BSNL 4G:ಮೋದಿ ಸರ್ಕಾರದಿಂದ ಬಹು ದೊಡ್ಡ ಘೋಷಣೆ :ಬಿಎಸ್ಎನ್ಎಲ್ 4G ನೆಟ್ ವರ್ಕ್ ಆರಂಭ!
ಇನ್ನು ಕೆಲವೇ ದಿನಗಳಲ್ಲಿ ಇಡೀ ದೇಶದಲ್ಲಿ BSNL 4G ಸೇವೆ ಆರಂಭವಾಗಲಿದೆ. ಈಗಾಗಲೇ 15 ಸಾವಿರ ಟವರ್‌ಗಳನ್ನು ಅಳವಡಿಸಲಾಗಿದೆ.
ಬೆಂಗಳೂರು : BSNL 4G ಸೇವೆ ಯಾವಾಗ ಆರಂಭವಾಗುತ್ತದೆ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. Reliance Jio, Airtel ಮತ್ತು Vi ತಮ್ಮ ಯೋಜನೆಗಳನ್ನು ದುಬಾರಿ ಮಾಡಿದ ತಕ್ಷಣ,ಜನರು BSNLಗೆ ಪೋರ್ಟ್ ಆಗುತ್ತಿದ್ದಾರೆ. BSNL ಯೋಜನೆಗಳು ಅಗ್ಗವಾಗಿರುವುದೇ ಇದಕ್ಕೆ ಕಾರಣ.ಅತಿ ಶೀಘ್ರದಲ್ಲಿಯೇ ದೇಶಾದ್ಯಂತ 4ಜಿ ಸೇವೆ ಆರಂಭಿಸಲಾಗುವುದು ಎಂದು ಬಿಎಸ್ಎನ್ಎಲ್ ಘೋಷಿಸಿದೆ.ಈಗಾಗಲೇ ಸರ್ಕಾರ 15 ಸಾವಿರ ಟವರ್‌ಗಳನ್ನು ಅಳವಡಿಸಿದ್ದು, ಉಳಿದ ಟವರ್‌ಗಳ ಕಾಮಗಾರಿಯನ್ನು ತ್ವರಿತಗೊಳಿಸಿದೆ.
DoT ಹಂಚಿಕೊಂಡ ಸ್ಕ್ರೀನ್‌ಶಾಟ್ :
ಪ್ರಸ್ತುತ BSNL 4G ಕೆಲವು ರಾಜ್ಯಗಳಲ್ಲಿ ಚಾಲನೆಯಲ್ಲಿದೆ.ಆದರೆ ಶೀಘ್ರದಲ್ಲೇ ಇದನ್ನು ದೇಶಾದ್ಯಂತ ವಿಸ್ತರಿಸುವ ಗುರಿಯನ್ನು ಕೂಡಾ ಹೊಂದಿದೆ. ಈ ಬಗ್ಗೆ ಈಗ ದೂರಸಂಪರ್ಕ ಇಲಾಖೆ (DoT) Xನಲ್ಲಿ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದೆ. ಇದರಲ್ಲಿ BSNLನ 4G ನೆಟ್‌ವರ್ಕ್ ಗೋಚರಿಸುತ್ತದೆ.ಅಲ್ಲದೆ ಆತ್ಮನಿರ್ಭರ ಭಾರತದ '4G-BSNL ಎಂದು ಶೀರ್ಷಿಕೆ ನೀಡಲಾಗಿದೆ.
ಇದನ್ನೂ ಓದಿ : ಫ್ರೀಡಂ ಪ್ಲಾನ್ ಮೂಲಕ ಅಗ್ಗದ ರೀಚಾರ್ಜ್ ಪ್ಲಾನ್ ಪರಿಚಯಿಸಿದ ಜಿಯೋ !ಗ್ರಾಹಕರು ಫುಲ್ ಖುಷ್
ಆಗಸ್ಟ್ 13 ರಂದು ತೆಗೆದ ಸ್ಕ್ರೀನ್‌ಶಾಟ್ :
ಸರ್ಕಾರ ಈ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದು, BSNL 4G ಸೇವೆಯನ್ನು ಶೀಘ್ರದಲ್ಲೇ ಸಕ್ರಿಯಗೊಳಿಸಲಾಗುವುದು ಎಂದು ಹೇಳಿದೆ.ಕೆಲವು ರಾಜ್ಯಗಳಲ್ಲಿ ಈಗಾಗಲೇ ಜನರು 4G ಸೇವೆಯ ಲಾಭ ಪಡೆಯುತ್ತಿದ್ದಾರೆ.ಅದೂ ಕಡಿಮೆ ವೆಚ್ಚದ ರೀಚಾರ್ಜ್ ಯೋಜನೆಗಳೊಂದಿಗೆ.ಆಗಸ್ಟ್ 13 ರಂದು ಈ ಸ್ಕ್ರೀನ್‌ಶಾಟ್ ಅನ್ನು ಶೇರ್ ಮಾಡಲಾಗಿದೆ.
4G ರೋಲ್‌ಔಟ್ ಆದ 6 ರಿಂದ 8 ತಿಂಗಳೊಳಗೆ 5G ಸೇವೆಯನ್ನು ಪ್ರಾರಂಭಿಸುವ ಯೋಜನೆ ಸರ್ಕಾರಕ್ಕಿದೆ.ಇತ್ತೀಚೆಗೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕೂಡಾ BSNL ಮೂಲಕ 5G ಕರೆ ಮಾಡಿದ್ದರು.ಇದಾದ ನಂತರವೇ 5G ಬಗ್ಗೆ ಚರ್ಚೆ ಆರಂಭವಾದದ್ದು.ಇದೀಗ ಪ್ರಧಾನಿ ಮೋದಿ 6ಜಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಹೀಗೆ ಮಾಡಿಕೊಳ್ಳಿ, ನಿಮ್ಮ ಹೆಸರಿನಲ್ಲಿ ಬೇರೆ ಯಾರು ಕೂಡಾ ಸಿಮ್ ಇಟ್ಟುಕೊಳ್ಳಲು ಸಾಧ್ಯವೇ ಇಲ್ಲ
6G ಮಿಷನ್ ಮೋಡ್‌ನಲ್ಲಿದೆ ಎಂದ ಪ್ರಧಾನಿ :
ಸ್ವಾತಂತ್ರ್ಯ ದಿನದಂದು, ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತದ ಪ್ರಗತಿಯನ್ನು ಅವ ಆರು ಈ ವೇಳೆ ಎತ್ತಿ ತೋರಿಸಿದರು. ದೇಶವು 5G ಅನ್ನು ವೇಗವಾಗಿ ಪ್ರಾರಂಭಿಸಿದೆ. ಈಗ 6G ತಂತ್ರಜ್ಞಾನ ಮಿಷನ್ ಮೋಡ್‌ನಲ್ಲಿ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ