ಫ್ಲಿಪ್‌ಕಾರ್ಟ್ ಬಂಪರ್ ಆಫರ್: iPhone 14ರಲ್ಲಿ ಸಿಗುತ್ತಿದೆ ಅತಿದೊಡ್ಡ ಡಿಸ್ಕೌಂಟ್

iPhone 14 Price Cut: ನೀವೂ ಕೂಡ ರಿಯಾಯಿತಿಯಲ್ಲಿ ಐಫೋನ್ 14 ಖರೀದಿಸಲು ಯೋಚಿಸುತ್ತಿದ್ದರೆ ಈ ಕೊಡುಗೆಯನ್ನು ಖಂಡಿತ ಮಿಸ್ ಮಾಡಿಕೊಳ್ಳಬೇಡಿ. ಪ್ರಸ್ತುತ ಫ್ಲಿಪ್‌ಕಾರ್ಟ್  ಐಫೋನ್ 14 ಖರೀದಿಯ ಮೇಲೆ ಇದುವರೆಗಿನ ಅತಿದೊಡ್ಡ ಡಿಸ್ಕೌಂಟ್ ನೀಡುತ್ತಿದೆ. ಇದರ ಅಡಿಯಲ್ಲಿ ಐಫೋನ್ 14 ಅನ್ನು 23,000 ರೂ.ಗಳ ಭರ್ಜರಿ ರಿಯಾಯಿತಿಯೊಂದಿಗೆ ಖರೀದಿಸಬಹುದಾಗಿದೆ. ಏನಿದು ಕೊಡುಗೆ, ಇಷ್ಟು ರಿಯಾಯಿತಿಯನ್ನು ಪಡೆಯಲು ಹೇಗೆ ಸಾಧ್ಯವಾಗಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ...

Written by - Yashaswini V | Last Updated : Jan 13, 2023, 08:08 AM IST
  • ಐಫೋನ್ 14 ನಲ್ಲಿ ಇದುವರೆಗೆ ಅತಿದೊಡ್ಡ ರಿಯಾಯಿತಿಯನ್ನು ನೀಡಲಾಗುತ್ತಿದೆ.
  • ಈ ಕೊಡುಗೆಯು ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗಿದೆ.
  • ನೀವು ಫ್ಲಿಪ್‌ಕಾರ್ಟ್‌ನಿಂದ ಕೇವಲ 50,900 ರೂಗಳಲ್ಲಿ iPhone 14 ಅನ್ನು ಖರೀದಿಸಬಹುದು.
ಫ್ಲಿಪ್‌ಕಾರ್ಟ್ ಬಂಪರ್ ಆಫರ್: iPhone 14ರಲ್ಲಿ ಸಿಗುತ್ತಿದೆ ಅತಿದೊಡ್ಡ ಡಿಸ್ಕೌಂಟ್  title=
iPhone 14 Price Cut

iPhone 14 Price Cut: ಹೊಸ ವರ್ಷದಲ್ಲಿ ಜನಪ್ರಿಯ ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್‌ಕಾರ್ಟ್‌ ತನ್ನ ಗ್ರಾಹಕರಿಗೆ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಬಂಪರ್ ಕೊಡುಗೆಗಳನ್ನು ನೀಡುತ್ತಿದೆ. ಅಷ್ಟೇ ಅಲ್ಲ, ನೀವು ಐಫೋನ್ 14 ಅನ್ನು ಖರೀದಿಸಲು ಯೋಚಿಸುತ್ತಿದ್ದರೆ ಫ್ಲಿಪ್‌ಕಾರ್ಟ್‌ನಲ್ಲಿ ಇದುವರೆಗಿನ ಅತಿದೊಡ್ಡ ಡಿಸ್ಕೌಂಟ್ ನೀಡಲಾಗುತ್ತಿದೆ. ಈ ಕೊಡುಗೆಯು ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗಿದ್ದು, ನೀವು ಐಫೋನ್ 14 ಖರೀದಿಯಲ್ಲಿ  23,000 ರೂ.ಗಳ ಭರ್ಜರಿ ರಿಯಾಯಿತಿಯನ್ನು ಹೇಗೆ ಪಡೆಯಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 14 ಖರೀದಿಯಲ್ಲಿ ಲಭ್ಯವಿರುವ ಕೊಡುಗೆಗಳು ಮತ್ತು ರಿಯಾಯಿತಿಗಳು:
ವಾಸ್ತವವಾಗಿ, ಐಫೋನ್ 14 ನ ಬೆಲೆ 79,900 ರೂ, ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಐಫೋನ್‌ನಲ್ಲಿ 5,910 ರೂಪಾಯಿಗಳ ಡಿಸ್ಕೌಂಟ್ ನೀಡಲಾಗುತ್ತಿದ್ದು ಫೋನ್ ಅನ್ನು 73,990ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ ನೀವು ಖರೀದಿಯಲ್ಲಿ ಲಭ್ಯವಿರುವ ಬ್ಯಾಂಕ್ ಕೊಡುಗೆ ಮತ್ತು ವಿನಿಮಯ ಕೊಡುಗೆಗಳ ಪ್ರಯೋಜನವನ್ನು ಪಡೆಯುವ ಮೂಲಕ ಇದನ್ನೂ ಇನ್ನೂ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಇದನ್ನೂ ಓದಿ- ಈ ದಿನಾಂಕದಿಂದ ಆರಂಭವಾಗಲಿದೆ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ 2023- ಏನೆಲ್ಲಾ ಕೊಡುಗೆಗಳು ಲಭ್ಯ ಇಲ್ಲಿದೆ ಮಾಹಿತಿ

ಐಫೋನ್ 14 ಖರೀದಿಯಲ್ಲಿ ಲಭ್ಯವಿರುವ ಬ್ಯಾಂಕ್ ಕೊಡುಗೆಗಳು:
ಐಫೋನ್ 14 ಅನ್ನು ಖರೀದಿಸಲು ನೀವು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿದರೆ, ನಿಮಗೆ 4,000 ರೂಪಾಯಿಗಳ ತ್ವರಿತ ರಿಯಾಯಿತಿ ಲಭ್ಯವಾಗಲಿದೆ. ಇದಲ್ಲದೆ, ನೀವು ಎಕ್ಸ್ಚೇಂಜ್ ಆಫರ್ ಪ್ರಯೋಜನವನ್ನು ಪಡೆಯುವ ಮೂಲಕ ಬೆಲೆಯನ್ನು ಇನ್ನೂ ಕಡಿತಗೊಳಿಸಬಹುದಾಗಿದೆ.

ಇದನ್ನೂ ಓದಿ- ನಿಮಗೆ ಗೊತ್ತಿಲ್ಲದಂತೆಯೇ ನಿಮ್ಮ ಫೋನ್ ರೆಕಾರ್ಡ್ ಆಗುತ್ತಿದೆಯೇ ? ಸುಲಭವಾಗಿ ಪತ್ತೆ ಹಚ್ಚಿ

ಐಫೋನ್ 14 ಖರೀದಿಯಲ್ಲಿ ವಿನಿಮಯ ಕೊಡುಗೆ:
ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 14 ಖರೀದಿಯಲ್ಲಿ 23,000 ರೂ.ಗಳ ಎಕ್ಸ್ಚೇಂಜ್ ಆಫರ್ ಕೂಡ ಲಭ್ಯವಿದೆ. ನೀವು ಇಷ್ಟು ಡಿಸ್ಕೌಂಟ್ ಅನ್ನು ಪಡೆಯಲು ಬಯಸಿದರೆ ಐಫೋನ್ ಖರೀದಿ ಸಮಯದಲ್ಲಿ ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ನೀವು ವಿನಿಮಯ ಮಾಡಿಕೊಳ್ಳಬಹುದು. ಆದರೆ, ನೆನಪಿಡಿ, ಮಾಡೆಲ್ ಇತ್ತೀಚಿನದ್ದಾಗಿದ್ದರೆ ಸ್ಮಾರ್ಟ್‌ಫೋನ್ ಉತ್ತಮ ಗುಣಮಟ್ಟದಲ್ಲಿದ್ದರೆ ಮಾತ್ರ ಈ ರಿಯಾಯಿತಿ ನಿಮಗೆ ಲಭ್ಯವಾಗಲಿದೆ. ಇದರೊಂದಿಗೆ ನೀವು 79,900 ರೂ.ಗಳ ಐಫೋನ್ 14 ಅನ್ನು 50,990ರೂ.ಗಳಿಗೆ ನಿಮ್ಮದಾಗಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News