ಅಮೆಜಾನ್ ಸೇಲ್ ನಲ್ಲಿ ಈ ಫೋನ್ ಅನ್ನೇ ಜನ ಮುಗಿ ಬಿದ್ದು ಖರೀದಿಸಿದ್ದು ! ಈ ಬಾರಿ ಆಗಿದೆ ದಾಖಲೆ ಖರೀದಿ

Amazon Best Selling Phone:ಈ ಬಾರಿ ಪ್ರೈಮ್ ಡೇ ಯಲ್ಲಿ ಗ್ರಾಹಕರು ಅತಿ ಹೆಚ್ಚು ಖರೀದಿಗಳನ್ನು ಮಾಡಿದ್ದಾರೆ. 

Written by - Ranjitha R K | Last Updated : Jul 26, 2024, 02:41 PM IST
  • ಅಮೆಜಾನ್ ಇಂಡಿಯಾ ಪ್ರೈಮ್ ಡೇ 2024 ಇದುವರೆಗಿನ ಅತಿದೊಡ್ಡ ಪ್ರೈಮ್ ಡೇ ಶಾಪಿಂಗ್
  • ಎರಡು ದಿನ ದಾಖಲೆಯ ಮಟ್ಟದಲ್ಲಿ ಸರಕುಗಳ ಮಾರಾಟ
  • ಇದುವರೆಗೆ ಪ್ರೈಮ್ ಸದಸ್ಯರಿಂದ ಅತಿ ಹೆಚ್ಚು ಖರೀದಿ
ಅಮೆಜಾನ್ ಸೇಲ್ ನಲ್ಲಿ ಈ ಫೋನ್ ಅನ್ನೇ ಜನ ಮುಗಿ ಬಿದ್ದು ಖರೀದಿಸಿದ್ದು ! ಈ ಬಾರಿ ಆಗಿದೆ ದಾಖಲೆ ಖರೀದಿ  title=

Amazon Best Selling Phone : ಅಮೆಜಾನ್ ಇಂಡಿಯಾ ಪ್ರೈಮ್ ಡೇ 2024 ಇದುವರೆಗಿನ ಅತಿದೊಡ್ಡ ಪ್ರೈಮ್ ಡೇ ಶಾಪಿಂಗ್ ಕಾರ್ಯಕ್ರಮವಾಗಿದೆ.ಈ ಎರಡು ದಿನಗಳ ಈವೆಂಟ್‌ನಲ್ಲಿ ದಾಖಲೆಯ ಮಟ್ಟದಲ್ಲಿ ಸರಕುಗಳನ್ನು ಮಾರಾಟ ಮಾಡಲಾಗಿದೆ.ಅಮೆಜಾನ್ ಪ್ರಕಾರ,ಎಂಟನೇ ಪ್ರೈಮ್ ಡೇಯಲ್ಲಿ ಇದುವರೆಗೆ ಪ್ರೈಮ್ ಸದಸ್ಯರಿಂದ ಅತಿ ಹೆಚ್ಚು ಖರೀದಿಗಳನ್ನು ಮಾಡಿದ್ದಾರೆ. 2023 ರ ಪ್ರೈಮ್ ಡೇಗೆ ಹೋಲಿಸಿದರೆ ಭಾರತದಲ್ಲಿ 24% ಹೆಚ್ಚು ಪ್ರೈಮ್ ಸದಸ್ಯರು ಖರೀದಿಗಳನ್ನು ಮಾಡಿದ್ದಾರೆ.ಪ್ರೈಮ್ ಸದಸ್ಯರು ಅತ್ಯಧಿಕ  ಸಂಖ್ಯೆಯಲ್ಲಿ ಭಾಗಿಯಾಗಿ ಖರೀದಿ ಮಾಡಿರುವುದು ಇದೇ ಮೊದಲು.ಈ ಸೇಲ್ ನಲ್ಲಿ  ಐಫೋನ್ 13ಗೆ ಅತಿ ಹೆಚ್ಚು ಬೇಡಿಕೆ ಕಂಡು ಬಂದಿದೆ.

ಈ ಸೇಲ್ ನಲ್ಲಿ ವಿವಿಧ ಬ್ರಾಂಡ್ ನ ಸರಕುಗಳು ಆರಾತಕ್ಕೆ ಲಭ್ಯವಿತ್ತು. EMI, ಬ್ಯಾಂಕ್ ರಿಯಾಯಿತಿಗಳು ಮತ್ತು ವಿನಿಮಯ ಕೊಡುಗೆಗಳ ಮೂಲಕ ಕೈಗೆಟುಕುವ ದರಗಳೊಂದಿಗೆ ಪ್ರೀಮಿಯಂ ಸಾಧನಗಳನ್ನು ಬಳಕೆದಾರರು ಅಪ್ಗ್ರೇಡ್ ಮಾಡಿದ್ದಾರೆ ಎಂದು ಅಮೆಜಾನ್ ಹೇಳಿದೆ. 

ಇದನ್ನೂ ಓದಿ : ಮಳೆಗಾಲದಲ್ಲಿ ನಿಮ್ಮ ಈ ತಪ್ಪುಗಳು ಗೀಸರ್ ಸ್ಫೋಟಕ್ಕೆ ಕಾರಣವಾಗಬಹುದು, ಎಚ್ಚರ!

ಪ್ರೈಮ್ ಡೇ ಯಂದು ಗ್ರಾಹಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡಿದ್ದಾರೆ.Amazon ಪ್ರಕಾರ, iPhone 13 ಮತ್ತು OnePlus 12R ಈ ವರ್ಷ ಹೆಚ್ಚು ಮಾರಾಟವಾದ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಾಗಿವೆ. ಇದಲ್ಲದೇ, ಜನರು LG, IFB, Bosch ಮತ್ತು Haier ನಂತಹ ದೊಡ್ಡ ಬ್ರಾಂಡ್‌ಗಳಿಂದ ಪ್ರೀಮಿಯಂ ಉಪಕರಣಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿದ್ದಾರೆ. 

ಕೈಗೆಟುಕುವ ಪಾವತಿ ಆಯ್ಕೆಗಳು (NCEMI), ಬ್ಯಾಂಕ್ ರಿಯಾಯಿತಿಗಳು ಮತ್ತು ವಿನಿಮಯ ಕೊಡುಗೆಗಳನ್ನು ಒದಗಿಸುವ ಮೂಲಕ Amazon ಈ ದುಬಾರಿ ವಸ್ತುಗಳನ್ನು  ಜನ ಸುಲಭವಾಗಿ ಖರೀದಿಸುವಂತೆ ಮಾಡಿದೆ.  2024 ರ  ಪ್ರೈಮ್ ಡೇ ಯಂದು Amazon Payನಲ್ಲಿ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ಖರೀದಿಗಳು ಒರಿಮೆ ಡೇ 2023 ಕ್ಕಿಂತ ಮಾಡಿರುವ ಖರೀದಿಗಿಂತ 50% ದಷ್ಟು ಹೆಚ್ಚಾಗಿದೆ.ಈ ಪ್ರೈಮ್ ಡೇ ಯಂದು ಪ್ರೈಮ್ ಸದಸ್ಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳನ್ನು ಬುಕ್ ಮಾಡಿದ್ದಾರೆ. 

ಇದನ್ನೂ ಓದಿ : ಏರ್ ಫೈಬರ್ ಹೊಸ ಗ್ರಾಹಕರಿಗೆ ‘ಫ್ರೀಡಂ ಆಫರ್’ನಲ್ಲಿ ಶೇ 30ರಷ್ಟು ರಿಯಾಯಿತಿ ಘೋಷಿಸಿದ ಜಿಯೋ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News