ನವದೆಹಲಿ : ಖಾಸಗಿ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ವಿಶೇಷ ಆಫರ್ ಗಳನ್ನು ಘೋಷಿಸುತ್ತಲೇ ಇರುತ್ತವೆ. ಎಲ್ಲಾ ರೀತಿಯ ಕೊಡುಗೆಗಳನ್ನು ನೀಡುತ್ತಿವೆ. ಇದೀಗ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಈ ಎಲ್ಲಾ ಕಂಪನಿಗಳಿಗೆ ನೇರ ಸ್ಪರ್ಧೆಯನ್ನು ನೀಡುತ್ತಿದೆ. ಬಿಎಸ್‌ಎನ್‌ಎಲ್‌ ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ (Recharge plan) ಅನ್ನು ತಂದಿದೆ.  47 ರೂ. ಈ ಸಣ್ಣ ರೀಚಾರ್ಜ್ ಕೂಪನ್‌ ಅನೇಕ  ಪ್ರಯೋಜನಗಳನ್ನು ನೀಡುತ್ತಿದೆ.  


COMMERCIAL BREAK
SCROLL TO CONTINUE READING

ಬಿಎಸ್‌ಎನ್‌ಎಲ್ 47 ರೂ ರೀಚಾರ್ಜ್ ಪ್ಲಾನ್ : 
ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ 100 ರೂಪಾಯಿಗಿಂತ ಕಡಿಮೆ ಮೊತ್ತದ ಅನೇಕ ಪ್ಲಾನ್ ಗಳನ್ನು ನೀಡಿವೆ. ಆದರೆ ಬಿಎಸ್‌ಎನ್‌ಎಲ್‌ನ (BSNL) ಈ ಪ್ಲಾನ್ ಎಲ್ಲಾ ಪ್ಲಾನ್ ಗಳಿಗಿಂತ ವಿಶೇಷವಾಗಿದೆ. ಈ ಸಣ್ಣ ರಿಚಾರ್ಜ್ನಲ್ಲಿ ಅನ್ ಲಿಮಿಟೆಡ್ (Unlimited calls) ಉಚಿತ ಕರೆ ಮಾಡುವ ಸೌಲಭ್ಯವನ್ನು ನೀಡಲಾಗುತ್ತಿದೆ. ಇದಲ್ಲದೆ, ಪ್ರತಿದಿನ ಪ್ರತಿದಿನ 1 GB ಡೇಟಾದೊಂದಿಗೆ 100 ಎಸ್‌ಎಂಎಂ (SMS) ಸೌಲಭ್ಯವೂ ಇದೆ. ಈ ಅಗ್ಗದ ರೀಚಾರ್ಜ್ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ. 


ಇದನ್ನೂ ಓದಿ :  WhatsApp ಕರೆಗಳನ್ನು ರೆಕಾರ್ಡ್ ಮಾಡಲು ಇಲ್ಲಿದೆ ಸಿಂಪಲ್ ಟ್ರಿಕ್


ಜಿಯೋ (Jio) ತನ್ನ ಗ್ರಾಹಕರಿಗೆ 51 ಮತ್ತು 21 ರೂ ಪ್ಲಾನ್ ಗಳನ್ನು ನೀಡುತ್ತದೆ. ಆದರೆ, ಇವೆರಡೂ ಟಾಪ್-ಅಪ್ ಯೋಜನೆಗಳು. ಅಂದರೆ, ಇದರಲ್ಲಿ ಗ್ರಾಹಕರಿಗೆ ಯಾವುದೇ ವ್ಯಾಲಿಡಿಟಿ (Validity) ದೊರೆಯುವುದಿಲ್ಲ. ಮಾರುಕಟ್ಟೆಯಲ್ಲಿರುವ ಮತ್ತೊಂದು ಖಾಸಗಿ ಟೆಲಿಕಾಂ ಕಂಪನಿ Vi (Vodafone- Idea) ನ ಅಗ್ಗದ ಯೋಜನೆಗಳು ಕೂಡಾ ಬಿಎಸ್‌ಎನ್‌ಎಲ್‌ನ 47 ರೂಪಾಯಿ ರೀಚಾರ್ಜ್ ಪ್ಲಾನ್ ಜೊತೆ ಸ್ಪರ್ಧಿಸುವುದಿಲ್ಲ. Vi  48 ಮತ್ತು 98 ರೂಯ  ಎರಡು ಪ್ಲಾನ್ ಗಳನ್ನು ನೀಡುತ್ತದೆ. ಆದರೆ ಇವು ಬಿಸ್ ಎನ್ ಎಲ್  ನೀಡುವಷ್ಟು ಪ್ರಯೋಜನಗಳನ್ನು ನೀಡುವುದಿಲ್ಲ. ಇನ್ನು ಏರ್ಟೆಲ್ (Airtel) 79 ರೂ ಮತ್ತು 49 ರೂಪಾಯಿಗಳ ಪ್ಲಾನ್ ನೀಡುತ್ತದೆಯಾದರೂ ಇದರಲ್ಲಿ ಕೇವಲ 200MB ಡಾಟಾ ಮಾತ್ರ ಸಿಗುತ್ತದೆ. 


ಇದನ್ನೂ ಓದಿ :  Best Prepaid Plan: 100 ರೂ.ಗಿಂತ ಕಡಿಮೆ ಬೆಲೆಗೆ Airtel, Jio, Vi ರೀಚಾರ್ಜ್ ಕೂಪನ್ಸ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.