PUB-G New State Launched: ಗೂಗಲ್ ಪ್ಲೇ ಸ್ಟೋರ್‌ನಲ್ಲಿ PUB-G New State ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ವಿವರ

ಪ್ರಪಂಚದಾದ್ಯಂತದ PUBG ಮೊಬೈಲ್ ಗೇಮ್ ಪ್ರಿಯರಿಗೆ ಉತ್ತಮ ಸುದ್ದಿ, ಆಟದ ಡೆವಲಪರ್ PUBG ಸ್ಟುಡಿಯೋ ಇತ್ತೀಚಿನ PUBG: New State ಮೊಬೈಲ್ ಗೇಮ್‌ನ ಟ್ರೈಲರ್ ಅನ್ನು ಬಿಡುಗಡೆ ಮಾಡಿದೆ

Written by - Yashaswini V | Last Updated : Feb 26, 2021, 10:54 AM IST
  • ಪ್ರಪಂಚದಾದ್ಯಂತದ PUBG ಮೊಬೈಲ್ ಗೇಮ್ ಪ್ರಿಯರಿಗೆ ಉತ್ತಮ ಸುದ್ದಿ
  • PUBG ಸ್ಟುಡಿಯೋ ಇತ್ತೀಚಿನ PUBG: New State ಮೊಬೈಲ್ ಗೇಮ್‌ನ ಟ್ರೈಲರ್ ಅನ್ನು ಬಿಡುಗಡೆ ಮಾಡಿದೆ
  • PUBG: New State ಗಾಗಿ Google Play-Store ನಲ್ಲಿ ಪೂರ್ವ-ನೋಂದಣಿ ಪ್ರಾರಂಭವಾಗಿದೆ
PUB-G New State Launched:  ಗೂಗಲ್ ಪ್ಲೇ ಸ್ಟೋರ್‌ನಲ್ಲಿ PUB-G New State ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ವಿವರ

PUB-G Mobile New State Launched: ಪ್ರಪಂಚದಾದ್ಯಂತದ PUBG ಮೊಬೈಲ್ ಗೇಮ್ ಪ್ರಿಯರಿಗೆ ಉತ್ತಮ ಸುದ್ದಿ, ಆಟದ ಡೆವಲಪರ್ PUBG ಸ್ಟುಡಿಯೋ ಇತ್ತೀಚಿನ PUBG: New State ಮೊಬೈಲ್ ಗೇಮ್‌ನ ಟ್ರೈಲರ್ ಅನ್ನು ಬಿಡುಗಡೆ ಮಾಡಿದೆ ಮತ್ತು ನೀವು ಅದನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮೊದಲೇ ನೋಂದಾಯಿಸಬಹುದು.  PUB-G ಮೊಬೈಲ್ ನ್ಯೂ ಸ್ಟೇಟ್ ಅನ್ನು ದಕ್ಷಿಣ ಕೊರಿಯಾದ ವಿಡಿಯೋ ಗೇಮ್ ಹೋಲ್ಡಿಂಗ್ ಕಂಪನಿ ಕ್ರಾಫ್ಟನ್ ರಚಿಸಿದ್ದಾರೆ.

PUBG ಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ, ಕಂಪನಿಯು ಹೀಗೆ ಹೇಳಿದೆ: "PUBG ಗಾಗಿ ಪ್ರೀ-ಬುಕಿಂಗ್ ಟ್ರೈಲರ್: NEW STATE, KRAFTON, Inc. ಮತ್ತು PUBG ಸ್ಟುಡಿಯೊದ ಹೊಸ ಕದನಕ್ಕಾಗಿ PLAYERUNKNOWN'S BATTLEGROUNDS, "ಆಟವು ಅಧಿಕೃತವಾಗಿ ಪ್ರಾರಂಭವಾಗಿದೆ ಮತ್ತು PUBG: New State ಗಾಗಿ Google Play-Store ನಲ್ಲಿ ಪೂರ್ವ-ನೋಂದಣಿ ಪ್ರಾರಂಭವಾಗಿದೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ - FAU-G Launch: FAU-G ಗೇಮ್ ಡೌನ್‌ಲೋಡ್ ಮಾಡುವುದು ಹೇಗೆ, ಇಲ್ಲಿದೆ ಮಾಹಿತಿ

ಈ ಆಟವನ್ನು PUBG ಸ್ಟುಡಿಯೋ ಸಿದ್ಧಪಡಿಸಿದೆ ಮತ್ತು ಟ್ರೈಲರ್ ಅನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇದಲ್ಲದೆ, PUBG: New State ಎಂಬ ಹೆಸರಿನಲ್ಲಿ ಹೊಸ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ರಚಿಸಲಾಗಿದೆ.

ಆಟದ ಟ್ರೈಲರ್‌ನಲ್ಲಿ ಕೆಲವು ಗೇಮ್ ಪ್ಲೇ, ಗ್ರಾಫಿಕ್ಸ್ ಮತ್ತು ಹೊಸ ಮೆಕ್ಯಾನಿಕ್ಸ್ ಅನ್ನು ಕಾಣಬಹುದು, ಇದನ್ನು 2051 ವರ್ಷಕ್ಕೆ ಸಿದ್ಧಪಡಿಸಲಾಗಿದೆ. ಈ ಆಟದಲ್ಲಿ ನೀವು 2051 ರಲ್ಲಿ ಬರುವ ವಾಹನಗಳು, ಶಸ್ತ್ರಾಸ್ತ್ರಗಳು, ಹೊಸ ನಕ್ಷೆಗಳು ಇತ್ಯಾದಿಗಳ ನೋಟವನ್ನು ಪಡೆಯುತ್ತೀರಿ.

ಇದನ್ನೂ ಓದಿ - PUBG ಮೊಬೈಲ್‌ಗೆ ಟಕ್ಕರ್ ನೀಡಿ ಹಲವು ದಾಖಲೆ ರಚಿಸಿದ Valheim

ಪ್ರಸ್ತುತ ಭಾರತದಲ್ಲಿ ಲಭ್ಯವಿಲ್ಲ :
ನೀವು ಭಾರತದಲ್ಲಿ PUBG: New State   ಆಟವನ್ನು ಮೊದಲೇ ನೋಂದಾಯಿಸಲು ಬಯಸಿದರೆ, ಅದಕ್ಕಾಗಿ ನೀವು ಕಾಯಬೇಕಾಗುತ್ತದೆ. ಈ ಆಟವು ಪ್ರಸ್ತುತ ಭಾರತದಲ್ಲಿ ಲಭ್ಯವಿಲ್ಲ. PUBG ಮೊಬೈಲ್ ನಿಷೇಧವನ್ನು ತೆಗೆದುಹಾಕಿದಾಗ ಈ ಆಟವನ್ನು ಭಾರತದಲ್ಲಿ ಪ್ರಾರಂಭಿಸಲಾಗುವುದು. ಆದರೆ ಕ್ರಾಫ್ಟನ್ ಚೀನೀ ಟೆನ್ಸೆಂಟ್ ಕಂಪನಿಯಿಂದ ದೂರ ಉಳಿದಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಶೀಘ್ರದಲ್ಲೇ ಭಾರತದಲ್ಲಿ PUBG : New State ಮೊಬೈಲ್ ಅನ್ನು ಪ್ರಾರಂಭಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News