ಫ್ರೀಡಂ ಪ್ಲಾನ್ ಮೂಲಕ ಅಗ್ಗದ ರೀಚಾರ್ಜ್ ಪ್ಲಾನ್ ಪರಿಚಯಿಸಿದ ಜಿಯೋ !ಗ್ರಾಹಕರು ಫುಲ್ ಖುಷ್

Jio Freedom Plan : ಜಿಯೋ ತನ್ನ ಹೊಸ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಇದು ಸಂಪೂರ್ಣ ೩೦ ದಿನಗಳ ವ್ಯಾಲಿಡಿಟಿ ಹೊಂದಿದೆ.   

Written by - Ranjitha R K | Last Updated : Aug 15, 2024, 01:08 PM IST
  • ರಿಲಯನ್ಸ್ ಜಿಯೋ ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ
  • ಇದು 48 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ
  • ಇತ್ತೀಚೆಗೆ ತನ್ನ ಯೋಜನೆಗಳಲ್ಲಿ ಬದಲಾವಣೆಗಳನ್ನು ಮಾಡಿದೆ.
ಫ್ರೀಡಂ ಪ್ಲಾನ್ ಮೂಲಕ ಅಗ್ಗದ ರೀಚಾರ್ಜ್ ಪ್ಲಾನ್ ಪರಿಚಯಿಸಿದ ಜಿಯೋ !ಗ್ರಾಹಕರು ಫುಲ್ ಖುಷ್  title=

Jio Freedom Plan : ರಿಲಯನ್ಸ್ ಜಿಯೋ ದೇಶದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿದ್ದು,ಇದು 48 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಕಂಪನಿಯು ಇತ್ತೀಚೆಗೆ ತನ್ನ ಯೋಜನೆಗಳಲ್ಲಿ ಬದಲಾವಣೆಗಳನ್ನು ಮಾಡಿದೆ.  ಇದರಲ್ಲಿ ಅನೇಕ ಯೋಜನೆಗಳನ್ನು ತೆಗೆದುಹಾಕಲಾಗಿದೆ.ಹೆಚ್ಚಿನ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಲಾಗಿದೆ.ಆದರೆ,ಜಿಯೋ ತನ್ನ ಗ್ರಾಹಕರಿಗೆ ಇನ್ನೂ ಹಲವು ಉತ್ತಮ ಆಫರ್ ಗಳನ್ನು ನೀಡುತ್ತಿದೆ.ನಿಮ್ಮ ಬಳಿ ಜಿಯೋ ಸಿಮ್ ಇದ್ದು ಹೊಂದಿದ್ದರೆ ಅಗ್ಗದ ಯೋಜನೆಯನ್ನು ಹುಡುಕುತ್ತಿದ್ದರೆ,ಕಂಪನಿಯು ಹೊಸ ಯೋಜನೆಯನ್ನು ಪ್ರಾರಂಭಿಸಿದೆ.ಜಿಯೋ ಫ್ರೀಡಂ ಯೋಜನೆಯಲ್ಲಿ,ಉಚಿತ ಕರೆ ಮತ್ತು ಡೇಟಾದಂತಹ ಸೌಲಭ್ಯಗಳು ಸಿಗುತ್ತಿವೆ. 

ಜಿಯೋ ಫ್ರೀಡಂ ಯೋಜನೆ :
ಜಿಯೋ ಫ್ರೀಡಂ ಪ್ಲಾನ್‌ನ ಬೆಲೆ 355 ರೂ. ಇದರ ವ್ಯಾಲಿಡಿಟಿ ಕೂಡಾ  30 ದಿನ.  ಇದು ಇತರ ಜಿಯೋ ಯೋಜನೆಗಳಿಗಿಂತ ಭಿನ್ನವಾಗಿದೆ.ಇದರಲ್ಲಿ ಜಿಯೋ ಗ್ರಾಹಕರು 30 ದಿನಗಳವರೆಗೆ ಉಚಿತ ಕರೆಯ ಲಾಭವನ್ನು ಪಡೆಯುತ್ತಾರೆ.ಇದಲ್ಲದೇ ಈ ಪ್ಲಾನ್ ನಲ್ಲಿ ಒಟ್ಟು 25GB ಡೇಟಾ ದೊರೆಯಲಿದೆ.ಇದರ ವಿಶೇಷವೆಂದರೆ ಇದರಲ್ಲಿ ಯಾವುದೇ ದೈನಂದಿನ ಡೇಟಾ ಮಿತಿ ಇರುವುದಿಲ್ಲ. 25GB ಡೇಟಾವನ್ನು ಒಂದೇ ದಿನದಲ್ಲಿ ಬೇಕಾದರೂ ಬಳಸಬಹುದು. ಅಥವಾ 30 ದಿನಗಲವರೆಗೆ ಬೇಕಾದರೂ ಬಳಸಬಹುದು.ಈ ಯೋಜನೆಯಲ್ಲಿ ಪ್ರತಿದಿನ 100 ಉಚಿತ SMS ಸೇವೆ ಕೂಡಾ ಲಭ್ಯವಿದೆ. 

ಇದನ್ನೂ ಓದಿ : ಹೀಗೆ ಮಾಡಿಕೊಳ್ಳಿ, ನಿಮ್ಮ ಹೆಸರಿನಲ್ಲಿ ಬೇರೆ ಯಾರು ಕೂಡಾ ಸಿಮ್ ಇಟ್ಟುಕೊಳ್ಳಲು ಸಾಧ್ಯವೇ ಇಲ್ಲ

ಜಿಯೋ 349 ರೂ.ಯೋಜನೆ :
ಜಿಯೋ ತನ್ನ ಹೀರೋ ಪ್ಲಾನ್‌ಗಳಲ್ಲಿ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ.  ಇದರ ಬೆಲೆ 349 ರೂ.ಕಡಿಮೆ ಸಮಯದಲ್ಲಿ ಹೆಚ್ಚು ಡೇಟಾ ಬೇಕು ಎನ್ನುವವರಿಗೆ ಇದು ಉತ್ತಮ ಯೋಜನೆ. ಈ ಪ್ಲಾನ್ 28 ದಿನಗಳವರೆಗೆ ಮಾನ್ಯವಾಗಿರುತ್ತದೆ.    ಇದರಲ್ಲಿ ಯಾವುದೇ ಮಿತಿಯಿಲ್ಲದೆ ಯಾವುದೇ ನೆಟ್‌ವರ್ಕ್‌ಗೆ ಕರೆಗಳನ್ನು ಮಾಡಬಹುದು.

ಈ ಯೋಜನೆಯಲ್ಲಿ ಒಟ್ಟು 56GB ಡೇಟಾ ಲಭ್ಯವಿರುತ್ತದೆ.ಅಂದರೆ ಪ್ರತಿದಿನ 2GB ಡೇಟಾ ಲಭ್ಯವಿರುತ್ತದೆ.ವಿಶೇಷವೆಂದರೆ ಈ ಯೋಜನೆಯಲ್ಲಿ 5G ಡೇಟಾ ಕೂಡಾ ಲಭ್ಯವಿರುತ್ತದೆ. ನಿಮ್ಮ ಏರಿಯಾದಲ್ಲಿ 5G ಇದ್ದರೆ ಅದರ ಲಾಭವನ್ನು ಕೂಡಾ ಪಡೆಯಬಹುದು.ಇದಲ್ಲದೆ, ಜಿಯೋ ಸಿನಿಮಾದ ಉಚಿತ ಚಂದಾದಾರಿಕೆ, ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್‌ನ ಉಚಿತ ಬಳಕೆ ಕೂಡಾ ಈ ಯೋಜನೆಯಲ್ಲಿ ಸೇರಿದೆ. 

ಇದನ್ನೂ ಓದಿ : ಈ ದೇವಸ್ಥಾನದಲ್ಲಿ ದೇವರ ಮೂರ್ತಿಯೂ ಇಲ್ಲ, ಪೂಜೆ ಪುನಸ್ಕಾರವೂ ಇಲ್ಲ : ಆದರೂ ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ ಈ ಮಂದಿರಕ್ಕೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News