Amazon Great Freedom Festival Sale: ಜನಪ್ರಿಯ ಇ-ಕಾಮರ್ಸ್ ವೆಬ್ಸೈಟ್ ಅಮೆಜಾನ್ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ  "ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್" ಅನ್ನು ಆರಂಭಿಸಿದೆ. ಇಂದಿನಿಂದ (ಆಗಸ್ಟ್ 06)  ಆರಂಭವಾಗಿರುವ "ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್" (Amazon Great Freedon Festival Sale) ಆಗಸ್ಟ್ 11ರವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಗೃಹೋಪಯೋಗಿ ವಸ್ತುಗಳಲ್ಲಿ ವಿಶೇಷ ಡೀಲ್‌ಗಳನ್ನು ನೀಡಲಾಗುತ್ತಿದ್ದು ಭರ್ಜರಿ ರಿಯಾಯಿತಿಯಲ್ಲಿ ಅಗತ್ಯ ಗೃಹೋಪಯೋಗಿ ಉಪಕರಣಗಳನ್ನು ಖರೀದಿಸಬಹುದಾಗಿದೆ. 


COMMERCIAL BREAK
SCROLL TO CONTINUE READING

ಈ "ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್"ನಲ್ಲಿ ( Great Freedon Festival Sale) ಸ್ಮಾರ್ಟ್ ಟಿವಿಗಳು, ರೆಫ್ರಿಜರೇಟರ್‌ಗಳು, 
ಹವಾನಿಯಂತ್ರಣಗಳು, ವಾಷಿಂಗ್ ಮೆಷಿನ್‌ಗಳ ಮೇಲೆ ಭರ್ಜರಿ ರಿಯಾಯಿತಿ ಲಭ್ಯವಿದ್ದು, ಯಾವ ವಸ್ತುಗಳ ಮೇಲೆ ಎಷ್ಟು ರಿಯಾಯಿತಿ ದೊರೆಯುತ್ತಿದೆ ಎಂದು ತಿಳಿಯೋಣ... 


ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ನಲ್ಲಿ ಸ್ಮಾರ್ಟ್ ಟಿವಿಗಳ ಮೇಲೆ 65% ರಷ್ಟು ರಿಯಾಯಿತಿ (Up to 65% off on Smart TVs in Amazon's Great Freedom Festival Sale): 
ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ನಲ್ಲಿ ಸ್ಮಾರ್ಟ್ ಟಿವಿಗಳ ಬೆಲೆಯಲ್ಲಿ (Smart Tv Price) ಬರೋಬ್ಬರಿ ಶೇ. 65ರಷ್ಟು ರಿಯಾಯಿತಿ ಲಭ್ಯವಾಗಲಿದೆ. ನೀವು ನಿಮ್ಮ ಮನೆಯಲ್ಲಿ ಮನರಂಜನಾ ಅಪ್‌ಗ್ರೇಡ್‌ಗಾಗಿ ಯೋಚಿಸಿತ್ತಿದ್ದರೆ ಈ ಡೀಲ್‌ಗಳಲ್ಲಿ ಬೆರಗುಗೊಳಿಸುವ 4K ಡಿಸ್‌ಪ್ಲೇಗಳಿಂದ ಹಿಡಿದು ಉನ್ನತ ಬ್ರಾಂಡ್‌ಗಳ ಶ್ರೇಣಿಯ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಈಗಾಗಲೇ ಹಲವು ಬ್ರಾಂಡ್ ಟಿವಿಗಳ ಬೆಲೆ ಕಡಿತಗೊಳಿಸಿರುವ ಅಮೆಜಾನ್ ಇದೀಗ ಈ ಮಾರಾಟದಲ್ಲಿ ಸೋನಿ, ಸ್ಯಾಮ್‌ಸಂಗ್, ಎಂಐ, ಎಲ್‌ಜಿ ಟಿವಿಗಳ ಖರೀದಿಯಲ್ಲಿ ಭಾರೀ ಡಿಸ್ಕೌಂಟ್ ಘೋಷಿಸಿದೆ. 


ಇದನ್ನೂ ಓದಿ- ಟೆಲಿಗ್ರಾಮ್‌ನಲ್ಲಿ ಆ ಫೈಲ್ ಕ್ಲಿಕ್ ಮಾಡಬೇಡಿ; ಸೈಬರ್ ಸಂಶೋಧಕರಿಂದ ಎಚ್ಚರಿಕೆ, ಮುನ್ನೆಚ್ಚರಿಕೆ ಕ್ರಮಗಳು ಇಲ್ಲಿವೆ!!


ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ನಲ್ಲಿ ರೆಫ್ರಿಜರೇಟರ್‌ಗಳ ಮೇಲೆ 55% ವರೆಗೆ ರಿಯಾಯಿತಿ (Up to 55% off on Refrigerators in Amazon Great Freedom Festival Sale): 
ನೀವು ನಿಮ್ಮ ಮನೆಗೆ ಹೊಸ ರೆಫ್ರಿಜರೇಟರ್‌ (Refrigerators) ಖರೀದಿಸುವ ಬಗ್ಗೆ ಚಿಂತಿಸುತ್ತಿದ್ದರೆ ಈ ಅಮೆಜಾಲ್ ಸೆಲ್ ನಲ್ಲಿ ಎಲ್‌ಜಿ, ಸ್ಯಾಮ್‌ಸಂಗ್, ಗೋಡ್ರೇಜ್, ವ್ಹಿರ್ಪೂಲ್ ನಂತಹ ಜನಪ್ರಿಯ ಬ್ರಾಂಡ್‌ಗಳ ರೆಫ್ರಿಜರೇಟರ್‌ಗಳನ್ನು ಅರ್ಧಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಎಂದರೆ, ಶೇ. 55ರಷ್ಟು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಈ ಡೀಲ್‌ನಲ್ಲಿ ಸಿಂಗಲ್ ಡೋರ್, ಡಬಲ್ ಡೋರ್, ಫ್ರೆಂಚ್ ಡೋರ್, ಸೈಡ್ ಬೈ ಸೈಡ್ ರೆಫ್ರಿಜರೇಟರ್‌ಗಳು ಲಭ್ಯವಿವೆ.  


ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ ಏರ್ ಕಂಡಿಷನರ್‌ಗಳಲ್ಲಿ 55% ವರೆಗೆ ಡಿಸ್ಕೌಂಟ್ (Up to 55% Discount on Air Conditioners in Amazon Great Freedom Festival Sale): 
ಇನ್ನೂ ನೀವು ನಿಮ್ಮ ಮನೆಗೆ ಏರ್ ಕಂಡಿಷನರ್ (Air Conditioners) ಖರೀದಿಸಲು ಇಚ್ಚಿಸುತ್ತಿದ್ದರೆ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ ಏರ್ ಕಂಡಿಷನರ್‌ಗಳಲ್ಲಿ 55% ವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ. LG, Samsung, Daikin, Voltas ಮತ್ತು ಹೆಚ್ಚಿನ ಬ್ರಾಂಡ್‌ಗಳ ಏರ್ ಕಂಡಿಷನರ್‌ಗಳಲ್ಲಿ 
55% ವರೆಗೆ ರಿಯಾಯಿತಿ ನೀಡಲಾಗುತ್ತಿದೆ.


ಇದನ್ನೂ ಓದಿ- 100 ಮಕ್ಕಳ ತಂದೆಯಂತೆ ಟೆಲಿಗ್ರಾಂ CEO !ಎಲ್ಲರೂ ಅವರ ಸ್ವಂತ ಮಕ್ಕಳು ಎನ್ನುವುದೇ ವಿಶೇಷ !12 ದೇಶದಲ್ಲಿ ಬೆಳೆಯುತ್ತಿದ್ದಾರೆಯಂತೆ ಕರುಳ ಕುಡಿಗಳು


ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ  ವಾಷಿಂಗ್ ಮೆಷಿನ್‌ಗಳ ಮೇಲೆ 60% ವರೆಗೆ ರಿಯಾಯಿತಿ (Up to 60% off on Washing Machines in Amazon Great Freedom Festival Sale): 
ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್‌ನಲ್ಲಿ ವಾಷಿಂಗ್ ಮೆಷಿನ್‌ಗಳ ಮೇಲೂ ಭಾರೀ ರಿಯಾಯಿತಿ (Huge discount on washing machines) ನೀಡಲಾಗುತ್ತಿದೆ. ಈ ಸೇಲ್‌ನಲ್ಲಿ LG, Samsung, Whirlpool ಸೇರಿದಂತೆ ಜನಪ್ರಿಯ ಬ್ರಾಂಡ್‌ಗಳ ವಾಷಿಂಗ್ ಮೆಷಿನ್‌ಗಳ ಬೆಲೆಯಲ್ಲಿ ಬರೋಬ್ಬರಿ ಶೇ. 60ರಷ್ಟು ಕಡಿತವನ್ನು ಘೋಷಿಸಲಾಗಿದೆ. ಇದರಲ್ಲಿ ಫ್ರಂಟ್-ಲೋಡ್, ಟಾಪ್-ಲೋಡ್ ಅಥವಾ ಅರೆ-ಸ್ವಯಂಚಾಲಿತ ಮೆಷಿನ್ ಹೀಗೆ ಹಲವು ಆಯ್ಕೆಗಳು ಲಭ್ಯವಿದೆ. 


ಗಮನಿಸಿ: ಈ ಎಲ್ಲಾ ಡೀಲ್‌ಗಳು ವಿಶೇಷ ಕೊಡುಗೆಗಳು, ಕ್ಯಾಶ್ ಬ್ಯಾಕ್, ಕ್ರೆಡಿಟ್-ಡೆಬಿಟ್ ಕಾರ್ಡ್ ಕೊಡುಗೆಗಳೊಂದಿಗೆ ಲಭ್ಯವಿದೆ. ವಿಶೇಷ ಕೊಡುಗೆಗಳ ಪ್ರಯೋಜನವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಹೆಚ್ಚಿನ ರಿಯಾಯಿತಿಗಳು ಲಭ್ಯವಾಗಲಿವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.