ಬೆಂಗಳೂರು : ಕಾರು ಆರಾಮದಾಯಕವಲ್ಲದಿದ್ದರೆ ಅದರಲ್ಲಿ ಕುಳಿತುಕೊಳ್ಳುವುದು ಪ್ರಯಾಣಿಸುವುದು ಅಷ್ಟು ಸುಲಭವಲ್ಲ. ಪ್ರಯಾಣದ ವೇಳೆಯೂ ಹಾಸಿಗೆಯಿದ್ದರೆ ಪ್ರಯಾಣ ಹೆಚ್ಚು ಆರಾಮದಾಯಕವಾಗಿರುವುದು ಸಾಧ್ಯವಾಗುತ್ತದೆ. ನಿಮ್ಮ ಕಾರಿನೊಳಗೆ ಹಾಸಿಗೆಯೊಂದಿದ್ದರೆ ಪ್ರಯಾಣದ ಅನುಭವ ಹೇಗಿರಬಹುದು ಎನ್ನುವುದರ ಬಗ್ಗೆ ಒಮ್ಮೆ ಯೋಚಿಸಿ. ಇಂದು ನಾವು ಕಾರಿನ ಹಿಂದಿನ ಸೀಟನ್ನು ಹಾಸಿಗೆಯನ್ನಾಗಿ ಪರಿವರ್ತಿಸಲು ಸಹಾಯ ಮಾಉವ ಪರಿಕರದ ಬಗ್ಗೆ ಮಾಹಿತಿ ನೀಡಲಿದ್ದೇವೆ. ನೀವು ಕಾರಿನೊಂದಿಗೆ ದೀರ್ಘ ಪ್ರವಾಸಕ್ಕೆ ಹೋದಾಗ, ಹೋಟೆಲ್ ಗಾಗಿ ಮಾಡುವ ಖರ್ಚನ್ನು ಕೂಡಾ ಇದು ಉಳಿಸುತ್ತದೆ. ಕಾರಿನ ಹಿಂಬದಿಯ ಆಸನವನ್ನು ಹಾಸಿಗೆಯನ್ನಾಗಿ ಮಾಡುವ ಮೂಲಕ ಕಾರಿನಲ್ಲಿ ವಿಶ್ರಾಂತಿ ಪಡೆಯಬಹುದು.
ಆನ್‌ಲೈನ್‌ನಲ್ಲಿ Car Inflatable Mattress ಎಂದು ಸರ್ಚ್ ಮಾಡಿದರೆ ಹಲವು ಬ್ರಾಂಡ್‌ಗಳ ಉತ್ಪನ್ನಗಳು ಕಣ್ಣಮುಂದೆ ಬರುತ್ತವೆ. ನಿಮ್ಮ ಬಜೆಟ್ ಮತ್ತು ವಿಮರ್ಶೆಗಳ ಆಧಾರದ ಮೇಲೆ ಅವುಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬಹುದು. ಎಸ್‌ಯುವಿ, ಸೆಡಾನ್, ಹ್ಯಾಚ್‌ಬ್ಯಾಕ್ ಮತ್ತು ಮಿನಿ ವ್ಯಾನ್‌ನಂತಹ ವಿವಿಧ ರೀತಿಯ ಕಾರುಗಳಿಗೆ Inflatable ಮ್ಯಾಟ್ರೆಸ್ ಸಿಗುತ್ತದೆ. ಇಲ್ಲಿ ನೀವು ಖರೀದಿಸಲು ಆಯ್ಕೆ ಮಾಡಿದ ಇನ್ಫ್ಲೇ ಟೇಬಲ್ ಕಾರ್ ಮ್ಯಾಟ್ರೆಸ್, ನಿಮ್ಮ ಕಾರು ಮತ್ತು ಮಾದರಿಗೆ ಸರಿಹೊಂದುತ್ತದೆಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳಿ.
ಇದನ್ನೂ ಓದಿ : ವಿದ್ಯುತ್ ಇಲ್ಲದೆ ತಂಪಾದ ಗಾಳಿ ನೀಡುತ್ತೆ ಈ ಫ್ಯಾನ್, ಬೆಲೆಯೂ ಕಡಿಮೆ
ಇನ್ಫ್ಲೇ ಟೇಬಲ್ ಕಾರ್ ಮ್ಯಾಟ್ರೆಸ್ ದೀರ್ಘ ಕಾರ್ ಟ್ರಿಪ್‌ಗಳಿಗೆ ಉತ್ತಮವಾಗಿವೆ. ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಅವುಗಳ ಬೆಲೆ 1700 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಆದರೆ ಈ ಮ್ಯಾಟ್ರೆಸ್ ಅನ್ನು ಖರೀದಿಸುವ ಮುನ್ನ ಅದರ ಗುಣಮಟ್ಟ, ಬಳಸಲಾದ ವಸ್ತು, ಮತ್ತು ಭಾರ ಹೊರುವ ಸಾಮರ್ಥ್ಯ ಏನು ಎಂಬುದನ್ನು ಪರಿಶೀಲಿಸಿಕೊಳ್ಳಿ.
ಇದನ್ನೂ ಓದಿ : Sumo ಪೈಲ್ವಾನ್ ಜೊತೆ ಕಾದಾಟಕ್ಕಿಳಿದ ಟ್ವಿಟ್ಟರ್ ಮಾಲೀಕ! ಕಾರಣ ಏನು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.