ನವದೆಹಲಿ : ಟೆಲಿಕಾಂ ಕಂಪನಿ ಭಾರತೀಯ ಸಂಚಾರ ನಿಗಮ ಲಿಮಿಟೆಡ್  (BSNL) ತನ್ನ ಗ್ರಾಹಕರಿಗೆ ಹೊಸ ವರ್ಷದ ಗಿಫ್ಟ್ ನೀಡಿದೆ. ಬಿಎಸ್ ಎನ್ಎಲ್ 365 ರೂ ರಿಚಾರ್ಜ್ ನ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ಗ್ರಾಹಕರು 365 ರೂ ರೀಚಾರ್ಜ್ ಮಾಡಿದರೆ 365 ದಿನಗಳ ಅಂದರೆ ಒಂದು ವರ್ಷದ ವಾಲಿಡಿಟಿ ದೊರೆಯುತ್ತದೆ.


COMMERCIAL BREAK
SCROLL TO CONTINUE READING

ಈ ಯೋಜನೆಯಲ್ಲಿ ಲಭ್ಯವಿರುವ ಸೇವೆಗಳು: 


1.ಬಿಎಸ್‌ಎನ್‌ಎಲ್‌ನ (BSNL) 365 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ,  ಅನಿಯಮಿತ  ಕರೆ ಮಾಡುವ ಸೌಲಭ್ಯವನ್ನು ಪಡೆಯಬಹುದು. ಆದರೆ ಒಂದು ವಿಷಯ ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ ಈ ಯೋಜನೆಯ  ಅಡಿಯಲ್ಲಿ  ಪ್ರತಿದಿನ 250 ನಿಮಿಷಗಳ ಕಾಲ ಮಾತ್ರ ಕರೆ ಮಾಡಲು ಸಾಧ್ಯವಾಗುತ್ತದೆ.


2. ಈ  ಯೋಜನೆಯಲ್ಲಿ ಉಚಿತ ಕರೆ ಮಾಡುವುದರ ಜೊತೆಗೆ, ಪ್ರತಿದಿನ 2 ಜಿಬಿ ಡೇಟಾ ಸಹ ಲಭ್ಯವಿರುತ್ತದೆ. ಇದರೊಂದಿಗೆ 100 ಎಸ್‌ಎಂಎಸ್ (SMS)ಸೇವೆ ಕೂಡಾ ಇರುತ್ತದೆ. 


3.  BSNL ಪ್ರಿಪೇಯ್ಡ್ ರೀಚಾರ್ಜ್ (BSNL Prepaid Plan) ಯೋಜನೆಯ ಸಿಂಧುತ್ವವು ಒಂದು ವರ್ಷ. ಆದರೆ ಎಲ್ಲಾ ಉಚಿತ ಪ್ರಯೋಜನಗಳು 60 ದಿನಗಳವರೆಗೆ ಮಾತ್ರ ಲಭ್ಯವಿರುತ್ತವೆ. 60 ದಿನಗಳ ನಂತರ ಕರೆ ಮಾಡಬೇಕಾದರೆ ಅಥವಾ ಡೇಟಾ ಅಗತ್ಯವಿದ್ದರೆ ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ. 


3. 365 ರೂಪಾಯಿಗಳ ಈ ಯೋಜನೆಯೊಂದಿಗೆ ರೀಚಾರ್ಜ್ ಮಾಡಿದ ನಂತರ, ನಿಮ್ಮ ಸಂಖ್ಯೆಯಲ್ಲಿ ಒಂದು ವರ್ಷದವರೆಗೆ ಒಳಬರುವ ಕರೆಗಳ ಸೌಲಭ್ಯವಿರುತ್ತದೆ.
  
4. ಈ ಯೋಜನೆ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ-ಜಾರ್ಖಂಡ್, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಕೋಲ್ಕತಾ-ಪಶ್ಚಿಮ ಬಂಗಾಳ,  ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್ ಗಡ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡಿನಲ್ಲಿ ಲಭ್ಯವಿದೆ. ನೀವು ಈ ಯೋಜನೆ ಹಾಕಿಕೊಳ್ಳಬೇಕಾದರೆ , ನಿಮ್ಮ ವಲಯದಲ್ಲಿ ಈ ಯೋಜನೆ ಲಭ್ಯವಿದೆಯೇ ಎಂದು ಮೊದಲು ಖಚಿತಪಡಿಸಿಕೊಳ್ಳಿ. 


ALSO READ : BSNL ಗ್ರಾಹಕರೇ! ಈ ಪ್ಲಾನ್ ಬಳಸಿ ಹಣ ಉಳಿಸಿ


ಇನ್ನು, 1999 ರೂ. ರೀಚಾರ್ಜ್ ಮಾಡುವ ಮೂಲಕ ಬಳಕೆದಾರರು, ಒಂದು ವರ್ಷದವರೆಗೆ ಉಚಿತ ಕರೆ ಮಾಡುವುದರ ಜೊತೆಗೆ ಪ್ರತಿದಿನ 3 ಜಿಬಿ ಡೇಟಾ ಮತ್ತು 100 ಎಸ್‌ಎಂಎಸ್ ಸೇವೆಯನ್ನು ಪಡೆಯಬಹುದು. ಬಿಎಸ್‌ಎನ್‌ಎಲ್‌ನ ಈ ರೀಚಾರ್ಜ್ ಯೋಜನೆಯ ಸಿಂಧುತ್ವವು (Validity)365 ದಿನಗಳವರೆಗೆ ಇರುತ್ತದೆ. ಇದರೊಂದಿಗೆ ಗ್ರಾಹಕರಿಗೆ  ಒಂದು ವರ್ಷದವರೆಗೆ ಇರೋಸ್ ನೌ (Eros Now)ಸದಸ್ಯತ್ವ ಲಭಿಸುತ್ತದೆ. ಅಲ್ಲದೆ, 60 ದಿನಗಳವೆರೆಗೆ ಲೋಕಧುನ್ (Lokdhun)  ಸದಸ್ಯತ್ವವೂ ದೊರೆಯುತ್ತದೆ.


ಬಿಎಸ್‌ಎನ್‌ಎಲ್ ಮಾತ್ರವಲ್ಲದೆ,  ಏರ್‌ಟೆಲ್ (Airtel) ಗ್ರಾಹಕರು ಒಂದು ವರ್ಷದ ರೀಚಾರ್ಜ್ ಯೋಜನೆಯ ಸೌಲಭ್ಯವನ್ನೂ ಪಡೆಯುತ್ತಾರೆ. ಒಂದು ವರ್ಷದ ಮಾನ್ಯತೆಗಾಗಿ, ಏರ್‌ಟೆಲ್ ಬಳಕೆದಾರರು 1498 ಮತ್ತು 2498 ರೂಗಳಿಂದ ರೀಚಾರ್ಜ್ ಮಾಡಬಹುದು. 
1498 ರ ಯೋಜನೆಯಲ್ಲಿ ಅನಿಯಮಿತ ಕರೆ ಮಾಡುವುದರ ಜೊತೆಗೆ, ವರ್ಷಕ್ಕೆ 3600 ಎಸ್‌ಎಂಎಸ್ ಮತ್ತು ಒಟ್ಟು 24 ಜಿಬಿ ಡೇಟಾ ಲಭ್ಯವಿದೆ. 2498 ರೂ.ಗಳ ಯೋಜನೆಯಲ್ಲಿ ಅನಿಯಮಿತ ಕರೆ ಹೊರತುಪಡಿಸಿ, 2 ಜಿಬಿ ಡೇಟಾ ಮತ್ತು 100 ಎಸ್‌ಎಂಎಸ್ ಪ್ರತಿದಿನ ಲಭ್ಯವಿದೆ.


ALSO READ : JioGigaFiber ಗೆ ಸೆಡ್ಡು ಹೊಡೆದ BSNL


ವೊಡಾಫೋನ್-ಐಡಿಯಾ(Vodafone idea) ಗ್ರಾಹಕರು ಕೂಡಾ ಒಂದು ವರ್ಷದ ಸಿಂಧುತ್ವ ರೀಚಾರ್ಜ್ ಯೋಜನೆಯನ್ನು ಪಡೆಯಬಹುದು. ಇದಕ್ಕಾಗಿ ಅವರು 1499 ರೂ, 2399 ಮತ್ತು 2595 ರೂಗಳ ಮೂರು ಆಯ್ಕೆಗಳನ್ನು ಪಡೆಯುತ್ತಾರೆ.  
1499 ರೀಚಾರ್ಜ್‌ನಲ್ಲಿ ಒಂದು ವರ್ಷಕ್ಕೆ ಒಟ್ಟು 3600 ಎಸ್‌ಎಂಎಸ್ ಮತ್ತು 24 ಜಿಬಿ ಡೇಟಾ ಸಿಗುತ್ತದೆ.  2399 ರೂ ಯೋಜನೆಯಲ್ಲಿ ಪ್ರತಿದಿನ 1.5 ಜಿಬಿ ಮತ್ತು 100 ಎಸ್ಎಂಎಸ್ ದೊರೆಯುತ್ತದೆ. 2595 ರೂ ಯೋಜನೆಯಲ್ಲಿ ಪ್ರತಿದಿನ 2 ಜಿಬಿ ಡೇಟಾ,100ಎಸ್ಎಂಎಸ್ ಲಭ್ಯವಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G


iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.