನಲ್ಲಿ ಖರೀದಿಸಲು ಬಯಸಿದರೆ, ಇದಕ್ಕಾಗಿ 3 ಲಕ್ಷ ರೂ. ಮುಂಗಡವಾಗಿ ಪಾವತಿಸುತ್ತೀರಿ ಎಂದು ಭಾವಿಸೋಣ. ಇನ್ನುಳಿದ 6.26 ಲಕ್ಷ ರೂ.ಗಳ ಪಾವತಿಗಾಗಿ ನೀವು 1 ರಿಂದ 7 ವರ್ಷಗಳವರೆಗೆ ಸಾಲದ ಅವಧಿಯನ್ನು ಆಯ್ಕೆ ಮಾಡಬಹುದು. ಒಂದೊಮ್ಮೆ ನೀವು ಐದು ವರ್ಷಗಳ ಸಾಲದ ಅವಧಿಯನ್ನು ಆರಿಸಿದರೆ ಇದಕ್ಕಾಗಿ ಐದು ವರ್ಷಗಳವರೆಗೆ ನೀವು ಪ್ರತಿ ತಿಂಗಳು 13,313 ರೂಪಾಯಿಗಳ ಇಎಂಐ ಪಾವತಿಸಬೇಕಾಗುತ್ತದೆ. ಅಂದರೆ, ನೀವು ಇಎಂಐ ಮೂಲಕ ಕಾರ್ ಖರೀದಿಸಿದರೆ ಹೆಚ್ಚುವರಿಯಾಗಿ 1.72 ಲಕ್ಷ ರೂ. ಗಳನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ- ಮಾರುತಿ ಕಾರುಗಳ ಮೇಲೆ ಬಂಪರ್ ಡಿಸ್ಕೌಂಟ್- ಮಾರ್ಚ್ 31ರವರೆಗೆ ಮಾತ್ರ ಈ ಸುವರ್ಣಾವಕಾಶ
ಮಾರುತಿ ಬ್ರೆಝಾ ಎಸ್‌ಯುವಿಯ ವೈಶಿಷ್ಟ್ಯಗಳು:
>> ಮಾರುತಿ ಬ್ರೆಝಾ ಎಸ್‌ಯುವಿ LXi, VXi, ZXi ಮತ್ತು ZXi+ ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ. ಮಾರುತಿ ಇದನ್ನು ಆರು ಮೊನೊಟೋನ್ ಮತ್ತು ಮೂರು ಡ್ಯುಯಲ್-ಟೋನ್ ಶೇಡ್‌ಗಳಲ್ಲಿ ನೀಡುತ್ತದೆ.
>> ಇದರಲ್ಲಿ ಗರಿಷ್ಠ ಐದು ಮಂದಿ ಕುಳಿತುಕೊಳ್ಳಬಹುದು.
>>ಸಬ್ ಕಾಂಪ್ಯಾಕ್ಟ್ SUV 328 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.
>> ಮಾರುತಿ ಬ್ರೆಝಾ ಎಸ್‌ಯುವಿ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ನಾಲ್ಕು ಸ್ಪೀಕರ್‌ಗಳು, ಪ್ಯಾಡಲ್ ಶಿಫ್ಟರ್‌ಗಳು (ಎಟಿ ರೂಪಾಂತರ), ಸಿಂಗಲ್-ಪೇನ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಹೆಡ್-ಅಪ್ ಡಿಸ್ಪ್ಲೇ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ವೈಶಿಷ್ಟ್ಯಗಳೊಂದಿಗೆ ಬರಲಿದೆ.
>> ಈ ಕಾರಿನಲ್ಲಿ ಸುರಕ್ಷತೆ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್-ಹೋಲ್ಡ್ ಅಸಿಸ್ಟ್, EBD ಜೊತೆಗೆ ABS ಮತ್ತು ಹಿಂಭಾಗದ ಪಾರ್ಕಿಂಗ್ ಸಂವೇದಕಗಳನ್ನು ಸಹ ಒದಗಿಸಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.