BSNL Affordable Prepaid Plans: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್- ಬಿ‌ಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು (BSNL New Prepaid Plans) ಬಿಡುಗಡೆ ಮಾಡಿದೆ. ಈ ಎರಡು ಹೊಸ ಯೋಜನೆಗಳು ₹ 58 ಮತ್ತು ₹ 59ಕ್ಕೆ ಲಭ್ಯವಾಗುತ್ತದೆ. ಯಾವುದೀ ಯೋಜನೆಗಳು, ಈ ಯೋಜನೆಗಳ ಪ್ರಯೋಜನಗಳೇನು ಎಂದು ತಿಳಿಯೋಣ... 


COMMERCIAL BREAK
SCROLL TO CONTINUE READING

ಅತ್ಯಂತ ಕಡಿಮೆ ಬೆಲೆಯಲ್ಲಿ ಬಿ‌ಎಸ್‌ಎನ್‌ಎಲ್ ಪ್ರಿಪೇಯ್ಡ್ ಪ್ಲಾನ್ಸ್ (BSNL Prepaid Plans at lowest price)! 
*  ₹58 ಯೋಜನೆಯು ಕೇವಲ ಡೇಟಾ ವೋಚರ್ (Data Voucher) 
* ₹59 ಯೋಜನೆಯು ಸಂಪೂರ್ಣ ಟೆಲಿಕಾಂ ಸೇವೆಯ ವಿಸ್ತೃತ ಮಾನ್ಯತೆಯೊಂದಿಗೆ  ಲಭ್ಯವಿರುವ ಪ್ರಿಪೇಯ್ಡ್ ಯೋಜನೆಯಾಗಿದೆ. 


ಇದನ್ನೂ ಓದಿ- ವಾಟ್ಸಾಪ್‌ನಲ್ಲಿ ಸದ್ಯದಲ್ಲೇ ಬರಲಿದೆ ಆಡಿಯೋ ಕಾಲ್ ಫೀಚರ್: ಏನಿದರ ವಿಶೇಷತೆ!


ಬಿ‌ಎಸ್‌ಎನ್‌ಎಲ್ ₹58 ಪ್ರಿಪೇಯ್ಡ್ ಯೋಜನೆಯ ಪ್ರಯೋಜನಗಳು: 
ಬಿ‌ಎಸ್‌ಎನ್‌ಎಲ್ (BSNL) ಪರಿಚಯಿಸಿರುವ ₹58 ಪ್ರಿಪೇಯ್ಡ್ ಯೋಜನೆಯು ಡೇಟಾ ಟಾಪ್-ಅಪ್ ಪ್ಲಾನ್ ಆಗಿದೆ. ಅರ್ಥಾತ್, ನಿಮ್ಮ ಮೊಬೈಲ್‌ನಲ್ಲಿ ಈಗಾಗಲೇ ಸಕ್ರಿಯವಾಗಿರುವ ಯೋಜನೆಯೊಂದಿಗೆ ನೀವು ಈ ಯೋಜನೆಯನ್ನು ಪಡೆಯಬಹುದು. 
₹58 ಡೇಟಾ ವೋಚರ್ ಯೋಜನೆಯು ಗ್ರಾಹಕರಿಗೆ 7 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಇದರಲ್ಲಿ, ಪ್ರತಿದಿನ 2ಜಿಬಿ ಡೇಟಾ ಲಭ್ಯವಿದೆ. ಅಷ್ಟೇ ಅಲ್ಲ, ನಿಗದಿತ ಡೇಟಾ ಖಾಲಿಯಾದ ಬಳಿಕ ಇಂಟರ್ನೆಟ್ ವೇಗವು 40 Kbps ಗೆ ಕಡಿಮೆಯಾಗುತ್ತದೆ.


ಇದನ್ನೂ ಓದಿ- BSNL 4G Services: ಬಿ‌ಎಸ್‌ಎನ್‌ಎಲ್ ಗ್ರಾಹಕರಿಗೆ ಗುಡ್ ನ್ಯೂಸ್, ಈ ದಿನದಿಂದ ಸಿಗಲಿದೆ 4G ಸೇವೆ


ಬಿ‌ಎಸ್‌ಎನ್‌ಎಲ್ ₹59 ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು: 
ಬಿ‌ಎಸ್‌ಎನ್‌ಎಲ್ ಪರಿಚಯಿಸಿರುವ ಎರಡನೇ ಪ್ರಿಪೇಯ್ಡ್ ಯೋಜನೆ (Prepaid Plan) ಎಂದರೆ ₹59 ಪ್ರಿಪೇಯ್ಡ್ ಯೋಜನೆ. ಇದು ಯೋಜನೆಯು ಸಂಪೂರ್ಣ ಟೆಲಿಕಾಂ ಸೇವೆಯ ವಿಸ್ತೃತ ಮಾನ್ಯತೆಯೊಂದಿಗೆ  ಲಭ್ಯವಿರುವ ಪ್ರಿಪೇಯ್ಡ್ ಯೋಜನೆಯಾಗಿದೆ. ಏಳು ದಿನಗಳ ವ್ಯಾಲಿಡಿಟಿಯೊಂದಿಗೆ ಲಭ್ಯವಿರುವ ಈ ಯೋಜನೆಯಲ್ಲಿ ಗ್ರಾಹಕರು ನಿತ್ಯ 1 ಜಿಬಿ ಡೇಟಾ ಮತ್ತು ಅನ್ಲಿಮಿಟೆಡ್ ಕರೆ ಸೌಲಭ್ಯವನ್ನು ಪಡೆಯಲಿದ್ದಾರೆ. 


ದುಬಾರಿ ರಿಚಾರ್ಜ್ ಯೋಜನೆಗಳನ್ನು ಖರೀದಿಸಲು ಸಾಧ್ಯವಾಗದ ಗ್ರಾಹಕರಿಗೆ ಈ ಪ್ರಿಪೇಯ್ಡ್ ಯೋಜನೆಗಳು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=O-hDphMYFMg
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.