ನವದೆಹಲಿ: ಬಿಎಸ್‌ಎನ್‌ಎಲ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಅಗ್ಗದ ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯಡಿಯಲ್ಲಿ ಬಳಕೆದಾರರು ಪೂರ್ಣ ಒಂದು ವರ್ಷದ ಮಾನ್ಯತೆಯನ್ನು ಪಡೆಯುತ್ತಾರೆ. ಕಂಪನಿಯು ಈ ಯೋಜನೆಯ ಬೆಲೆಯನ್ನು 365 ರೂ.ಗೆ ನಿಗದಿಪಡಿಸಿದೆ. ಅಂದರೆ ಒಂದು ದಿನದ ಖರ್ಚು ಕೇವಲ 1 ರೂ. ಮಾತ್ರ.


COMMERCIAL BREAK
SCROLL TO CONTINUE READING

ಗ್ರಾಹಕರಿಗೆ ಸಿಗಲಿದೆ ಈ ಪ್ರಯೋಜನ :
ಬಿಎಸ್‌ಎನ್‌ಎಲ್‌ನ (BSNL) ಈ ಯೋಜನೆಯಡಿ ಬಳಕೆದಾರರಿಗೆ ಅನಿಯಮಿತ ಧ್ವನಿ ಕರೆ ಮಾಡುವ ಸೌಲಭ್ಯದೊಂದಿಗೆ ಪ್ರತಿದಿನ 2 ಜಿಬಿ ಡೇಟಾವನ್ನು ನೀಡಲಾಗುವುದು. ಮೊದಲ 60 ದಿನಗಳಲ್ಲಿ 250 ನಿಮಿಷಗಳ ದೈನಂದಿನ ಕರೆ ಉಚಿತವಾಗಿರುತ್ತದೆ. ಪ್ರತಿದಿನ 250 ನಿಮಿಷಗಳು ಮುಗಿದ ನಂತರ ಮೂಲ ಯೋಜನೆಯ ಪ್ರಕಾರ ಸುಂಕವನ್ನು ವಿಧಿಸಲಾಗುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ 100 ಎಸ್‌ಎಂಎಸ್ ಸೌಲಭ್ಯ ಸಹ ಲಭ್ಯವಿದೆ.


ಇದನ್ನೂ ಓದಿ : ಮುಂದಿನ ವಾರ ಬಿಡುಗಡೆಯಾಗಲಿದೆ Samsung Galaxy S21


ಈ ಟೆಲಿಕಾಂ ವಲಯಗಳಲ್ಲಿ ಯೋಜನೆ ಸೌಲಭ್ಯ ಲಭ್ಯ: 
ಈ ರೀಚಾರ್ಜ್ ಯೋಜನೆಗೆ ಆಂಧ್ರಪ್ರದೇಶ (Andhra Pradesh), ಅಸ್ಸಾಂ, ಬಿಹಾರ, ಜಾರ್ಖಂಡ್, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ (Karnataka), ಕೇರಳ, ಕೋಲ್ಕತಾ, ಪಶ್ಚಿಮ ಬಂಗಾಳ, ಈಶಾನ್ಯ, ಮಹಾರಾಷ್ಟ್ರ, ಮಧ್ಯಪ್ರದೇಶ,  ಛತ್ತೀಸ್‌ಗಢ, ಒಡಿಶಾ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶದ ಗ್ರಾಹಕರಿಗೆ ಸೌಲಭ್ಯ ಕಲ್ಪಿಸಲಾಗಿದೆ. 


ಇದನ್ನೂ ಓದಿ : Corona Vaccine: ಲಸಿಕೆ ಹಾಕಿಸಿಕೊಳ್ಳಬೇಕೇ? Co-WIN App ಮೂಲಕ ಮೊದಲು ಹೆಸರು ನೊಂದಾಯಿಸಿ


ಇದಲ್ಲದೆ ಬಿಎಸ್ಎನ್ಎಲ್ ಇತ್ತೀಚೆಗೆ ಘರ್ ವಾಪಸಿ ಪೋಸ್ಟ್ ಪೇಯ್ಡ್ (Postpaid) ಯೋಜನೆಯನ್ನು 399 ರೂ.ಗಳಿಗೆ ಬಿಡುಗಡೆ ಮಾಡಿದೆ. ಈ ಯೋಜನೆಯಲ್ಲಿ ಗ್ರಾಹಕರು ಪ್ರತಿ ತಿಂಗಳು 70 ಜಿಬಿ ಡೇಟಾವನ್ನು ಪಡೆಯುತ್ತಿದ್ದಾರೆ. ರೋಲ್‌ಓವರ್ ಸೌಲಭ್ಯದಡಿಯಲ್ಲಿ 210 ಜಿಬಿ ಡೇಟಾವನ್ನು ಸಹ ಪಡೆಯಬಹುದು. ಇದಲ್ಲದೆ ಬಿಎಸ್ಎನ್ಎಲ್ ಬಳಕೆದಾರರಿಗೆ 525 ರೂ.ಗಳ ಪೋಸ್ಟ್ ಪೇಯ್ಡ್ ಯೋಜನೆಯನ್ನು ಸಹ ನೀಡುತ್ತಿದೆ. ಇದರಲ್ಲಿ ಗ್ರಾಹಕರಿಗೆ 85 ಜಿಬಿ ಡೇಟಾ ಸಿಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.