iPhone 13 Pro Max Price Cut : ಜನರಲ್ಲಿ ಐಫೋನ್‌ ಕ್ರೇಜ್  ಹೆಚ್ಚುತ್ತಿದೆ. ಕಳೆದ ವರ್ಷ ಬಿಡುಗಡೆಯಾದ ಐಫೋನ್ 13 ಸರಣಿಯು ಸಾಕಷ್ಟು ಜನಪ್ರಿಯವಾಗಿದೆ. ಅದರ ಟಾಪ್ ಮಾಡೆಲ್ iPhone 13 Pro Max ನ ಬೆಲೆ ಒಂದು ಲಕ್ಷಕ್ಕೂ ಹೆಚ್ಚು. ಆದರೆ,  ಐಫೋನ್ 14 ಸರಣಿಯ ಬಿಡುಗಡೆಯ  ಮೊದಲು, ಈ ಮಾದರಿಯ ಬೆಲೆ ಇದ್ದಕ್ಕಿದ್ದಂತೆ ಗಮನಾರ್ಹವಾಗಿ ಕಡಿಮೆಯಾಗಿದೆ. ಕೇವಲ 6 ಸಾವಿರ ರೂಪಾಯಿಗೆ iPhone 13 Pro Max ಮಾರಾಟವಾಗುತ್ತಿದೆ. ಭಾರತದಲ್ಲಿ ಸುಮಾರು 1.16 ಲಕ್ಷ ಬೆಲೆಯ ಈ ಫೋನ್ ಅನ್ನು 6 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು. 


COMMERCIAL BREAK
SCROLL TO CONTINUE READING

ಇಲ್ಲಿ  6 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ iPhone 13 Pro Max : 
Refurbished iPhone 13 Pro Max ಅನ್ನು ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಎಲ್ಕೋನ್‌ನಲ್ಲಿ 5,499 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಬ್ಯಾಂಕ್ ಕೊಡುಗೆ ಅಥವಾ ವಿನಿಮಯ ಕೊಡುಗೆ ಇಲ್ಲ. ಕಂಪನಿಯು ಐಫೋನ್ 13 ಪ್ರೊ ಮ್ಯಾಕ್ಸ್ ಅನ್ನು ನೇರವಾಗಿ  ಈ ಬೆಲೆಗೆ ಮಾರಾಟ ಮಾಡುತ್ತಿದೆ. 


ಇದನ್ನೂ ಓದಿ : ರಹಸ್ಯವಾಗಿ ಉತ್ತಮ ವಿನ್ಯಾಸದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ವಿವೋ- ಇದರ ಬೆಲೆ-ವೈಶಿಷ್ಟ್ಯ ತಿಳಿಯಿರಿ


ಏನಿದು Refurbished ಫೋನ್‌ ? :
ಕೆಲವೊಮ್ಮೆ ಗ್ರಾಹಕರು ಉತ್ಪನ್ನವನ್ನು ಓಪನ್ ಕೂಡಾ ಮಾಡದೆಯೇ  ರಿಫಂಡ್ ಗಾಗಿ ಹಿಂತಿರುಗಿಸುತ್ತಾರೆ. ನಂತರ ಆ ಉತ್ಪನ್ನವನ್ನು ಹೊಸದಾಗಿ ಮಾರಾಟ ಮಾಡಲಾಗುವುದಿಲ್ಲ. ಆ ಉತ್ಪನ್ನವನ್ನು, ರಿಫರ್ ಬಿಶ್ದ್  ಪ್ರಾಡಕ್ಟ್ ಎಂದು ಮಾರಾಟ ಮಾಡಲಾಗುತ್ತದೆ. ಆದ್ದರಿಂದ ಅದರ ಬೆಲೆ ಕಡಿಮೆಯಿರುತ್ತದೆ. ಇನ್ನು ಕೆಲವೊಮ್ಮೆ ಫೋನ್ ನ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ನಲ್ಲಿ ಸಮಸ್ಯೆ ಉಂಟಾದಾಗ ಗ್ರಾಹಕರು ಅನೇಕ ಬಾರಿ ಅದನ್ನು ಹಿಂತಿರುಗಿಸುತ್ತಾರೆ. ಆ ಉತ್ಪನ್ನಗಳನ್ನು ನಂತರ ರಿಪೇರಿ ಮಾಡಲಾಗುತ್ತದೆ. ನಂತರ ಇದನ್ನು ಕೂಡಾ ರಿಫರ್ ಬಿಶ್ದ್ ಪ್ರಾಡಕ್ಟ್ ಎಂದು ಮಾರಲಾಗುತ್ತದೆ. 


ರಿಫರ್ ಬಿಶ್ದ್ ಟ್ಯಾಗ್ ಹೊಂದಿರುವ ಉತ್ಪನ್ನವನ್ನು ಮೊದಲು  ಕ್ಲೀನ್ ಮಾಡಲಾಗುತ್ತದೆ. ನಂತರ ಅದರಲ್ಲಿರುವ ಡೇಟಾವನ್ನು ತೆಗೆದುಹಾಕಲಾಗುತ್ತದೆ. ಇಷ್ಟಾದ ನಂತರ ಫೋನ್ ಗೆ ರಿಪೇರಿಯ ಅಗತ್ಯವಿದ್ದರೆ, ಅದನ್ನು ಸಹ ಮಾಡಲಾಗುತ್ತದೆ. ಇಷ್ಟಾದ ನಂತರ ಆ ಉತ್ಪನ್ನವನ್ನು ಮರುಪರೀಕ್ಷೆ ಮಾಡಿ ಪುನಃ ಪ್ಯಾಕ್ ಮಾಡಿ ಮಾರಾಟಕ್ಕೆ ಇಡಲಾಗುತ್ತದೆ. 


ಇದನ್ನೂ ಓದಿ :   iPhone 12 For Free: ಒಂದು ರೂಪಾಯಿ ಕೂಡ ಪಾವತಿಸದೇ ಐಫೋನ್ 12 ಅನ್ನು ಉಚಿತವಾಗಿ ಪಡೆಯಿರಿ !


ರಿಫರ್ ಬಿಶ್ದ್  ಫೋನ್ ಉತ್ತಮ ಸ್ಥಿತಿಯಲ್ಲಿದೆ ಎಂದು ವೆಬ್‌ಸೈಟ್‌ನಲ್ಲಿ, ಎಲ್ಕೋನ್ ಹೇಳಿಕೊಂಡಿದ್ದಾರೆ. ಆದರೆ ರಿಫರ್ ಬಿಶ್ದ್   ಫೋನ್‌ಗಳು  ಹೊಸ  ಫೋನ್‌ಗಳಿಗಿಂತ ಸ್ವಲ್ಪ ಭಿನ್ನವಾಗಿರುತ್ತವೆ.  



ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.