Flipkart Holi Dhamaka Sale: ನೀವು ಕಡಿಮೆ ಬಜೆಟ್ನಲ್ಲಿ ಐಫೋನ್ ಖರೀದಿಸಲು ಯೋಚಿಸುತ್ತಿದ್ದರೆ  ಫ್ಲಿಪ್‌ಕಾರ್ಟ್‌ನ ಹೋಳಿ ಧಮಾಕ ಸೇಲ್ ಅನ್ನು ಮಿಸ್ ಮಾಡಿಕೊಳ್ಳಬೇಡಿ. ಈ ಮಾರಾಟದಲ್ಲಿ  ಫ್ಲಿಪ್‌ಕಾರ್ಟ್‌ ಐಫೋನ್ 13ರ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ನೀವು ಐಫೋನ್ 13 ಖರೀದಿಸಲು ಬಯಸಿದರೆ,  ಫ್ಲಿಪ್‌ಕಾರ್ಟ್‌ನಲ್ಲಿ ಏನೆಲ್ಲಾ ಆಫರ್ ಲಭ್ಯವಿದೆ ಎಂದು ತಿಳಿಯಿರಿ. 


COMMERCIAL BREAK
SCROLL TO CONTINUE READING

ಫ್ಲಿಪ್‌ಕಾರ್ಟ್‌ನ ಹೋಳಿ ಧಮಾಕ ಸೇಲ್ ನಲ್ಲಿ ಐಫೋನ್ 13 ಅನ್ನು ಅರ್ಧದಷ್ಟು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಫ್ಲಿಪ್‌ಕಾರ್ಟ್‌ನ ಸೇಲ್ ನಲ್ಲಿ ಲಭ್ಯವಿರುವ ಎಲ್ಲಾ ಕೊಡುಗೆಗಳ ಪ್ರಯೋಜನಗಳನ್ನು ಪಡೆಯುವ ಮೂಲಕ ನೀವು ಇಷ್ಟು ಕಡಿಮೆ ಬೆಲೆಯಲ್ಲಿ ಐಫೋನ್ ಖರೀದಿಸಬಹುದಾಗಿದೆ.


ಇದನ್ನೂ ಓದಿ- ಈ ಬಾರಿಯ ಹೋಳಿಯಲ್ಲಿ 10,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಮನೆಗೆ ತನ್ನಿ ಎಲ್‌ಇಡಿ ಟಿವಿ 


ವಾಸ್ತವವಾಗಿ, ಫ್ಲಿಪ್‌ಕಾರ್ಟ್‌ನ ಹೋಳಿ ಧಮಾಕ ಸೇಲ್ ನಲ್ಲಿ iPhone 13 (128 GB) ಮೇಲೆ 9% ಡಿಸ್ಕೌಂಟ್ ನೀಡಲಾಗುತ್ತಿದೆ. ಇದರೊಂದಿಗೆ  69,900ರೂ. ಬೆಲೆಯ ಐಫೋನ್ ಕೇವಲ 62,999 ರೂ.ಗೆ ಲಭ್ಯವಾಗಲಿದೆ. ಈ ಮಾರಾಟದಲ್ಲಿ ಲಭ್ಯವಿರುವ ಹಲವು ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳಿಂದಾಗಿ ಬೆಲೆ ಇನ್ನಷ್ಟು ಅಗ್ಗವಾಗಲಿದೆ.


iPhone 13 ಬ್ಯಾಂಕ್ ಕೊಡುಗೆಗಳು:
ಫ್ಲಿಪ್‌ಕಾರ್ಟ್‌ನ ಹೋಳಿ ಮಾರಾಟದಲ್ಲಿ ನೀವು ಎಚ್ಡಿಎಫ್ಸಿ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ 2,000ರೂ.ಗಳ ತ್ವರಿತ ಡಿಸ್ಕೌಂಟ್ ಲಭ್ಯವಾಗಲಿದೆ. ಅದರ ನಂತರ ಫೋನ್ ಬೆಲೆ 60,999 ರೂ. ಗಳಿಗೆ ಇಳಿಯಲಿದೆ.


ಇದನ್ನೂ ಓದಿ- ಅದ್ಭುತ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗಲಿದೆ ಹೊಸ ಲ್ಯಾಪ್‌ಟಾಪ್


ಇದಲ್ಲದೆ, ಫ್ಲಿಪ್‌ಕಾರ್ಟ್‌ನ ಹೋಳಿ ಮಾರಾಟದಲ್ಲಿ ಐಫೋನ್ 13 ಖರೀದಿಯಲ್ಲಿ 23 ಸಾವಿರ ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ಕೂಡ ಲಭ್ಯವಾಗುತ್ತಿದೆ. ನೀವು ನಿಮ್ಮ ಉತ್ತಮ ಸ್ಥಿತಿಯಲ್ಲಿರುವ ಇತ್ತೀಚಿನ ಸ್ಮಾರ್ಟ್‌ಫೋನ್ ಅನ್ನು ಎಕ್ಸ್‌ಚೇಂಜ್ ಮಾಡಿಕೊಂಡರೆ ಇಷ್ಟು ರಿಯಾಯಿತಿ ಲಭ್ಯವಾಗಲಿದ್ದು ಕೇವಲ 37,999 ರೂ.ಗಳಿಗೆ ಐಫೋನ್ 13 ಅನ್ನು ಖರೀದಿಸಬಹುದಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.