ನವದೆಹಲಿ : ಬಿಎಸ್‌ಎನ್‌ಎಲ್ (BSNL) ಬಳಕೆದಾರರಿಗೆ ಅಗ್ಗದ ಮತ್ತು ಉತ್ತಮ ರೀಚಾರ್ಜ್ ಪ್ಲಾನ್ (Recharge plan) ಅನ್ನು ತಂದಿದೆ. ಇದು  70 ರೂಪಾಯಿಗಿಂತಲೂ ಕಡಿಮೆಯ ರೀಚಾರ್ಜ್ ಪ್ಲಾನ್. ಇದರಲ್ಲಿ ದೈನಂದಿನ ಡಾಟಾ ಜೊತೆಗೆ ಅನೇಕ ಪ್ರಯೋಜನಗಳು ಸಿಗಲಿವೆ. 


COMMERCIAL BREAK
SCROLL TO CONTINUE READING

68 ರೂ ರೀಚಾರ್ಜ್ :
ಬಿಎಸ್‌ಎನ್‌ಎಲ್‌ನ (BSNL) ಈ ರೀಚಾರ್ಜ್ ಪ್ಲಾನ್  ಬೆಲೆ ಕೇವಲ 68 ರೂಪಾಯಿ. ಇದರಲ್ಲಿ ದೈನಂದಿನ ಡೇಟಾ (Data) ಪ್ರಯೋಜನ ಸಿಗಲಿದೆ. ಹೌದು, ಈ ಅಗ್ಗದ ರೀಚಾರ್ಜ್ ನಲ್ಲಿ   (Recharge) ದೈನಂದಿನ ಬಳಕೆಗಾಗಿ 1.5 ಜಿಬಿ ಡೇಟಾ  ಸಿಗಲಿದೆ. ಅದೇ ಸಮಯದಲ್ಲಿ, ಈ ಯೋಜನೆಯ ವ್ಯಾಲಿಡಿಟಿ, 14 ದಿನಗಳವರೆಗೆ ಇರುತ್ತದೆ.  ಅಂದರೆ  68 ರೂಪಾಯಿ ರೀಚಾರ್ಜ್ ನಲ್ಲಿ 14 ದಿನಗಳವರೆಗೆ 21 ಜಿಬಿ ಡೇಟಾ ಸಿಗಲಿದೆ. 


ಇದನ್ನೂ ಓದಿ : Oppo Phones: ಭಾರತದಲ್ಲಿ 2,500 ರೂ. ಅಗ್ಗವಾದ Oppo ಫೋನ್, ಇಲ್ಲಿದೆ ಬೆಲೆ, ವೈಶಿಷ್ಟ್ಯ


ಬಿಎಸ್‌ಎನ್‌ಎಲ್‌ ಅಲ್ಲದೆ, ಬೇರೆ ಯಾವುದೇ ಟೆಲಿಕಾಂ ಕಂಪನಿಯು ಈ ರೀತಿಯ ರೀಚಾರ್ಜ್ ಪ್ಲಾನ್ ಒದಗಿಸಿಲ್ಲ. Vi ಪ್ರತಿದಿನ 1 ಜಿಬಿ ಡೇಟಾವನ್ನು 148 ರೂ.ಗಳ ಪ್ಯಾಕ್‌ನಲ್ಲಿ ಒದಗಿಸುತ್ತದೆ, ಇದರ ವ್ಯಾಲಿಡಿಟಿ  18 ದಿನಗಳವರೆಗೆ ಇರಲಿದೆ.  


ಜಿಯೋ ಯೋಜನೆ : 
ಜಿಯೋನ (Jio) 28 ದಿನಗಳ ಪ್ರಿಪೇಯ್ಡ್ ಯೋಜನೆಯಲ್ಲಿ ಪ್ರತಿದಿನ 2 ಜಿಬಿ ಡೇಟಾ ಸಿಗುತ್ತದೆ. ಅಲ್ಲದೆ, ಬಳಕೆದಾರರು ಯಾವುದೇ ನೆಟ್‌ವರ್ಕ್‌ನಲ್ಲಿ (Network) ಅನಿಯಮಿತ ಕರೆ ಮಾಡುವ ಅವಕಾಶವಿರುತ್ತದೆ. ಇದಲ್ಲದೆ, ಬಳಕೆದಾರರು, ಜಿಯೋ ನ್ಯೂಸ್ ಮತ್ತು ಜಿಯೋ ಸಿನೆಮಾದಂತಹ ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಪಡೆಯುತ್ತಾರೆ. 


ಇದನ್ನೂ ಓದಿ : Whatsappನಲ್ಲಿದೆ ಈ ಅದ್ಭುತ ಫೀಚರ್ಸ್ ; App ಬಳಸುವುದು ಇನ್ನಷ್ಟು ಸುಲಭ


ಏರ್ಟೆಲ್ ಯೋಜನೆ :
ಏರ್‌ಟೆಲ್‌ನ (Airtel) ಈ ಪ್ರಿಪೇಯ್ಡ್ ಯೋಜನೆಯಲ್ಲಿ, ಪ್ರತಿದಿನ 100 ಎಸ್‌ಎಂಎಸ್‌ನೊಂದಿಗೆ (SMS) 2 ಜಿಬಿ ಡೇಟಾ ಲಭ್ಯವಿರುತ್ತದೆ. ಅಲ್ಲದೆ, ಬಳಕೆದಾರರು ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮಾಡಲು ಸಾಧ್ಯವಾಗುತ್ತದೆ. ಇದಲ್ಲದೆ ಬಳಕೆದಾರರು ಯೋಜನೆಯೊಂದಿಗೆ ಏರ್ಟೆಲ್ ಎಕ್ಸ್ಟ್ರೀಮ್ ಮತ್ತು ವಿಂಕ್ ಮ್ಯೂಸಿಕಿನ ಚಂದಾದಾರಿಕೆಯನ್ನು ಪಡೆಯುತ್ತಾರೆ. ಅದೇ ಸಮಯದಲ್ಲಿ, ಈ ಪ್ಯಾಕ್‌ನ ವ್ಯಾಲಿಡಿಟಿ 28 ದಿನಗಳು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.