BSNL ಭರ್ಜರಿ ಆಫರ್ , ರೀಚಾರ್ಜ್ ಮೇಲೆ ಸಿಗುತ್ತಿದೆ 90% ಡಿಸ್ಕೌಂಟ್
ಬಳಕೆದಾರರನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಆಫರ್ ಅನ್ನು ಪರಿಚಯಿಸಲಾಗಿದೆ. ನೀವು ಈ ಆಫರ್ ಅನ್ನು ಪಡೆಯಲು ಬಯಸುವುದಾದರೆ, BSNL BookMyFiber ಪೋರ್ಟಲ್ ಮೂಲಕ ಅಥವಾ BSNL ಗ್ರಾಹಕ ಸೇವಾ ಕೇಂದ್ರಗಳ ಮೂಲಕ ಬುಕ್ ಮಾಡಬಹುದು.
ನವದೆಹಲಿ : BSNL ದೀಪಾವಳಿಗೆ ಭರ್ಜರಿ ಕೊಡುಗೆಯನ್ನು ಘೋಷಿಸಿದೆ. ಭಾರತ್ ಫೈಬರ್ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ BSNL ದೀಪಾವಳಿ ಆಫರ್ ಪ್ರಕಟಿಸಿದೆ. ಮೂಲಗಳ ಪ್ರಕಾರ, BSNL ವಿಶೇಷ ರಿಯಾಯಿತಿ ಯೋಜನೆಯನ್ನು ಘೋಷಿಸಿದೆ. ಹೊಸ ಬಳಕೆದಾರರು ಮಾಸಿಕ ದರದಲ್ಲಿ ಗರಿಷ್ಠ 90% ರಿಯಾಯಿತಿಯನ್ನು ಪಡೆಯಬಹುದು. ಈ ಯೋಜನೆಯು ಹೊಸ BSNL FTTH ಗ್ರಾಹಕರಿಗೆ ಅನ್ವಯಿಸುತ್ತದೆ. ಅವರ ಸಂಪರ್ಕಗಳು ಆಫರ್ ಅವಧಿಯಲ್ಲಿ ಸಕ್ರಿಯವಾಗಿರುತ್ತವೆ.
ಸಿಗಲಿದೆ 90% ರಿಯಾಯಿತಿ :
ಬಳಕೆದಾರರನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಆಫರ್ (BSNL Offer) ಅನ್ನು ಪರಿಚಯಿಸಲಾಗಿದೆ. ನೀವು ಈ ಆಫರ್ ಅನ್ನು ಪಡೆಯಲು ಬಯಸುವುದಾದರೆ, BSNL BookMyFiber ಪೋರ್ಟಲ್ ಮೂಲಕ ಅಥವಾ BSNL ಗ್ರಾಹಕ ಸೇವಾ ಕೇಂದ್ರಗಳ ಮೂಲಕ ಬುಕ್ ಮಾಡಬಹುದು. BSNL ದೀಪಾವಳಿ ವಿಶೇಷ ರಿಯಾಯಿತಿ ಯೋಜನೆಯು ನವೆಂಬರ್ 1 ರಿಂದ 90 ದಿನಗಳ ಅವಧಿಗೆ ಲಭ್ಯವಿದೆ. ಅಂದರೆ, ನವೆಂಬರ್ 1 ರಿಂದ ಜನವರಿ 29 ರವರೆಗೆ ಸಕ್ರಿಯವಾಗಿರುವ ಹೊಸ BSNL FTTH ಕನೆಕ್ಷನ್ಗಳು ಈ ಕೊಡುಗೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.
ಇದನ್ನೂ ಓದಿ : Flipkart Diwali Sale: ಕೇವಲ 500 ರೂ.ಗಳಲ್ಲಿ ಖರೀದಿಸಿ POCOನ ಅದ್ಭುತ 5G ಸ್ಮಾರ್ಟ್‌ಫೋನ್
ಗರಿಷ್ಠ 500 ರೂ.ಗಳ ರಿಯಾಯಿತಿಯನ್ನು ಪಡೆಯಬಹುದು :
ನವೆಂಬರ್‌ನಲ್ಲಿ ಎಲ್ಲಾ ಹೊಸ ಸಕ್ರಿಯ ಸಂಪರ್ಕಗಳಿಗೆ BSNL ಮಾಸಿಕ ದರದಲ್ಲಿ 90% ರಿಯಾಯಿತಿಯನ್ನು ನೀಡುತ್ತದೆ. FTTH ಪ್ಲಾನ್ ನಲ್ಲಿ ಮಾತ್ರ ಗ್ರಾಹಕರು ಗರಿಷ್ಠ 500 ರೂ.ಗಳ ರಿಯಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಅಂದರೆ, ಮೊದಲ ತಿಂಗಳು ರೀಚಾರ್ಜ್ (Recharge) ಮಾಡುವವರು 500 ರೂ.ವರೆಗೆ ರಿಯಾಯಿತಿ ಪಡೆಯುತ್ತಾರೆ.
BSNL FTTH ಅಂಡಮಾನ್ ಮತ್ತು ನಿಕೋಬಾರ್ ಸರ್ಕಲ್ ಹೊರತುಪಡಿಸಿ ಇತರ ಎಲ್ಲೆಡೆ ಲಭ್ಯವಿದೆ. ಇದು ಪ್ರತಿ ಸರ್ಕಲ್ ನಲ್ಲಿ 30mbps ನಿಂದ 300mbps ವರೆಗೆ ವೇಗವನ್ನು ನೀಡುತ್ತದೆ. ಅಲ್ಲದೆ, ಉಚಿತ ವಾಯ್ಸ್ ಕಾಲ್ (free voice call) ಪ್ರಯೋಜನ ಕೂಡಾ ಸಿಗಲಿದೆ.
ಇದನ್ನೂ ಓದಿ : ಅತ್ಯಂತ ಕಡಿಮೆ ಬೆಲೆಗೆ iPhone 12 Mini ಖರೀದಿಸಲು ಸುವರ್ಣ ಅವಕಾಶ, Flipkart ಸೇಲ್ ನಲ್ಲಿ ಸಿಗುತ್ತಿದೆ ಭಾರೀ ಡಿಸ್ಕೌಂಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ