Jio, Airtel, Viಗೆ ಟಕ್ಕರ್: ಕೈಗೆಟುಕುವ ದರದಲ್ಲಿ ಬಿಎಸ್‌ಎನ್‌ಎಲ್ ರಿಚಾರ್ಜ್ ಯೋಜನೆಗಳು
Recharge Plans: ಒಂದೆಡೆ ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ಯೋಜನೆಗಳ ಬೆಲೆಗಳಲ್ಲಿ ಏರಿಕೆ ಘೋಷಿಸಿವೆ. ಮತ್ತೊಂದೆಡೆ ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ಅತ್ಯುತ್ತಮ ರಿಚಾರ್ಜ್ ಯೋಜನೆಗಳನ್ನು ಮುಂದುವರೆಸಿದೆ.
BSNL Recharge Plans: ಭಾರತದ ಪ್ರಸಿದ್ದ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್, ಜಿಯೋ, ವಿಐಗೆ ಟಕ್ಕರ್ ನೀಡಿರುವ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗಾಗಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಯೋಜನೆಗಳನ್ನು ನೀಡುವುದನ್ನು ಮುಂದುವರೆಸಿದೆ.
ಹೌದು, ಜುಲೈ 03ರಿಂದ ಜಾರಿಗೆ ಬರುವಂತೆ ಏರ್‌ಟೆಲ್ (Airtel), ರಿಲಯನ್ಸ್ ಜಿಯೋ (Reliance Jio) ಹಾಗೂ ನಾಳೆಯಿಂದ (ಜುಲೈ 04) ಜಾರಿಯಾಗುವಂತೆ ವೋಡಾಫೋನ್-ಐಡಿಯಾ (Vodafone-Idea) ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕ ರೀಚಾರ್ಜ್ ಯೋಜನೆಗಳ ಬೆಲೆಯನ್ನು ಪರಿಷ್ಕರಿಸಿವೆ. ಏತನ್ಮಧ್ಯೆ, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ತನ್ನ ಗ್ರಾಹಕರ ಹಿತದೃಷ್ಟಿಯಿಂದ ಅಗ್ಗದ ಬೆಲೆಯಲ್ಲಿ ರಿಚಾರ್ಜ್ ಯೋಜನೆಗಳನ್ನು ಮುಂದುವರೆಸಲು ನಿರ್ಧರಿಸಿದೆ.
ಬಿಎಸ್‌ಎನ್‌ಎಲ್ ಅಗ್ಗದ ರಿಚಾರ್ಜ್ ಯೋಜನೆಗಳು ಈ ಕೆಳಕಂದಂತಿವೆ:
ಬಿಎಸ್‌ಎನ್‌ಎಲ್ ಮಾಸಿಕ ಅಗ್ಗದ ರಿಚಾರ್ಜ್ ಯೋಜನೆ (BSNL Monthly Recharge Plan):-
ಬಿಎಸ್‌ಎನ್‌ಎಲ್ ಮಾಸಿಕ ಅಗ್ಗದ ರಿಚಾರ್ಜ್ ಯೋಜನೆಯು ಕೇವಲ 107ರೂ.ಗಳಿಗೆ ಲಭ್ಯವಿದೆ. 35ದಿನಗಳ ಮಾನ್ಯತೆಯೊಂದಿಗೆ ಲಭ್ಯವಿರುವ ಈ ಯೋಜನೆಯಲ್ಲಿ 200 ನಿಮಿಷಗಳ ಧ್ವನಿ ಕರೆ ಜೊತೆಗೆ 3ಜಿಬಿ ಡೇಲಾ ಸೌಲಭ್ಯ ದೊರೆಯಲಿದೆ.
ಇದನ್ನೂ ಓದಿ- Jio Airtel Plans: ಇಂದಿನಿಂದ ದುಬಾರಿಯಾಗಲಿದೆ ಜಿಯೋ, ಏರ್‌ಟೆಲ್ ಯೋಜನೆಗಳು
108ರೂ. ಗಳ ಯೋಜನೆ:
ಬಿಎಸ್‌ಎನ್‌ಎಲ್ (BSNL) ತನ್ನ ಬಳಕೆದಾರರಿಗಾಗಿ ಎಫ್‌ಆರ್‌ಸಿ- ಮೊದಲ ರೀಚಾರ್ಜ್ ಕೂಪನ್ ಎಂದು ಕರೆಯಲ್ಪಡುವ 108 ರೂ.ಗಳ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಗ್ರಾಹಕರು 28 ದಿನಗಳವರೆಗೆ ಅನಿಯಮಿತ ಧ್ವನಿ ಕರೆ ಜೊತೆಗೆ ನಿತ್ಯ 1ಜಿಬಿ 4ಜಿ ಡೇಟಾ ಸೌಲಭ್ಯವನ್ನು ಪಡೆಯಬಹುದಾಗಿದೆ.
ಬಿಎಸ್‌ಎನ್‌ಎಲ್ ಎರಡು ತಿಂಗಳ ರಿಚಾರ್ಜ್ ಯೋಜನೆ:
ಬಿಎಸ್‌ಎನ್‌ಎಲ್ ನಿಂದ ಗ್ರಾಹಕರಿಗಾಗಿ 197ರೂ,.ಗಳ ಯೋಜನೆ ಲಭ್ಯವಿದೆ. 70 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಗ್ರಾಹಕರು ಮೊದಲ 18 ದಿನಗಳವರೆಗೆ ದಿನಕ್ಕೆ 100 ಉಚಿತ ಎಸ್ಎಂಎಸ್ ಅನ್ನು ಕೂಡ ಆನಂದಿಸಬಹುದು. ಆದಾಗ್ಯೂ, ನೀವು 70 ದಿನಗಳವರೆಗೆ ಅನ್ಲಿಮಿಟೆಡ್ ಕಾಲ್ ಸೌಲಭ್ಯವನ್ನು ಪಡೆಯಲು 199 ರೂ. ರಿಚಾರ್ಜ್ ಯೋಜನೆ ಪಡೆಯಬೇಕಾಗುತ್ತದೆ.
ಇದನ್ನೂ ಓದಿ- Airtel, Jio ಬಳಿಕ VI ಗ್ರಾಹಕರಿಕ್ ಶಾಕ್, ಮೊಬೈಲ್ ಟ್ಯಾರಿಫ್ ಪ್ಲಾನ್‌ಗಳ ಬೆಲೆ ಹೆಚ್ಚಳ
ಬಿಎಸ್‌ಎನ್‌ಎಲ್ 397 ರೂ.ಗಳ ಯೋಜನೆ:
ಬಿಎಸ್‌ಎನ್‌ಎಲ್ 397 ರೂ.ಗಳ ರಿಚಾರ್ಜ್ ಯೋಜನೆಯು 150 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. ಜೊತೆಗೆ ಮೊದಲ 30 ದಿನಗಳ ಕಾಲ ಪ್ರತಿದಿನ 2ಜಿಬಿ ಡೇಟಾ ಕೂಡ ಲಭ್ಯವಾಗಲಿದೆ.
ಬಿಎಸ್‌ಎನ್‌ಎಲ್ ವಾರ್ಷಿಕ ಯೋಜನೆ:
ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ 1999 ರೂ.ಗಳಲ್ಲಿ ವಾರ್ಷಿಕ ಯೋಜನೆಯನ್ನು ನೀಡುತ್ತದೆ. 365ದಿನಗಳ ಮಾನ್ಯತೆ ಹೊಂದಿರುವ ಈ ಯೋಜನೆಯಲ್ಲಿ ಗ್ರಾಹಕರು ವರ್ಷಪೂರ್ತಿ ಅನ್ಲಿಮಿಟೆಡ್ ಕರೆ ಜೊತೆಗೆ 600ಜಿಬಿ ಡೇಟಾ, ಬಿಎಸ್‌ಎನ್‌ಎಲ್ ಟ್ಯೂನ್ಸ್ ಹಾಗೂ ಥರ್ಡ್ ಪಾರ್ಟಿ ಸೇವೆಗಳಿಗೆ ಚಂದಾದಾರಿಕೆಯನ್ನು ಕೂಡ ಪಡೆಯಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.