Govt Giving Free Recharge ! ಸರ್ಕಾರ 10 ಕೋಟಿ ಗ್ರಾಹಕರಿಗೆ ಉಚಿತ ರಿಚಾರ್ಜ್ ನೀಡುತ್ತಿದೆ! ನಿಮಗೂ ಈ SMS ಬಂದಿದೆಯೇ?

Govt Giving Free Recharge ! ಟೆಲಿಕಾಂ ಕಂಪನಿಗಳ ಸಂಘಟನೆ ಸೆಲ್ಯೂಲಾರ ಆಪರೇಟರ್ಸ್ ಅಸೋಸಿಯೆಶನ್ ಆಫ್ ಇಂಡಿಯಾ (COAI) ಮೊಬೈಲ್ ಫೋನ್ ಗ್ರಾಹಕರಿಗೆ ಸುಳ್ಳು ಭರವಸೆಗಳನ್ನು ನೀಡುವ ಸಂದೇಶಗಳಿಗೆ ಒಳಗಾಗದಂತೆ ಎಚ್ಚರಿಕೆ ನೀಡಿದೆ.

Written by - Nitin Tabib | Last Updated : Apr 23, 2021, 01:09 PM IST
  • ಸರ್ಕಾರ ದೇಶದ 10 ಕೋಟಿ ಗ್ರಾಹಕರಿಗೆ ಉಚಿತ ರಿಚಾರ್ಚ್ ನೀಡುತ್ತಿದೆ.
  • ಈ ರೀತಿ ಹೇಳಿಕೊಳ್ಳುವ SMS ನಿಮಗೂ ಬಂದಿದೆಯೇ.
  • ಅಪ್ಪಿ-ತಪ್ಪಿಯೂ ಕೂಡ ಸಂದೇಶದಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ಕಿಸಬೇಡಿ.
Govt Giving Free Recharge ! ಸರ್ಕಾರ 10 ಕೋಟಿ ಗ್ರಾಹಕರಿಗೆ ಉಚಿತ ರಿಚಾರ್ಜ್ ನೀಡುತ್ತಿದೆ! ನಿಮಗೂ ಈ SMS ಬಂದಿದೆಯೇ? title=
Govt Giving Free Recharge (File Photo)

ನವದೆಹಲಿ: Govt Giving Free Recharge ! ಟೆಲಿಕಾಂ ಕಂಪನಿಗಳ ಸಂಘಟನೆ ಸೆಲ್ಯೂಲಾರ ಆಪರೇಟರ್ಸ್ ಅಸೋಸಿಯೆಶನ್ ಆಫ್ ಇಂಡಿಯಾ (COAI) ಮೊಬೈಲ್ ಫೋನ್ ಗ್ರಾಹಕರಿಗೆ ಸುಳ್ಳು ಭರವಸೆಗಳನ್ನು ನೀಡುವ ಸಂದೇಶಗಳಿಗೆ ಒಳಗಾಗದಂತೆ ಎಚ್ಚರಿಕೆ ನೀಡಿದೆ. ಇಂತಹ ಕೆಲ ಸಂದೇಶಗಳ ಮೂಲಕ ಜನರ ದಾರಿತಪ್ಪಿಸುವ ಯತ್ನಗಳು ನಡೆದಿವೆ ಎಂದು ಸಂಘಟನೆ ಹೇಳಿದೆ. ಇಂತಹುದೇ ಒಂದು ಸಂದೇಶದಲ್ಲಿ ಸರ್ಕಾರ ಆನ್ಲೈನ್ ಶಿಕ್ಷಣಕ್ಕಾಗಿ 10 ಕೋಟಿ ಗ್ರಾಹಕರಿಗೆ ಉಚಿತ ರಿಚಾರ್ಜ್ ವ್ಯವಸ್ಥೆ ಮಾಡಿದೆ ಎನ್ನಲಾಗುತ್ತಿದೆ. 

ಇದನ್ನೂ ಓದಿ-ಸಿಂಪಲ್ ಇಷ್ಟು ಮಾಡಿ.. ಮೂರನೇ ವ್ಯಕ್ತಿಗೆ ನಿಮ್ಮ ವಾಟ್ಸಾಪ್ ಚ್ಯಾಟ್ ಓದಲು ಸಾಧ್ಯವೇ ಆಗುವುದಿಲ್ಲ..!

ಈ ರೀತಿಯ ಕಿರು ಸಂದೇಶದ ಲಿಂಕ್ ಮೇಲೆ ಕ್ಲಿಕ್ಕಿಸುವುದರಿಂದ ನಿಮ್ಮ ಮೊಬೈಲ್ ಫೋನ್ ನಲ್ಲಿರುವ ನಿಮ್ಮ ವೈಯಕ್ತಿಕ ಮಾಹಿತಿ ಸೋರಿಕೆಯಾಗಲಿದೆ ಮತ್ತು ನೀವು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು COAI ಎಚ್ಚರಿಕೆ ನೀಡಿದೆ. ಸಿಒಎಐ ಹೊರಡಿಸಿದ ಸಾರ್ವಜನಿಕ ಹೇಳಿಕೆಯಲ್ಲಿ ಆನ್‌ಲೈನ್ ಶಿಕ್ಷಣಕ್ಕಾಗಿ 10 ಕೋಟಿ ಗ್ರಾಹಕರಿಗೆ ಉಚಿತ ರೀಚಾರ್ಜ್ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ಈ ನಕಲಿ ಸಂದೇಶಗಳ ಮೂಲಕ ಹೇಳಲಾಗುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ- 399 ರೂಪಾಯಿಗಳಿಗೆ ಬೆಸ್ಟ್ ಪ್ರಿಪೆಯ್ಡ್ ಪ್ಲಾನ್..! ಇಲ್ಲಿದೆ ಡಿಟೆಲ್ಸ್

ಈ ಟೆಲಿಕಾಂ ಉದ್ಯಮ ಸಂಘಟನೆಯ ಸದಸ್ಯರಲ್ಲಿ ರಿಲಯನ್ಸ್ ಜಿಯೋ (Jio), ಭಾರ್ತಿ ಏರ್‌ಟೆಲ್ (Airtel) ಮತ್ತು ವೊಡಾಫೋನ್ ಐಡಿಯಾ (Vodafone Idea) ಕಂಪನಿಗಳ ಸದಸ್ಯರು ಕೂಡ ಶಾಮೀಲಾಗಿದ್ದಾರೆ. ಇಂತಹ ನಕಲಿ ಮಾಹಿತಿಯಿಂದ ಉಚಿತ ಕೊಡುಗೆಯ ಲಾಭ ಪಡೆಯಲು ಜನರು ಲಿಂಕ್ ಅನ್ನು ಕ್ಲಿಕ್ ಮಾಡುವ ಸಾಧ್ಯತೆ ಇದೆ ಎಂದು ಸಿಒಎಐ ಎಚ್ಚರಿಸಿದೆ. ಇಂತಹ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಎಂದು ಸಿಒಎಐ ಗ್ರಾಹಕರಿಗೆ ಎಚ್ಚರಿಕೆಯ ಸಲಹೆ ನೀಡಿದೆ.

ಇದನ್ನೂ ಓದಿ- Cheapest Recharge Plan: ಕೇವಲ ರೂ.129ಕ್ಕೆ 24ದಿನಗಳ ಉಚಿತ ಕಾಲಿಂಗ್, ಡೇಟಾ, Prime Video ನೋಡುವ ಅವಕಾಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News