WhatsApp New Feature: ವಾಟ್ಸಾಪ್ ಆಡಿಯೋ ಕರೆ ವಿಧಾನ ಶೀಘ್ರದಲ್ಲೇ ಬದಲಾಗಲಿದೆ. ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಸದ್ಯದಲ್ಲೇ ಹೊಸ ಆಡಿಯೋ ಕಾಲ್ ಬಾರ್ ಎಂಬ ವೈಶಿಷ್ಟ್ಯವನ್ನು ಪರಿಚಯಿಸಲು ಸಿದ್ದತೆ ನಡೆಸುತ್ತಿದೆ ಎಂದು ವರದಿಯಾಗಿದೆ.
ವಾಟ್ಸಾಪ್ ನವೀಕರಣಗಳ ಬಗ್ಗೆ ವರದಿ ಮಾಡುವ WABetaInfo ವರದಿಯ ಪ್ರಕಾರ, ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ವಾಟ್ಸಾಪ್ (Instant messaging app WhatsApp) ಶ್ಗೀಘ್ರದಲ್ಲೇ ಆಡಿಯೋ ಕಾಲ್ ಬಾರ್ ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಪ್ರಸ್ತುತ, ಕೆಲವು ಆಂಡ್ರಾಯ್ಡ್ ಬೀಟಾ ಪರೀಕ್ಷಕರು ಮಾತ್ರ ಈ ವೈಶಿಷ್ಟ್ಯವನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ- ಗೂಗಲ್ ನಿಂದ ಭಾರತದಲ್ಲಿ Google Wallet ಆರಂಭ, ಡೌನ್ಲೋಡ್ ಮಾಡುವುದು ಹೇಗೆ? ವೈಶಿಷ್ಟ್ಯ ಗಳೇನು? ಮಾಹಿತಿ ಇಲ್ಲಿದೆ
ವಾಟ್ಸಾಪ್ ಆಡಿಯೋ ಕಾಲ್ ಬಾರ್ ಪ್ರಯೋಜನ (WhatsApp Audio Call Bar Benefits):
ಲಭ್ಯವಿರುವ ಮಾಹಿತಿಯ ಪ್ರಕಾರ, ಈ ನೂತನ ವಾಟ್ಸಾಪ್ ಆಡಿಯೋ ಕಾಲ್ ಬಾರ್ ವೈಶಿಷ್ಟ್ಯದ (WhatsApp audio call bar feature) ಸಹಾಯದಿಂದ, ಬಳಕೆದಾರರು ಹಿನ್ನೆಲೆ ಕರೆಗಳನ್ನು ನಿರ್ವಹಿಸಬಹುದಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ- BSNL 4G Services: ಬಿಎಸ್ಎನ್ಎಲ್ ಗ್ರಾಹಕರಿಗೆ ಗುಡ್ ನ್ಯೂಸ್, ಈ ದಿನದಿಂದ ಸಿಗಲಿದೆ 4G ಸೇವೆ
ವರದಿಯ ಪ್ರಕಾರ, ವಾಟ್ಸಾಪ್ ಆಡಿಯೋ ಕಾಲ್ ಬಾರ್ (WhatsApp Audio Call Bar) ವೈಶಿಷ್ಟ್ಯದಲ್ಲಿ ಕರೆಯ ಸಮಯದಲ್ಲಿ ಮೇಲ್ಭಾಗದಲ್ಲಿ ಹೊಸ ಬಾರ್ ಕಾಣಿಸಿಕೊಳ್ಳುತ್ತದೆ. ಇದರ ಸಹಾಯದಿಂದ ಕರೆಗಳನ್ನು ನಿಯಂತ್ರಿಸಬಹುದಾಗಿದೆ. ಈ ಹೊಸ ಬಾರ್ನಿಂದ ನೇರವಾಗಿ ಕರೆಯನ್ನು ಮ್ಯೂಟ್ ಮಾಡಲು ಅಥವಾ ಕೊನೆಗೊಳಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ, ಮೊದಲಿನಂತೆ ಬಳಕೆದಾರರು ಕರೆಗೆ ಹಿಂದಿರುಗಳು ಹಸಿರು ಸ್ಥಿತಿ ಪಟ್ಟಿಯನ್ನು ಟ್ಯಾಪ್ ಮಾಡುವ ಅವಶ್ಯಕತೆ ಇರುವುದಿಲ್ಲ.
ಅಷ್ಟೇ ಅಲ್ಲದೆ, ವಾಟ್ಸಾಪ್ ಕರೆಯಲ್ಲಿರುವಾಗಲೂ ಸಹ ಬಳಕೆದಾರರು ಫೋನ್ನಲ್ಲಿ ಇತರೆ ಕಾರ್ಯಗಳನ್ನು ನಿರ್ವಹಿಸಬಹುದು. ಒಟ್ಟಾರೆಯಾಗಿ ವಾಟ್ಸಾಪ್ ಆಡಿಯೋ ಕಾಲ್ ಬಾರ್ ವೈಶಿಷ್ಟ್ಯವು ಬಳಕೆದಾರರಿಗೆ ಕರೆ ವೈಶಿಷ್ಟ್ಯವನ್ನು ಮತ್ತಷ್ಟು ಸುಲಭಗೊಳಿಸುತ್ತದೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.