ಅತ್ಯಂತ ಕಡಿಮೆ ಬೆಲೆಗೆ iPhone 12 Mini ಖರೀದಿಸಲು ಸುವರ್ಣ ಅವಕಾಶ, Flipkart ಸೇಲ್ ನಲ್ಲಿ ಸಿಗುತ್ತಿದೆ ಭಾರೀ ಡಿಸ್ಕೌಂಟ್

ನಿಮ್ಮ ಹಳೆಯ ಐಫೋನ್ ಅನ್ನು ಎಕ್ಸ್ಚೇಂಜ್  ಮಾಡಿಕೊಂಡರೆ, ಅದರಲ್ಲಿ ರಿಯಾಯಿತಿ ಪಡೆಯಬಹುದು. ಆದರೆ, ನಿಮ್ಮ ಫೋನ್‌ನ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾದರಿಯು ಇತ್ತೀಚಿನದ್ದಾಗಿದ್ದರೆ ಮಾತ್ರ ಗರಿಷ್ಠ ರಿಯಾಯಿತಿ ಲಭ್ಯವಿರುತ್ತದೆ. 

Written by - Ranjitha R K | Last Updated : Nov 2, 2021, 11:26 AM IST
  • Flipkart ಸೇಲ್ ನಲ್ಲಿ ಕಡಿಮೆ ಬೆಲೆಗೆ ಖರೀದಿಸಿ iPhone 12 Mini
  • 22 ಸಾವಿರ ರೂಪಾಯಿಗೆ ಖರೀದಿಸಿ iPhone 12 Mini
  • ಎರಡು ದಿನಗಳಲ್ಲಿ ಕೊನೆಯಾಗಲಿದೆ ಸೇಲ್
 ಅತ್ಯಂತ ಕಡಿಮೆ ಬೆಲೆಗೆ iPhone 12 Mini ಖರೀದಿಸಲು ಸುವರ್ಣ ಅವಕಾಶ,  Flipkart ಸೇಲ್ ನಲ್ಲಿ ಸಿಗುತ್ತಿದೆ ಭಾರೀ ಡಿಸ್ಕೌಂಟ್  title=
22 ಸಾವಿರ ರೂಪಾಯಿಗೆ ಖರೀದಿಸಿ iPhone 12 Mini (file photo)

ನವದೆಹಲಿ : ಹಬ್ಬದ ಸೀಸನ್ ಶುರುವಾಗಿದೆ. ಕಾಮರ್ಸ್ ದೈತ್ಯರಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಪ್ರೀಮಿಯಂ ಆಪಲ್ ಐಫೋನ್‌ಗಳು ಸೇರಿದಂತೆ ಸ್ಮಾರ್ಟ್‌ಫೋನ್‌ಗಳಲ್ಲಿ ಉತ್ತಮ ಆಫರ್ ನೀಡುತ್ತಿದೆ. ಈ ವಿಶೇಷ ಕೊಡುಗೆಗಳೊಂದಿಗೆ, ಸಮಂಜಸವಾದ ದರಗಳಲ್ಲಿ ಹೊಸ ಐಫೋನ್‌ಗಳನ್ನು ಖರೀದಿಸಬಹುದು. ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಡೇ ಸೇಲ್‌ನಲ್ಲಿ ಐಫೋನ್ 12 ಮತ್ತು ಐಫೋನ್ 12 ಮಿನಿ ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದು.  ಈ ಸೇಲ್ ಎರಡು ದಿನಗಳಲ್ಲಿ ಕೊನೆಗೊಳ್ಳುತ್ತದೆ. iPhone 12 ಅನ್ನು ಖರೀದಿಸಲು ಯೋಜಿಸುತ್ತಿದ್ದರೆ, ಇದು ಖರೀದಿಗೆ ಸುವರ್ಣಾವಕಾಶವಾಗಿದೆ. ಇಲ್ಲಿ 22 ಸಾವಿರ ರೂಪಾಯಿಗಳಿಗೆ iPhone 12 Mini ಅನ್ನು ಖರೀದಿಸಬಹುದು. 

iPhone 12 Mini ಕೊಡುಗೆಗಳು ಮತ್ತು ರಿಯಾಯಿತಿಗಳು :
ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್‌ನಲ್ಲಿ iPhone 12 Mini ಅನ್ನು  37,999 ರೂ.ಗೆ ಖರೀದಿಸಬಹುದು. ನೀವು ಬ್ಯಾಂಕ್ ಆಫರ್ ಗಳನ್ನೂ ತೆಗೆದುಕೊಂಡರೆ, 36,749 ರೂ.ಗೆ iPhone 12 Mini ನಿಮ್ಮ ಕೈ ಸೇರುತ್ತದೆ.  ಇದಾದ ನಂತರ ಎಕ್ಸ್ ಚೇಂಜ್ ಆಫರ್ ಕೂಡ ಇದ್ದು, 22 ಸಾವಿರ ರೂಪಾಯಿಗೆ ಅದನ್ನು ಖರೀದಿಸಬಹುದು. 

ಇದನ್ನೂ ಓದಿ : ಸೆಪ್ಟೆಂಬರ್ ತಿಂಗಳಲ್ಲಿ 22 ಲಕ್ಷದ 9 ಸಾವಿರ ಭಾರತೀಯ ಖಾತೆಗಳನ್ನು ನಿಷೇಧಿಸಿದ Whatsapp

iPhone 12 Mini ನಲ್ಲಿ ಎಕ್ಸ್ಚೇಂಜ್ ಆಫರ್ : 
iPhone 12 Mini ನಲ್ಲಿ 14,950 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ನಡೆಯುತ್ತಿದೆ. ನಿಮ್ಮ ಹಳೆಯ ಐಫೋನ್ ಅನ್ನು ಎಕ್ಸ್ಚೇಂಜ್  ಮಾಡಿಕೊಂಡರೆ, ಅದರಲ್ಲಿ ರಿಯಾಯಿತಿ ಪಡೆಯಬಹುದು. ಆದರೆ, ನಿಮ್ಮ ಫೋನ್‌ನ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾದರಿಯು ಇತ್ತೀಚಿನದ್ದಾಗಿದ್ದರೆ ಮಾತ್ರ ಗರಿಷ್ಠ ರಿಯಾಯಿತಿ ಲಭ್ಯವಿರುತ್ತದೆ. ಸಂಪೂರ್ಣ ಆಫರ್ ಸಿಕ್ಕಿದರೆ, iPhone 12 Mini ಅನ್ನು 21,799 ರೂ. ಕ್ಕೆ ಖರೀದಿಸಬಹುದು.

Apple Amazonನಲ್ಲಿ iPhone 12 Pro (128GB) ಪೆಸಿಫಿಕ್ ಬ್ಲೂ ರೂಪಾಂತರವು  95,900 ರೂ. ಗೆ ಲಭ್ಯವಿದೆ. iPhone 12 Pro ನ ಮೂಲ ಬೆಲೆ 1,19,900 ರೂ. ಕಂಪನಿಯು ಈ ಸ್ಮಾರ್ಟ್‌ಫೋನ್‌ಗೆ 24,000 ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ. iPhone 12 Pro (128GB) ರೂಪಾಂತರದಲ್ಲಿ 15,000 ರೂ.ವರೆಗೆ ರಿಯಾಯಿತಿಯನ್ನು ಪಡೆಯಬಹುದು.

ಇದನ್ನೂ ಓದಿ : Moons Long Lost Twin: ಸಿಕ್ಬಿಟ್ಟ ಚಂದಿರನ ಕಳೆದುಹೋದ ಅವಳಿ ಸಹೋದರ! ವಿಜ್ಞಾನಿಗಳು ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News