BSNL ಹೊಸ ಪ್ಲಾನ್ ; ಭರ್ಜರಿ ರಿಯಾಯಿತಿ ಜೊತೆಗೆ ಸಿಗಲಿದೆ ಫುಲ್ entertainment
ಬಿಎಸ್ಎನ್ಎಲ್ ತನ್ನ ಹೊಸ YuppTV ಅಪ್ಲಿಕೇಶನ್ ಅನ್ನು ಜನಪ್ರಿಯಗೊಳಿಸುವ ಸಲುವಾಗಿ ಹೊಸ ಆಫರ್ ನೀಡುತ್ತಿದೆ.. ಬಿಎಸ್‌ಎನ್‌ಎಲ್‌ನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ನೀವು ಈಗ ಬಿಎಸ್‌ಎನ್‌ಎಲ್ YuppTV ಚಂದಾದಾರಿಕೆ 199 ರ ಬದಲು ತಿಂಗಳಿಗೆ 129 ರೂಪಾಯಿಗೆ ಸಿಗಲಿದೆ.
ನವದೆಹಲಿ : ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಈಗ ತನ್ನ ಒಟಿಟಿ ಪ್ಲಾಟ್‌ಫಾರ್ಮ್ (OTT) ಅನ್ನು ಜನಪ್ರಿಯಗೊಳಿಸುವ ಭರ್ಜರಿ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಮತ್ತೊಂದು ವಿಶೇಷವೆಂದರೆ, ಈ ಯೋಜನೆಯಲ್ಲಿ ಭಾರಿ ರಿಯಾಯಿತಿ ಕೂಡಾ ನೀಡುತ್ತಿದೆ.
BSNL YuppTVಯಿಂದ ಭಾರೀ ಆಫರ್ :
ಬಿಎಸ್ಎನ್ಎಲ್ ತನ್ನ ಹೊಸ YuppTV ಅಪ್ಲಿಕೇಶನ್ ಅನ್ನು ಜನಪ್ರಿಯಗೊಳಿಸುವ ಸಲುವಾಗಿ ಹೊಸ ಆಫರ್ ನೀಡುತ್ತಿದೆ.. ಬಿಎಸ್‌ಎನ್‌ಎಲ್‌ನ (BSNL) ಅಧಿಕೃತ ವೆಬ್‌ಸೈಟ್‌ನ (Website) ಪ್ರಕಾರ, ನೀವು ಈಗ ಬಿಎಸ್‌ಎನ್‌ಎಲ್ YuppTV ಚಂದಾದಾರಿಕೆ 199 ರ ಬದಲು ತಿಂಗಳಿಗೆ 129 ರೂಪಾಯಿಗೆ ಸಿಗಲಿದೆ.
ಇದನ್ನೂ ಓದಿ : PUB-G New State Launched: ಗೂಗಲ್ ಪ್ಲೇ ಸ್ಟೋರ್‌ನಲ್ಲಿ PUB-G New State ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ವಿವರ
ಉಚಿತವಾಗಿ ಸಿಗಲಿದೆ ಜನಪ್ರಿಯ ಒಟಿಟಿಗಳು:
ಮಾಹಿತಿಯ ಪ್ರಕಾರ, ಬಿಎಸ್‌ಎನ್‌ಎಲ್ YuppTV ಪ್ಯಾಕ್‌ನಲ್ಲಿ YuppTV Premimum, ZEE5 Premium, SonlyLIV Special ಮತ್ತು Vootನ ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತಿದೆ.
BSNL YuppTVಯಲ್ಲಿ ಸಿಗಲಿದೆ ಉತ್ತಮ Content :
ಕಂಪನಿಯ ವೆಬ್‌ಸೈಟ್ ಪ್ರಕಾರ, ಈ ಹೊಸ ಯೋಜನೆಯಲ್ಲಿ, ಬಳಕೆದಾರರು 300 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು, 8000 ಕ್ಕೂ ಹೆಚ್ಚು ಚಲನಚಿತ್ರಗಳು, 500 ಕ್ಕೂ ಹೆಚ್ಚು ಟಿವಿ ಕಾರ್ಯಕ್ರಮಗಳು ಮತ್ತು ಅನೇಕ ವೆಬ್ ಸರಣಿಗಳನ್ನು (Web series) ವೀಕ್ಷಿಸಬಹುದು. ಸರ್ಕಾರಿ ಟೆಲಿಕಾಂ ಕಂಪನಿಯು ಈ ದಿನಗಳಲ್ಲಿ ತನ್ನ ಗ್ರಾಹಕರಿಗೆ ಅನೇಕ ಉತ್ತಮ ಯೋಜನೆಗಳನ್ನು ನೀಡುತ್ತಿರುವುದು ಗಮನಾರ್ಹ. ಕಂಪನಿಯ ವೆಬ್‌ಸೈಟ್ ಪ್ರಕಾರ, ಮನೆಯ ಟಿವಿ ಮತ್ತು ಮೊಬೈಲ್‌ನಲ್ಲಿ(Mobile) ಈ ಹೊಸ ಒಟಿಟಿ ಪ್ಲಾಟ್‌ಫಾರ್ಮ್ ಅನ್ನು ಆಕ್ಸಸ್ ಮಾಡಿಕೊಳ್ಳಬಹುದು. ಇದಲ್ಲದೆ, ನಿಮ್ಮ ಲ್ಯಾಪ್‌ಟಾಪ್ (Laptop) ಮತ್ತು ಡೆಸ್ಕ್‌ಟಾಪ್‌ನಲ್ಲಿಯೂ ಆಕ್ಸಸ್ ಪಡೆಯಬಹುದು.
ಇದನ್ನೂ ಓದಿ : Dish TV ಭರ್ಜರಿ ಆಫರ್..! ತಿಂಗಳು ಪೂರ್ತಿ ಸಿಗಲಿದೆ Free Entertainment
ಸರ್ಕಾರಿ ಟೆಲಿಕಾಂ ಕಂಪನಿಯು ಈಗ ತನ್ನ ಬಳಕೆದಾರರನ್ನು ಒಟಿಟಿ (OTT) ಪ್ಲಾಟ್‌ಫಾರ್ಮ್‌ಗೆ ಆಕರ್ಷಿಸುವ ಸಲುವಾಗಿ ಹೊಸ ಹೊಸ ಯೋಜನೆಗಳನ್ನು ತರುತ್ತಿದೆ. ಕಂಪನಿಯ ಈ ವಿಶೇಷ ರಿಯಾಯಿತಿಯ ಲಾಭವನ್ನು ಮೊದಲ ಮೂರು ತಿಂಗಳವರೆಗೆ ಗ್ರಾಹಕರಿಗೆ ನೀಡಲಾಗುತ್ತಿದೆ. ಯೋಜನೆ ಮುಗಿದ ನಂತರ ಬಳಕೆದಾರರು ತಿಂಗಳಿಗೆ 199 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಬಿಎಸ್ಎನ್ಎಲ್ ಬಳಕೆದಾರ ಪ್ರಕಾರ Personalized Recomendations ಕೂಡಾ ನೀಡಲಾಗುತ್ತದೆ. ಬಳಕೆದಾರರ ಅಭಿರುಚಿಗೆ ಅನುಗುಣವಾಗಿ ಕಂಟೆಂಟ್ ನೀಡಲಾಗುತ್ತದೆ.
https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.