ಈ ದಿನ ಆರಂಭವಾಗಲಿದೆ BSNL 4G ಸೇವೆ.! ಕಂಪನಿ ನೀಡಿದ ಸ್ಪಷ್ಟ ಮಾಹಿತಿ ಇಲ್ಲಿದೆ
BSNL 4G Launch Date : ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು BSNL 2023 ರ ಆರಂಭದಲ್ಲಿ 4G ಅನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿದ್ದರು. ಆದರೆ 4G ಬಿಡುಗಡೆಯನ್ನು 2023 ರ ದ್ವಿತೀಯಾರ್ಧಕ್ಕೆ ಮುಂದೂಡಲಾಗಿದೆ ಎಂದು BSNL ಸ್ಪಷ್ಟಪಡಿಸಿದೆ.
BSNL 4G Launch Date : ಭಾರತದಲ್ಲಿ 5G ಸೇವೆ ಪ್ರಾರಂಭವಾಗಿದೆ. ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಭಾರತದ 65 ಕ್ಕೂ ಹೆಚ್ಚು ನಗರಗಳಲ್ಲಿ ತಮ್ಮ 5G ಸೇವೆಯನ್ನು ಹೊರತಂದಿವೆ. Jio, Airtel ಮತ್ತು Vodafone Idea ನ 4G ಸೇವೆಯು ಈಗಾಗಲೇ ಭಾರತದಲ್ಲಿ ರೋಲ್‌ಔಟ್ ಆಗಿದೆ. ಆದರೆ BSNL ಇನ್ನೂ 3G ಸೇವೆಯನ್ನು ನೀಡುತ್ತಿದೆ. ಶೀಘ್ರದಲ್ಲೇ BSNL ಕೂಡಾ 4G ಸೇವೆಯನ್ನು ಪ್ರಾರಂಭಿಸಲಿದೆ. BSNL 2023ರ ಆರಂಭದಲ್ಲಿ 4G ಸೇವೆಯನ್ನು ಆರಂಭಿಸಲಿದೆ ಎಂದು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು. ಆದರೆ, 2023 ರ ದ್ವಿತೀಯಾರ್ಧದಲ್ಲಿ 4G ಸೇವೆ ಆರಂಭವಾಗಲಿದೆ ಎನ್ನುವುದನ್ನು BSNL ಖಚಿತಪಡಿಸಿದೆ.
BSNL ನ 5G ಸೇವೆ ಯಾವಾಗ ಪ್ರಾರಂಭವಾಗುತ್ತದೆ? :
ಇನ್ನು BSNL ನ 5G ಸೇವೆಯನ್ನು 2024 ರಲ್ಲಿ ಪ್ರಾರಂಭಿಸಲಾಗುವುದು ಎಂದು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು ಈಗಾಗಲೇ ದೃಢಪಡಿಸಿದ್ದಾರೆ. ಆದರೆ ಇನ್ನೂ 4ಜಿ ಸೇವೆ ಆರಂಭವಾಗಿಲ್ಲ. BSNL ಸ್ಥಳೀಯ 4G ಉಪಕರಣಗಳನ್ನು ಬಳಸುತ್ತದೆ. ಇದಕ್ಕಾಗಿ ಅದು ತೇಜಸ್ ನೆಟ್‌ವರ್ಕ್‌ನಿಂದ ಸಹಾಯ ಪಡೆಯುತ್ತಿದೆ. ಸಿಸ್ಟಮ್ ಇಂಟಿಗ್ರೇಟರ್ ಅನ್ನು ಟಿಸಿಎಸ್ ಮಾಡುತ್ತಿದೆ. ದೇಸಿ 4G ಅನ್ನು ಪ್ರಾರಂಭಿಸಲು C-DOT ಸಹ BSNL ಗೆ ನೆರವಾಗುತ್ತಿದೆ.
ಇದನ್ನೂ ಓದಿ : ಸ್ಮಾರ್ಟ್‌ಫೋನ್ ರಿಸೆಟ್ ಮಾಡದೆಯೇ ಸ್ಟೋರೇಜ್ ಕ್ಲೀನ್ ಮಾಡುವ ಸಿಂಪಲ್ ಟ್ರಿಕ್ ಇಲ್ಲಿದೆ
4 ಜಿ ಸೇವೆ ಆರಂಭದಲ್ಲಿನ ವಿಳಂಬವು BSNLಗೆ ಭಾರೀ ನಷ್ಟವನ್ನು ಉಂಟುಮಾಡುವ ಸಾಧ್ಯತೆ ಇದೆ. ಇದೀಗ ಗ್ರಾಹಕರನ್ನು ಹೆಚ್ಚಿಸಲು ಕಂಪನಿ ಬಳಿ ಉತ್ತಮ ಅವಕಾಶವಿದೆ. ಏಕೆಂದರೆ ಅನೇಕ ಟೆಲಿಕಾಂ ಆಪರೇಟರ್‌ಗಳು ತಮ್ಮ ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಹೊತ್ತಿನಲ್ಲಿ ಬಿಎಸ್‌ಎನ್‌ಎಲ್ 4ಜಿ ಸೇವೆ ಆರಂಭಿಸುತ್ತಿದ್ದರೆ ಸಾಕಷ್ಟು ಲಾಭವಾಗುತ್ತಿತ್ತು. ಆದರೆ ಇದನ್ನೂ ಈಗ 2023 ರ ದ್ವಿತೀಯಾರ್ಧಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ : ಸೆಲ್ಫ್ ಬ್ಯಾಲೆನ್ಸಿಂಗ್ ತಂತ್ರಜ್ಞಾನದೊಂದಿಗೆ ಬಂದಿದೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ .! ಏನೇ ಆದರೂ ಬೀಳುವ ಭಯವಿಲ್ಲ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.