ನವದೆಹಲಿ : ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು Vi ತಮ್ಮ ಯೋಜನೆಗಳ ಬೆಲೆಯನ್ನು ಹೆಚ್ಚಿಸಿವೆ. ಸರ್ಕಾರಿ ಟೆಲಿಕಾಂ ಕಂಪನಿ BSNL ನ ಯೋಜನೆಗಳು ಹಳೆಯ ಬೆಲೆಯಲ್ಲಿ ಮಾತ್ರ ಲಭ್ಯವಿವೆ. BSNL ಈ  ಯೋಜನೆ Airtel ಮತ್ತು Vi ಯೋಜನೆಗಳಿಗಿಂತ ಉತ್ತಮವಾಗಿದೆ. ಇಂದು ನಾವು  599 ರೂ ಪ್ಲಾನ್ ಬಗ್ಗೆ ಹೇಳಲಿದ್ದೇವೆ. BSNL ನ ಈ ಯೋಜನೆಯು Airtel ಮತ್ತು Vi ನ ಇತರ ಮೂರು ಯೋಜನೆಗಳಿಗಿಂತ ಹೇಗೆ ಉತ್ತಮವಾಗಿದೆ ನೋಡೋಣ. ಜಿಯೋ 599 ರೂಗಳ ಯಾವುದೇ ಯೋಜನೆಯನ್ನು ಹೊಂದಿಲ್ಲ. ಆದರೆ ಜಿಯೋ 533 ರೂಪಾಯಿಗಳ ಯೋಜನೆಯನ್ನು ಹೊಂದಿದೆ. 


COMMERCIAL BREAK
SCROLL TO CONTINUE READING

BSNL ರೂ 599 ಯೋಜನೆ :
BSNL ನ ರೂ 599 ಯೋಜನೆಯಲ್ಲಿ, ಬಳಕೆದಾರರು 84 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ, ಬಳಕೆದಾರರು ದಿನಕ್ಕೆ 5GB ಡೇಟಾವನ್ನು ಪಡೆಯುತ್ತಾರೆ, ಯಾವುದೇ ನೆಟ್‌ವರ್ಕ್‌ ಜೊತೆ ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಯೋಜನೆಯಲ್ಲಿ  ಲಭ್ಯವಿದೆ. 


ಇದನ್ನೂ ಓದಿ : ಬೆಲೆ ಏರಿಕೆಯ ನಂತರ Jio, Airtel, Vi ಅಗ್ಗದ ಪ್ಲಾನ್ಸ್ : ₹200 ಕ್ಕಿಂತ ಕಡಿಮೆ ಉತ್ತಮ ಪ್ರಯೋಜನಗಳು


ಏರ್‌ಟೆಲ್ ರೂ 599 ಯೋಜನೆ :
Airtelನ 599 ರೂ ಯೋಜನೆಯಲ್ಲಿ ಕೇವಲ 28 ದಿನಗಳ ಮಾನ್ಯತೆ ಲಭ್ಯವಿದೆ. ಯೋಜನೆಯಲ್ಲಿ, 28 ದಿನಗಳವರೆಗೆ ಪ್ರತಿದಿನ 3GB ಡೇಟಾ ಲಭ್ಯವಿರುತ್ತದೆ. ಈ ಯೋಜನೆಯು ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ ಬರುತ್ತದೆ. ಇದಲ್ಲದೆ, ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಕರೆ ಮತ್ತು 100 SMS ಅನ್ನು ಪ್ರತಿದಿನ ನೀಡಲಾಗುತ್ತದೆ. ಹೆಚ್ಚುವರಿ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, Amazon Prime Mobile Edition ಫ್ರೀ ಟ್ರಯಲ್ , ವಿಂಕ್ ಮ್ಯೂಸಿಕ್ , ಮತ್ತು ಉಚಿತ HelloTunes ಚಂದಾದಾರಿಕೆಯೊಂದಿಗೆ ಬರುತ್ತದೆ.


Vi ನ ರೂ 599 ಯೋಜನೆ :
Vi ನ  599 ರೂ. ಯೋಜನೆಯು 70 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಗ್ರಾಹಕರು 1.5GB ಡೇಟಾವನ್ನು ಪಡೆಯುತ್ತಾರೆ. ಇದಲ್ಲದೆ ಯಾವುದೇ ನೆಟ್‌ವರ್ಕ್‌ನಲ್ಲಿ ದಿನಕ್ಕೆ ಅನಿಯಮಿತ ಕರೆ ಮತ್ತು 100 SMS ಲಭ್ಯವಿದೆ. ಬಿಂಜ್ ಆಲ್ ನೈಟ್, ವೀಕೆಂಡ್ ಡೇಟಾ ರೋಲ್‌ಓವರ್ ಮತ್ತು Vi ಮೂವೀಸ್ ಮತ್ತು ಟಿವಿಗೆ ಫ್ರೀ ಆಕ್ಸೆಸ್ ಇದೆ. 


ಇದನ್ನೂ ಓದಿ : World's first living robots: ವಿಶ್ವದ ಮೊದಲ "Living robots"ಈಗ ಸಂತಾನೋತ್ಪತ್ತಿ ಮಾಡಬಹುದು: ಅಚ್ಚರಿ ತಂದ ವಿಜ್ಞಾನಿಗಳ ಹೇಳಿಕೆ


ಜಿಯೋದ 533 ರೂ. ಯೋಜನೆ :
Jio 599 ರೂ.ಗಳ ಯಾವುದೇ ಯೋಜನೆಯನ್ನು ಹೊಂದಿಲ್ಲ. ಆದರೆ ಅದರಲ್ಲಿ 533 ರೂಪಾಯಿಗಳ ಯೋಜನೆಯಿದೆ. ಇದು 56 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಬಳಕೆದಾರರು ದಿನಕ್ಕೆ 2GB ಡೇಟಾವನ್ನು ಪಡೆಯುತ್ತಾರೆ. ಇದಲ್ಲದೆ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಲಭ್ಯವಿದೆ. ಇದರೊಂದಿಗೆ, ಜಿಯೋ ಅಪ್ಲಿಕೇಶನ್‌ಗಳಿಗೆ (jio applications) ಫ್ರೀ ಆಕ್ಸೆಸ್ ಇದೆ. ಲಭ್ಯವಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ