ದೈನಂದಿನ ವೆಚ್ಚ 3 ರೂ.ಗಿಂತ ಕಡಿಮೆ ಬೆಲೆಯಲ್ಲಿ 300 ದಿನಗಳ ವ್ಯಾಲಿಡಿಟಿ ಪ್ಲಾನ್ ಪರಿಚಯಿಸಿದ ಬಿಎಸ್‌ಎನ್‌ಎಲ್
BSNL: ಬಿಎಸ್‌ಎನ್‌ಎಲ್ ಮತ್ತೊಮ್ಮೆ ತನ್ನ ಗ್ರಾಹಕರಿಗಾಗಿ ಕೈಗೆಟುಕುವ ಬೆಲೆಯ ರಿಚಾರ್ಜ್ ಪ್ಲಾನ್ ಒಂದನ್ನು ಪರಿಚಯಿಸಿದೆ.
BSNL Best Recharge Plan: ಬಿಎಸ್‌ಎನ್‌ಎಲ್ ಅಗ್ಗದ ಬೆಲೆಯಲ್ಲಿ ಭರ್ಜರಿ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ. ದೈನಂದಿನ ಕೇವಲ 3 ರೂಪಾಯಿಗಿಂತ ಕಡಿಮೆ ವೆಚ್ಚದಲ್ಲಿ ಬಿಡುಗಡೆಯಾಗಿರುವ ಈ ಯೋಜನೆ ಯಾವುದು, ಇದರ ಪ್ರಯೋಜನಗಳೇನು ಎಂದು ತಿಳಿಯೋಣ...
ದೈನಂದಿನ ವೆಚ್ಚ 3 ರೂ.ಗಿಂತಲೂ ಕಡಿಮೆ:
ಹೌದು, ಬಿಎಸ್‌ಎನ್‌ಎಲ್ ದೈನಂದಿನ 3 ರೂ.ಗಿಂತಲೂ ಕಡಿಮೆ ವೆಚ್ಚದಲ್ಲಿ ಬರೋಬ್ಬರಿ 300 ದಿನಗಳ ವ್ಯಾಲಿಡಿಟಿ ಹೊಂದಿರುವ ದೀರ್ಘಾವಧಿಯ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ. ಇದರ ಬೆಲೆ ಕೇವಲ 797ರೂ. ಗಳು ಮಾತ್ರ.
ಇದನ್ನೂ ಓದಿ- ಶೀಘ್ರವೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ರತನ್ ಟಾಟಾ ಅವರ ಕನಸಿನ ಕಾರು; ಲುಕ್ ಹೊಸದು, ರೆಟ್ ಹಳೆಯದಂತೆ!
ಬಿಎಸ್‌ಎನ್‌ಎಲ್ ಅಗ್ಗದ ರಿಚಾರ್ಜ್ ಯೋಜನೆಯ ಪ್ರಯೋಜನಗಳು:
ಬಿಎಸ್‌ಎನ್‌ಎಲ್ ಪರಿಚಯಿಸಿರುವ ಈ ಕೈಗೆಟುಕುವ ಬೆಲೆಯ ರಿಚಾರ್ಜ್ ಯೋಜನೆಯ ಪ್ರಯೋಜನಗಳೆಂದರೆ ಇದರಲ್ಲಿ ಮೊದಲ ಎರಡು ತಿಂಗಳವರೆಗೆ ದೇಶಾದ್ಯಂತ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು ರಾಷ್ಟ್ರೀಯ ರೋಮಿಂಗ್‌ನ ಪ್ರಯೋಜನ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
ಇದನ್ನೂ ಓದಿ- ಶೀಘ್ರವೇ ಮಾರುಕಟ್ಟೆಗೆ ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯ ಮೊಬೈಲ್ ಪೈ ಲಗ್ಗೆ: ಮೊಬೈಲ್ ಮಾರುಕಟ್ಟೆಯಲ್ಲಿ ಆಗುತ್ತಾ ಕಮಾಲ್?
ಸಿಗುತ್ತೆ ಈ ಎಲ್ಲಾ ಲಾಭ:
ಬಿಎಸ್‌ಎನ್‌ಎಲ್ ನ ಈ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ರಿಚಾರ್ಜ್ ಮಾಡುವ ಬಳಕೆದಾರರು ಮೊದಲ ಎರಡು ತಿಂಗಳುಗಳ ಕಾಲ ನಿತ್ಯ 100 ಎಸ್‌ಎಮ್‌ಎಸ್ ಮತ್ತು ದೈನಂದಿನ 2ಜಿಬಿ ಹೈ ಸ್ಪೀಡ್ ಡೇಟಾ ಪ್ರಯೋಜನವನ್ನು ಪಡೆಯುತ್ತಾರೆ. ಬಳಿಕ, 40kbps ವೇಗದಲ್ಲಿ ಅನ್ಲಿಮಿಟೆಡ್ ಡೇಟಾ ಆನಂದಿಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.