ಬಿಎಸ್ಎನ್ಎಲ್ನ ಬೊಂಬಾಟ್ ಪ್ಲಾನ್: ಅಗ್ಗದ ರೀಚಾರ್ಜ್ ಯೋಜನೆಯಲ್ಲಿ 200 ದಿನಗಳವರೆಗೆ ಫ್ರೀ ಕಾಲ್
BSNL Recharge Plan: ಬಿಎಸ್‌ಎನ್‌ಎಲ್ ಕೈಗೆಟುಕುವ ದರದ ರಿಚಾರ್ಜ್ ಪ್ಲಾನ್ ಪರಿಚಯಿಸಿದ್ದು, ಈ ಯೋಜನೆಯಲ್ಲಿ ಗ್ರಾಹಕರು ಬರೋಬ್ಬರಿ 200 ದಿನಗಳವರೆಗೆ ಉಚಿತ ಕರೆಯನ್ನು ಆನಂದಿಸಬಹುದಾಗಿದೆ.
BSNL Cheapest Plan: ಇತ್ತೀಚಿನ ದಿನಗಳಲ್ಲಿ ಬಿಎಸ್‌ಎನ್‌ಎಲ್ ಅತ್ಯಂತ ಕೈಗೆಟುಕುವ ಬೆಲೆಯ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಲು ಹೆಸರುವಾಸಿಯಾಗಿದೆ. ಹಾಗಾಗಿಯೇ, ಜಿಯೋ, ಏರ್ಟೆಲ್, ವಿಐ ಗ್ರಾಹಕರು ಬಿಎಸ್‌ಎನ್‌ಎಲ್ ಗೆ ಬದಲಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಬಿಎಸ್‌ಎನ್‌ಎಲ್ ಮತ್ತೊಂದು ಬೊಂಬಾಟ್ ಯೋಜನೆಯನ್ನು ಪರಿಚಯಿಸಿದೆ.
ಬೆಲೆ 5 ರೂ. ಗಿಂತಲೂ ಕಡಿಮೆ:-
ಬಿಎಸ್‌ಎನ್‌ಎಲ್ ದೈನಂದಿನ 5 ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ಅಗ್ಗದ ಬೆಲೆಯ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಇದರ ಬೆಲೆ ಕೇವಲ ₹ 999. ಇದರಲ್ಲಿ 200 ದಿನಗಳವರೆಗೆ ಅರ್ಥಾತ್ ಸುಮಾರು 7 ತಿಂಗಳುಗಳ ಕಾಲ ಅನಿಯಮಿತ ಕರೆ ಸೌಲಭ್ಯ ಲಭ್ಯವಿದೆ. ಆದರೆ ಇದರಲ್ಲಿ ಡೇಟಾ ಮತ್ತು ಎಸ್‌ಎಮ್‌ಎಸ್ ಸೌಲಭ್ಯ ಲಭ್ಯವಿಲ್ಲ.
ಇದನ್ನೂ ಓದಿ- iPhone ಬಳಕೆದಾರರಿಗೆ ಸರ್ಕಾರದಿಂದ ರೆಡ್ ಅಲರ್ಟ್..! ನಿರ್ಲಕ್ಷಿಸಿದ್ರೆ ಅಪಾಯ ಖಂಡಿತ...!
ಬಿಎಸ್‌ಎನ್‌ಎಲ್ ₹ 997 ರಿಚಾರ್ಜ್ ಯೋಜನೆ:
ಬಿಎಸ್‌ಎನ್‌ಎಲ್ ₹ 997 ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಅನ್ಲಿಮಿಟೆಡ್ ಕಾಲ್ ಜೊತೆಗೆ ನಿತ್ಯ 2ಜಿಬಿ ಡೇಟಾ ಮತ್ತು 100 ಎಸ್‌ಎಮ್‌ಎಸ್ ಸಿಗಲಿದೆ. ಈ ಯೋಜನೆಯ ಮಾನ್ಯತೆ 160 ದಿನಗಳವರೆಗೆ ಇರುತ್ತದೆ.
ಇದನ್ನೂ ಓದಿ- IRCTC: ಟ್ರೈನ್ ಟಿಕೆಟ್ ಬುಕ್ಕಿಂಗ್'ನಿಂದ ಫುಡ್ ಆರ್ಡರ್ ಮಾಡುವವರೆಗೆ ಎಲ್ಲವನ್ನೂ ಇದೊಂದೇ ಆಪ್'ನಲ್ಲಿ ಮಾಡಿ!
ಗಮನಾರ್ಹವಾಗಿ ಸರ್ಕಾರಿ ಟೆಲಿಕಾಂ ಕಂಪನಿಯಾದ ಬಿಎಸ್‌ಎನ್‌ಎಲ್ ದೇಶಾದ್ಯಂತ ಸುಮಾರು 50 ಸಾವಿರ ಹೊಸ 4ಜಿ ಟವರ್‌ಗಳನ್ನು ಸ್ಥಾಪಿಸುವ ಯೋಜನೆ ರೂಪಿಸಿದ್ದು, ಈಗಾಗಲೇ 41 ಸಾವಿರ 4ಜಿ ಟವರ್‌ಗಳನ್ನು ಸ್ಥಾಪಿಸಿದೆ. ಮುಂಬರುವ ವರ್ಷ ಜೂನ್ ವೇಳೆಗೆ ಎಲ್ಲರಿಗೂ ಬಿಎಸ್‌ಎನ್‌ಎಲ್ 4ಜಿ ಸೇವೆ ಲಭ್ಯವಾಗಲಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.