Flipkart Big Savings Days Sale: ಜನಪ್ರಿಯ ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಫ್ಲಿಪ್‌ಕಾರ್ಟ್‌ ಬಿಗ್ ಸೇವಿಂಗ್ ಡೇ ಸೇಲ್‌ ಆರಂಭವಾಗಿದೆ. ಈ ರಿಪಬ್ಲಿಕ್ ಡೇ ಸೇಲ್‌ನಲ್ಲಿ ನಿಮ್ಮ ನೆಚ್ಚಿನ ಸ್ಮಾರ್ಟ್‌ಫೋನ್‌ಗಳಿಂದ ಗ್ಯಾಜೆಟ್‌ಗಳವರೆಗೆ ಬಂಪರ್ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಇದಲ್ಲದೆ, ಇತ್ತೀಚಿನ ಐಫೋನ್ ಗಳ ಮೇಲೂ ಭರ್ಜರಿ ರಿಯಾಯಿತಿಗಳನ್ನೂ ನೀಡಲಾಗುತ್ತಿದೆ. ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಐಫೋನ್ 13 ಮತ್ತು  ಐಫೋನ್ 14ರ ಮೇಲೆ ಬಂಪರ್ ಡಿಸ್ಕೌಂಟ್ ಲಭ್ಯವಾಗಲಿದೆ. 


COMMERCIAL BREAK
SCROLL TO CONTINUE READING

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಐಫೋನ್ 13 ಮತ್ತು  ಐಫೋನ್ 14ರ ಮೇಲೆ ಲಭ್ಯವಿರುವ ರಿಯಾಯಿತಿಗಳು ಯಾವುವು. ಈ ಮಾರಾಟದಲ್ಲಿ ಐಫೋನ್ ಗಳು ಎಷ್ಟು ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿವೆ ಎಂಬಿತ್ಯಾದಿ ಮಾಹಿತಿಗಳನ್ನು ತಿಳಿಯಲು ಮುಂದೆ ಓದಿ...


ಇದನ್ನೂ ಓದಿ- LeEco S1 Pro: 11 ಸಾವಿರಕ್ಕೆ ಚೀನಾದಿಂದ ಐಫೋನ್ ಹೋಲುವ ಸ್ಮಾರ್ಟ್‍ಫೋನ್ ಬಿಡುಗಡೆ​


59,499 ರೂ.ಗಳಿಗೆ ಲಭ್ಯವಾಗಲಿದೆ ಐಫೋನ್ 13:
ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ  69,900 ರೂ. ಮೌಲ್ಯದ  ಐಫೋನ್ 13 ಅನ್ನು 59,499 ರೂ.ಗಳಿಗೆ ಖರೀದಿಸಬಹುದಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ   128GB ಐಫೋನ್ 13 ಅನ್ನು10,401 ರೂ.ಗಳ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ, 1,000 ರೂ.ಗಳ ಬ್ಯಾಂಕ್ ಕಾರ್ಡ್ ಆಫರ್ ಕೂಡ ಲಭ್ಯವಿದೆ.


ಇದನ್ನೂ ಓದಿ- ಕೇವಲ 599 ರೂಪಾಯಿ ಪಾವತಿಸಿ ಖರೀದಿಸಿ Motorola ಮತ್ತು RedmiSmartphone


ಐಫೋನ್ 14ಅನ್ನು 45,999 ರೂ.ಗೆ ಖರೀದಿಸುವ ಅವಕಾಶ:
ವಾಸ್ತವವಾಗಿ, 128GB ಸಾಮರ್ಥ್ಯದ ಐಫೋನ್  14 ರ ನಿಜವಾದ ಬೆಲೆ 79,900 ಆಗಿದೆ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಇದರ ಮಾರಾಟದಲ್ಲಿ ಭರ್ಜರಿ 12,901ರೂ.ಗಳ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರೊಂದಿಗೆ ಐಫೋನ್ 14 ಅನ್ನು 66,999ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ನೀವು ಇದರಲ್ಲಿ 20,000 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಮತ್ತು ಬ್ಯಾಂಕ್ ಆಫರ್ ಕೊಡುಗೆಗಳ ಸಂಪೂರ್ಣ ಲಾಭವನ್ನು ಪಡೆಯಲು ಸಾಧ್ಯವಾದರೆ ಐಫೋನ್ 14ಅನ್ನು 45,999 ರೂ.ಗೆ ನಿಮ್ಮದಾಗಿಸಬಹುದಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.